ಅಮೋಘ ಖೋಬ್ರಿ ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

| Published : Mar 26 2024, 01:02 AM IST

ಸಾರಾಂಶ

ಅಥಣಿ: ಅಥಣಿ ವಿಧಾನಸಭಾ ಮತಕ್ಷೇತ್ರದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ಅಮೋಘಸಿದ್ಧ ಖೋಬ್ರಿ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿದ್ದಾರೆ.

ಅಥಣಿ: ಅಥಣಿ ವಿಧಾನಸಭಾ ಮತಕ್ಷೇತ್ರದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ಅಮೋಘಸಿದ್ಧ ಖೋಬ್ರಿ ಅವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿದ್ದಾರೆ.

ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರು ನ್ಯಾಯವಾದಿ ಅಮೋಘಸಿದ್ಧ ಕೊಬ್ಬರಿ ಅವರಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ನ್ಯಾಯವಾದಿ ಕೆ.ಎಂ.ಕೊಬ್ಬರಿ ಸಮಾಜಮುಖಿ ಸೇವೆ, ಸಂಘಟನಾ ಚಾತುರ್ಯ, ಪಕ್ಷ ಸಂಘಟನೆಯ ಕಾರ್ಯಕ್ಷಮತೆ ಕಂಡು ಈ

ಜವಾಬ್ದಾರಿ ನೀಡಲಾಗಿದೆ. ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಕ್ಷಣ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರು ಸಹಕಾರದೊಂದಿಗೆ ಪಕ್ಷವನ್ನು ಇನ್ನಷ್ಟು ಸಂಘಟನೆ ಮತ್ತು ಬಲವರ್ಧನೆಗೆ ಕಾರೋನ್ಮುಖರಾಗಬೇಕು. ನಿಮಗೆ ಹೆಚ್ಚಿನ ಯಶಸ್ವಿ ಸಿಗಲೆಂದು ಶುಭ ಹಾರೈಸಿದರು.