ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ನಿಯಮಿತ, ಹೊಸದೆಹಲಿ ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅಮಿತ ಪ್ರಭಾಕರ ಕೋರೆ ಅವರು 3 ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಹಾಮಂಡಳಿಯ 2024 - 29ರ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಫೆ.15 ರಂದು ದೆಹಲಿಯಲ್ಲಿ ಜರುಗಿದ ಚುನಾವಣೆಯಲ್ಲಿ ಕರ್ನಾಟಕದಿಂದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಅಮಿತ ಪ್ರಭಾಕರ ಕೋರೆ ಆಯ್ಕೆಯಾದರು. ಈ ಕುರಿತು ಮಹಾಮಂಡಳಿಯ ಚುನಾವಣಾ ಅಧಿಕಾರಿ ಮೇಕಲಾ ಚೈತನ್ಯ ಪ್ರಸಾದ ಇವರು ಫೆ. 15 ರಂದು ಜರುಗಿದ ಮಹಾಮಂಡಳಿಯ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.ಅಮಿತ ಕೋರೆ 2014ರಲ್ಲಿ ಪ್ರಥಮ ಬಾರಿಗೆ ಮಹಾಮಂಡಳಿಯ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿಯೂ, 2019 ರಲ್ಲಿ 2 ನೇ ಬಾರಿ ನಿರ್ದೇಶಕರಾಗಿ ಆಗಿದ್ದರು. ಸಕ್ಕರೆ ಕಾರ್ಖಾನೆಯ ತಾಂತ್ರಿಕತೆ ಹಾಗೂ ಆಡಳಿತದ ಬಗ್ಗೆ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಅವರ ಹಿಂದಿನ ಅವಧಿಯಲ್ಲಿನ ಕಾರ್ಯವೈಖರಿಯನ್ನು ಮೆಚ್ಚಿದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಕರ್ನಾಟಕ ವಿಭಾಗದಿಂದ ಈಗ 3 ನೇ ಬಾರಿ ಅವರನ್ನು ಅವಿರೋಧವಾಗಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ತಿಳಿಸಿದರು.