ಕೊಪ್ಪಳ:ಅಮೃತ 2.0 ಯೋಜನೆಯಲ್ಲಿ ಶೀಘ್ರ ಕುಡಿಯುವ ನೀರು ಪೂರೈಕೆ ಆಗಲಿದ್ದು, ಭಾಗ್ಯನಗರದ ಶೇ. 80 ಮನೆಗಳಿಗೆ ನೀರು ಪೂರೈಕೆ 15 ದಿನದಲ್ಲಿ ಆಗುತ್ತಿದೆ ಎಂದು ಪಪಂ ಅಧ್ಯಕ್ಷ ರಮೇಶ ಲಕ್ಷ್ಮಪ್ಪ ಹ್ಯಾಟಿ ಹೇಳಿದರು.
ಸಮೀಪದ ಭಾಗ್ಯನಗರದ ಪಪಂನ ಭಾಗ್ಯನಗರದ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾಗ್ಯನಗರದ ಎಲ್ಲ ಕಡೆ ನಲ್ಲಿಗಳ ಅಳವಡಿಕೆ ಆಗಿದೆ. ಶೀಘ್ರ ನೀರು ಪೂರೈಕೆ ಪರೀಕ್ಷೆ ಜರುಗಲಿದ್ದು, 15 ದಿನದಲ್ಲಿ ನೀರು ಪೂರೈಕೆ ಆಗಲಿದೆ. ಅಲ್ಲದೆ ರುದ್ರಭೂಮಿಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಭಾಗ್ಯನಗರದ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದು, ಜನರ ಸಮಸ್ಯೆಗೆ ಅಧಿಕಾರಿ ವರ್ಗದವರು ತಕ್ಷಣ ಸ್ಪಂದಿಸಬೇಕು. ದಾಖಲಾತಿಗಳ, ಅರ್ಜಿಗಳ ವಿಲೇವಾರಿಯಲ್ಲಿ, ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದರು.ಆ. 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಿಂದ ಮನೆ ಹಬ್ಬದಂತೆ ಆಚರಣೆ ಮಾಡೋಣ. ಸದಸ್ಯರೆಲ್ಲರೂ ಸ್ವಾತಂತ್ರ್ಯ ದಿನಾಚರಣೆ ದಿನ ಸಂಭ್ರಮದಿಂದ ಭಾಗಿಯಾಗೋಣ ಎಂದರು.
ಈ ವೇಳೆ ಆರೋಗ್ಯ ರಕ್ಷಕ ಸಮಿತಿ ರಚನೆ ಆಯಿತು. ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದಿ, ಉಪಾಧ್ಯಕ್ಷ ಹೊನ್ನೂರಸಾಬ್, ಪಪಂ ಸದಸ್ಯ ಮೋಹನ ಅರಕಲ್, ವಾಸುದೇವ ಮೇಘರಾಜ, ಪರಶುರಾಮ ನಾಯಕ, ಜಗದೀಶ ಮಾಲಗಿತ್ತಿ, ರೋಷನಲಿ ಮಂಗಳಾಪುರ, ಗವಿಸಿದ್ದಯ್ಯ ಕೆಂಭಾವಿಮಠ, ಗವಿಸಿದ್ದ ಮಗಿ ಮಾವಿನಹಳ್ಳಿ, ತುಕಾರಾಮಪ್ಪ ಗಡಾದ, ಸರಸ್ವತಿ ಕೃಷ್ಣ ಇಟ್ಟಿಂಗಿ, ಮಂಜುಳಾ ಶ್ಯಾವಿ, ಮಂಜುಳಾ ಕೃಷ್ಣ ಮ್ಯಾಗಳಮನಿ, ಕಸ್ತೂರಿ ಚಿದಾನಂದಪ್ಪ ಹಂಚಿನಮನಿ, ಪಪಂ ಸಿಬ್ಬಂದಿ ವರ್ಗ ಹಾಗೂ ಇತರರಿದ್ದರು.