ಸೌಹಾರ್ದತೆ, ಶಾಂತಿ ರಕ್ಷಾಬಂಧನ ಆಚರಣೆ ಉದ್ದೇಶ: ಜಯಂತಿ ಅಕ್ಕ

| Published : Aug 13 2024, 12:47 AM IST

ಸಾರಾಂಶ

ಮಲೇಬೆನ್ನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಪೌರ ಕಾರ್ಮಿಕರಿಗೆ ರಕ್ಷಾಬಂಧನ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು.

- ಪುರಸಭೆ ಮುಖ್ಯಾಧಿಕಾರಿ, ಪೌರ ಕಾರ್ಮಿಕರಿಗೆ ರಕ್ಷಾಬಂಧನ - - - ಮಲೇಬೆನ್ನೂರು: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಹಾಗೂ ಪೌರ ಕಾರ್ಮಿಕರಿಗೆ ರಕ್ಷಾಬಂಧನ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿಧ್ಯ ವಹಿಸಿದ್ದ ಬಿ.ಕೆ. ಜಯಂತಿ ಅಕ್ಕ ಮಾತನಾಡಿ, ದೃಷ್ಠಿ ಪರಿವರ್ತನೆ ಮಾಡುವುದೇ ರಕ್ಷಾಬಂಧನವಾಗಿದೆ. ದುರ್ಗುಣ, ದುರಾಲೋಚನೆಯಿಂದ ಆಚೆ ಸರಿದು ಸೌಹಾರ್ದತೆ, ಶಾಂತಿ ಸಂದೇಶ ಸಾರುವುದನ್ನು ತಿಳಿಸುವುದಾಗಿದೆ. ಆಹಾರಕ್ಕೆ ಕ್ರಿಮಿ ಬಾರದಿರಲು, ಕೆಡದಿರಲು, ಲಕ್ಷ್ಮಣರೇಖೆ. ರಾಜ್ಯಕ್ಕೆ ಕೋಟೆ, ಮನೆಗೆ ಗೋಡೆ, ಕಾಲುಗಳಿಗೆ ಪಾದರಕ್ಷೆ ಹಾಕುವಂತೆ ಸಹೋದರಿಯರಿಗೆ ಸಹೋದರರು ರಕ್ಷಣೆಯ ಬಂಧವಾಗಿದೆ ಎಂದರು.

ಮನೆಯಲ್ಲಿ ದೇವರ ಕೊಠಡಿ ಆತ್ಮಕ್ಕೆ ಶಕ್ತಿ ನೀಡುವ ಸ್ಥಳವಾಗಿದೆ. ಸರ್ವ ಆತ್ಮಗಳು ದೇವರ ಕೋಣೆಯಲ್ಲಿ ಕುಳಿತು ಧ್ಯಾನದಿಂದ ಮನಸ್ಸನ್ನು ಚಾರ್ಜ್ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯಾಧಿಕಾರಿ ಭಜಕ್ಕನವರ್ ಬ್ರಹ್ಮಕುಮಾರಿಯರು ಪುರಸಭೆ ಸಿಬ್ಬಂದಿಗೆ ಪರಮಾತ್ಮ ಸಂದೇಶ ನೀಡಿ, ರಕ್ಷಾ ಬಂಧನ ಧಾರಣೆ ವಿಶೇಷ ಸಂದರ್ಭವಾಗಿದೆ ಎಂದರು.

ಬಿ.ಕೆ. ಸೌಭಾಗ್ಯ ಆತ್ಮ ಮತ್ತು ಪರಮಾತ್ಮನ ವ್ಯತ್ಯಾಸ ಹಾಗೂ ತರಗತಿಯ ಕೋರ್ಸ್ ತಿಳಿಸಿಕೊಟ್ಟರು. ಕೇಂದ್ರದ ಸಂಚಾಲಕಿ ಶಾಂತಾಜಿ, ರುದ್ರಯ್ಯ, ಪಂಚಣ್ಣ, ದೊಡ್ಡ ಬಸಣ್ಣ, ಆರೋಗ್ಯ ನಿರೀಕ್ಷಕರಾದ ನವೀನ್, ಶಿವರಾಜ್ ಕೂಸಗಟ್ಟಿ, ಅವಿನಾಶ್, ಪೌರ ಕಾರ್ಮಿಕರಾದ ಫತಾವುಲ್ಲಾ, ಆಂಜನೇಯ, ಕಿಜರ್‌ ಅಲಿ, ವೆಂಕಟೇಶ್ ಅನಿಸಿಕೆ ಹಂಚಿಕೊಂಡರು. ೩೦ ಪೌರ ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಗೌರವಿಸಲಾಯಿತು.

- - - -ಚಿತ್ರ೧: ಪೌರ ಕಾರ್ಮಿಕರಿಗೆ ರಕ್ಷಾಬಂಧನ ಧಾರಣೆ ಮಾಡಿ ಅಭಿನಂದಿಸಲಾಯಿತು.