ತರೀಕೆರೆತಾಂತ್ರಿಕ ಶಿಕ್ಷಣ ತರಬೇತಿ ಪಡದವರಿಗೆ ಉದ್ಯೋಗ ಅವಕಾಶ ಬಹಳಷ್ಟಿದೆ. ಸೂಕ್ತ ಕಲಿಕೆ, ಜ್ಞಾನ, ಶಿಸ್ತು, ಸಮಯ ಪಾಲನೆ, ಮಲ್ಟಿಸ್ಕಿಲ್ ಪಡೆದವರು ಉತ್ತಮ ಉದ್ಯೋಗ ಪಡೆಯಬಹುದು ಎಂದು ಇವೋಮೈನ್ಡ್ ಎಚ್.ಆರ್.ಅಲಿಯನ್ಸ್ ಅಂಡ್ ಸರ್ವೀಸ್.ನ ಡೈರಕ್ಟರ್ ಪುಷ್ಪ ಪಿ.ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತರೀಕೆರೆ
ತಾಂತ್ರಿಕ ಶಿಕ್ಷಣ ತರಬೇತಿ ಪಡದವರಿಗೆ ಉದ್ಯೋಗ ಅವಕಾಶ ಬಹಳಷ್ಟಿದೆ. ಸೂಕ್ತ ಕಲಿಕೆ, ಜ್ಞಾನ, ಶಿಸ್ತು, ಸಮಯ ಪಾಲನೆ, ಮಲ್ಟಿಸ್ಕಿಲ್ ಪಡೆದವರು ಉತ್ತಮ ಉದ್ಯೋಗ ಪಡೆಯಬಹುದು ಎಂದು ಇವೋಮೈನ್ಡ್ ಎಚ್.ಆರ್.ಅಲಿಯನ್ಸ್ ಅಂಡ್ ಸರ್ವೀಸ್.ನ ಡೈರಕ್ಟರ್ ಪುಷ್ಪ ಪಿ.ಹೇಳಿದ್ದಾರೆ.ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ಜಾಬ್ ಲಿಂಕ್ಡ್ 100 ಐಟಿಐ ಯೋಜನೆ ಹೆಚ್ಚುವರಿ ಕೌಶಲ್ಯ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಮ್ಮ ಕಂಪನಿ ಮತ್ತು ತರೀಕೆರೆ ಸಂಸ್ಥೆ ನಾವು ಒಡಂಬಡಿಕೆ ಮಾಡಿದ್ದರ ಫಲವಾಗಿ ರಾಜ್ ದೀಪ್ ಇಂಡಸ್ಟ್ರೀಸ್ ಯಿಂದ ಈಗಾಗಲೇ ಸಿಎನ್.ಸಿ. ತರಬೇತಿದಾರಿಗೆ ಒಜೆಟಿ ಪಡೆಯಲು ಆವಕಾಶ ಮಾಡಿದ್ದೇವೆ. ಇನ್ನೂ ಫಿಟರ್ ಹಾಗೂ ಕೋಪಾ ವೃತ್ತಿ ತರಬೇತಿದಾರರಿಗೂ ಮುಂದಿನ ದಿನಗಳಲ್ಲಿ ಆವಕಾಶ ಮಾಡಲಾಗುವುದು ಎಂದು ತಿಳಿಸಿದರು.ಸಂಸ್ಥೆ ಪ್ರಭಾರಿ ಪ್ರಾಚಾರ್ಯ ರವಿ ದಳವಾಯಿ ಮಾತನಾಡಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಆಧುನಿಕ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಕೌಶಲ್ಯ ನೀಡಿ ಉದ್ಯೋಗಾವಕಾಶ ಹೆಚ್ಚಿಸುವುದು ಈ ಯೋಜನೆ ಮುಖ್ಯ ಉದ್ದೇಶ. ನ. 2 ರಿಂದ ಏ. 27ರ ವರೆಗೆ ತರಬೇತಿ ನಡೆಯಲಿದ್ದು, ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರಮುಖ ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ತರಬೇತಿದಾರರಿಗೆ ಅಪ್ರೆಂಟಿಸ್ ಶಿಪ್ ಹಾಗೂ ನೇರ ಉದ್ಯೋಗ ಸಂಪರ್ಕ ಕಲ್ಪಿಸುವ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಸಂಸ್ಥೆ ತರಬೇತಿ ಅಧಿಕಾರಿ ಚಂದ್ರಶೇಖರ್ ಎಸ್. ವಿಭೂತಿ ಹಾಗೂ ಹಿರಿಯ, ಕಿರಿಯ ತರಬೇತಿ ಅಧಿಕಾರಿಗಳಾದ ಪ್ರಸನ್ನ ಕುಮಾರ್ ಸಿ. ಬಿ, ಸೈಯದ್ ಸುಹೇಲ್, ರವಿ ಪ್ರಕಾಶ್, ಸ್ವೌಮ್ಯ, ಸವಿತ ವಿ, ಸವಿತ ಎಸ್. ಜಿ, ದಂದೂರು ಪ್ರಕಾಶ್, ದಿಲೀಪ್ ಕುಮಾರ್, ಮೋಹನ್ ಕುಮಾರ್ ಭಾಗವಹಿಸಿದ್ದರು.- 5ಕೆಟಿಆರ್.ಕೆ.5ಃ
ತರೀಕೆರೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತ ಸಂಸ್ಥೆಯ ಹೆಚ್ಚುವರಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಇವೋಮೈನ್ಡ್ ಎಚ್.ಆರ್.ಅಲಿಯನ್ಸ್ ಅಂಡ್ ಸರ್ವೀಸ್.ನ ಡೈರಕ್ಟರ್ ಪುಷ್ಪ ಪಿ. ಉದ್ಘಾಟಿಸಿದರು. ಸಂಸ್ಥೆ ಪ್ರಭಾರಿ ಪ್ರಾಚಾರ್ಯ ರವಿ ದಳವಾಯಿ ಮತ್ತಿತರರು ಇದ್ದರು.-----------------