ಸಾರಾಂಶ
ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡ ಕಂಪ್ಲಿ ಬಂದ್ ಯಶಸ್ಸುಗೊಂಡಿತು.
ಕಂಪ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಲ್ಲಿನ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡ ಕಂಪ್ಲಿ ಬಂದ್ ಯಶಸ್ಸುಗೊಂಡಿತು.ಮುಖಂಡರಾದ ಡಾ.ಎ.ಸಿ. ದಾನಪ್ಪ, ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಗೆ ಅವಮಾನದ ಮಾತುಗಳನ್ನಾಡಿದ್ದು ಇಡೀ ದೇಶವೇ ಇದನ್ನು ಖಂಡಿಸುತ್ತದೆ. ಕೇಂದ್ರ ಸರ್ಕಾರ ಜನರ ಮೇಲೆ ಮನುವಾದ ಹೇರುತ್ತಿದೆ. ಅಂಬೇಡ್ಕರ್ ಅವಮಾನಿಸಿದ್ದು ರಾಷ್ಟ್ರದ್ರೋಹವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಬೇಕು. ಷಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸಾಂಗತ್ರಯ ಸಂಸ್ಕೃತ ಪಾಠಶಾಲೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.ಪಟ್ಟಣದಲ್ಲಿ ಅಂಗಡಿ ಮುಗ್ಗಂಟುಗಳನ್ನು ಮುಚ್ಚಿ ಕಂಪ್ಲಿ ಬಂದ್‌ಗೆ ವರ್ತಕರು ಸಹಕರಿಸಿದರು. ಎಂದಿನಂತೆ ಬಸ್ ಸಂಚಾರ, ಶಾಲೆ, ಕಾಲೇಜು, ಬ್ಯಾಂಕ್‌ಗಳು, ಹೂ, ಹಣ್ಣು, ಹಾಲು, ಔಷಧಿ ಅಂಗಡಿಗಳು ಕಾರ್ಯನಿರ್ವಹಿಸಿದವು. ಇದೆ ವೇಳೆ ರಾಷ್ಟ್ರಪತಿ ಗೆ ಬರೆದ ಮನವಿ ಪತ್ರ ತಹಸೀಲ್ದಾರ್ ಶಿವರಾಜ್ ಶಿವಪುರಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜಿ. ರಾಮಣ್ಣ, ಎಂ.ಸಿ.ಮಾಯಪ್ಪ, ಕೆ.ಲಕ್ಷ್ಮಣ, ಸಿ.ವೆಂಕಟೇಶ, ಬಿ.ದೇವೇಂದ್ರ, ಬಿ.ನಾಗೇಂದ್ರ, ರವಿ ಮಣ್ಣೂರು, ವಸಂತರಾಜ ಕಹಳೆ, ಬಿ.ವಿ. ಗೌಡ, ಮರಿಯಣ್ಣ, ಕೆ.ಎಸ್.ಚಾಂದ್‌ಬಾಷ, ಭಟ್ಟಪ್ರಸಾದ್, ಕೊಟ್ಟೂರು ರಮೇಶ, ಮಹ್ಮದ್ ರಫಿ, ಎಚ್.ಕುಮಾರಸ್ವಾಮಿ, ಶೆಕ್ಷಾವಲಿ, ಸಾಮಿಲ್ ವಿ.ಶೇಖಪ್ಪ, ಎಂ.ಗೋಪಾಲ, ವಿ.ಗೋವಿಂದರಾಜು ಇದ್ದರು.