ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಅಂಬಿಗರ ಚೌಡಯ್ಯ

| Published : Jan 22 2025, 12:34 AM IST

ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಅಂಬಿಗರ ಚೌಡಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಿಜಶರಣ ಅಂಬಿಗರ ಚೌಡಯ್ಯ 905ನೇ ಜಯಂತಿಯನ್ನು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆಚರಿಸಲಾಯಿತು.

ಹೊಸಪೇಟೆ: ನಿಜಶರಣ ಅಂಬಿಗರ ಚೌಡಯ್ಯ 905ನೇ ಜಯಂತಿಯನ್ನು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆಚರಿಸಲಾಯಿತು.

ಶಿಕ್ಷಕ ಬಿ. ಕೊಟ್ರೇಶ್‌ ವಿಶೇಷ ಉಪನ್ಯಾಸ ನೀಡಿ, ಚೌಡಯ್ಯನವರು ಶಿವಶರಣ ಹಾಗೂ ವಚನಕಾರರು ಆಗಿದ್ದು, ಉಳಿದೆಲ್ಲ ವಚನಕಾರರಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದಾಗಿದೆ. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭಿತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ. ಚೌಡಯ್ಯನವರಲ್ಲಿ ಬಸವಣ್ಣನವರ ವೈಚಾರಿಕತೆ, ಅಲ್ಲಮಪ್ರಭುವಿನ ಅನುಭಾವಿಕ ನಿಲುವು, ಬೆರೆತು ವಿಶಿಷ್ಟ ಅನುಭವ ಮತ್ತು ಅನುಭಾವಗಳೆರಡು ಇವೆ. ಆ ಮೂಲಕ ಸಮ ಸಮಾಜ ನಿರ್ಮಾಣವಾಗಬೇಕು ಎಂದು ಚೌಡಯ್ಯನವರು ಬಯಸಿದ್ದರು ಎಂದರು.

೧೨ನೇ ಶತಮಾನದ ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸಮಸಮಾಜಕ್ಕೆ ಸೈದ್ದಾಂತಿಕ ನೆಲೆಗಟ್ಟನ್ನು ಒದಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ಅನುಭವ ಮಂಟಪದಲ್ಲಿ ಯಾರ ಮುಲಾಜಿಗೂ ಒಳಗಾಗದೆ ತನ್ನ ಅಭಿಪ್ರಾಯವನ್ನು ನೇರ, ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದರು ಎಂದರು.

ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಯೋಜನಾ ನಿರ್ದೇಶಕ ಅನ್ನದಾನಸ್ವಾಮಿ ಹಾಗೂ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ, ಸಮಾಜದ ಮುಖಂಡರಾದ ವೈ. ಯಮುನೇಶ್, ಎಸ್. ಗಾಳೆಪ್ಪ, ನಾಗರಾಜ, ಕೂಡ್ಲಿಗಿ ಫಕ್ಕೀರಪ್ಪ, ಕಂಪ್ಲಿ ಹನುಮಂತಪ್ಪ, ಸಣ್ಣೆಕ್ಕೆಪ್ಪ, ಬೆಳಗೋಡು ಹುಲುಗಪ್ಪ, ಹನುಮಂತಪ್ಪ, ಕಂಪ್ಲಿ ಅಶೋಕ, ಶ್ರೀನಿವಾಸ್ ಕಬ್ಬೇರ್, ನಾರಾಯಣಪ್ಪ, ಅಂಬಿಗರ ಮಂಜುನಾಥ, ಡಾ. ಲಕ್ಷ್ಮಣ ಕರಿಭೀಮಣ್ಣನವರ್, ಮಾರುತಿ, ಭುವನಹಳ್ಳಿ ಯರಿಸ್ವಾಮಿ, ಗೋವಿಂದಪ್ಪ ಮತ್ತಿತರರಿದ್ದರು.ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಕಂಪ್ಲಿ: ತಾಲೂಕಿನ ಇಟಗಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಯುವಕರ ಸಂಘದಿಂದ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯುತ್ಸವ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಮಣ್ಣೂರು ವೆಂಕಟೇಶ ಮಾತನಾಡಿ, ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿ ನಾನಾ ಕ್ಷೇತ್ರಗಳಲ್ಲಿ ಗಂಗಾಮತಸ್ಥರು ಹಿಂದುಳಿದಿದ್ದು, ನಮ್ಮ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು. ಇಟಗಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕು. ವೃತ್ತದಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಇದೆ ವೇಳೆ ಇಟಗಿ ಗ್ರಾಮದಲ್ಲಿನ ಅಂಬಿಗರ ಚೌಡಯ್ಯನವರ ನಾಮಫಲಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಗೌಡ್ರು ಪಂಪಾಪತಿ, ಎಳ್ಳಾರ್ತಿ ವೆಂಕಟೇಶ್, ತಿಪ್ಪೇಶ್, ಮಣ್ಣೂರು ಯಲ್ಲಪ್ಪ, ಜಂತಕಲ್ ಮಂಜುನಾಥ, ಅಯ್ಯೋದಿ ಶರಣಬಸವ, ದೊಡ್ಡವೆಂಕಟೇಶ್, ವೀರೇಶ, ಮುತ್ತುರಾಜ ಇತರರಿದ್ದರು.