ಸಾರಾಂಶ
ಮಾ.30ರಂದು ಪ್ರಾತಃಕಾಲ 3 ಗಂಟೆಗೆ ಗುಳಿಗನ ತೆರೆ, 4 ಗಂಟೆಗೆ ಕಂಡಕರ್ಣನ ತೆರೆ, 5 ಗಂಟೆಗೆ ಮುತ್ತಪ್ಪ ತಿರುವಪ್ಪನ, 6 ಗಂಟೆಗೆ ಶಾಸ್ತಪ್ಪನ ತೆರೆ, 9 ಗಂಟೆಗೆ ಪೊಟ್ಟನ್ ತೆರೆ, 10 ಗಂಟೆಗೆ ವಸೂರಿ ಮಾಲ ತೆರೆ, ಮಧ್ಯಾಹ್ನ 12 ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಮ್ಮತ್ತಿಯ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಸ್ಥಾನದ 51ನೇ ವರ್ಷದ ತೆರೆ ಮಹೋತ್ಸವ ಮಾರ್ಚ್ 29 ಮತ್ತು 30ರಂದು ವಿವಿಧ ದೇವರ ತೆರೆಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿ.ಕೆ. ರವಿ ತಿಳಿಸಿದ್ದಾರೆ.ಮಾ.29ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವ ಪ್ರಾರಂಭವಾಗುತ್ತದೆ. 10 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ನಂತರ ಮುತ್ತಪ್ಪನ ಮಲೆ ಇಳಿಸುವುದು ಹಾಗೂ ವಿವಿಧ ದೇವರು ವೆಳ್ಳಾಟಂ ನಡೆಯುತ್ತದೆ. ಮಾ.30ರಂದು ಪ್ರಾತಃಕಾಲ 3 ಗಂಟೆಗೆ ಗುಳಿಗನ ತೆರೆ, 4 ಗಂಟೆಗೆ ಕಂಡಕರ್ಣನ ತೆರೆ, 5 ಗಂಟೆಗೆ ಮುತ್ತಪ್ಪ ತಿರುವಪ್ಪನ, 6 ಗಂಟೆಗೆ ಶಾಸ್ತಪ್ಪನ ತೆರೆ, 9 ಗಂಟೆಗೆ ಪೊಟ್ಟನ್ ತೆರೆ, 10 ಗಂಟೆಗೆ ವಸೂರಿ ಮಾಲ ತೆರೆ, ಮಧ್ಯಾಹ್ನ 12 ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ. ವಾರ್ಷಿಕೋತ್ಸವದ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.