ಈಕೆ ಕಳೆದ 10 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ವೈವಾಹಿಕ ಜೀವನ ಮಾಡುತ್ತಿದ್ದರು. ಸುಮ ಮನೆಯ ನಿರ್ವಹಣೆ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಕಟ್ಟಲೆಂದು 1300 ರು. ಗಳನ್ನು ಮನೆಯಲ್ಲಿ ಇಟ್ಟಿದ್ದರು. ಈ ಹಣದಲ್ಲಿ 200 ರು.ಗಳನ್ನು ಈಕೆಗೆ ಗೊತ್ತಾಗದಂತೆ ತನ್ನ ಪತಿ ಚಂದ್ರಶೇಖರ್ ಖರ್ಚು ಮಾಡಿದ್ದಾರೆ.
ದಾಬಸ್‍ಪೇಟೆ: ಸಂಸಾರದಲ್ಲಿ ಮನನೊಂದು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ಸುಮ (32) ಆತ್ಮಹತ್ಯೆಗೆ ಶರಣಾದ ಮಹಿಳೆ.ಈಕೆ ಕಳೆದ 10 ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ವೈವಾಹಿಕ ಜೀವನ ಮಾಡುತ್ತಿದ್ದರು. ಸುಮ ಮನೆಯ ನಿರ್ವಹಣೆ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಕಟ್ಟಲೆಂದು 1300 ರು. ಗಳನ್ನು ಮನೆಯಲ್ಲಿ ಇಟ್ಟಿದ್ದರು. ಈ ಹಣದಲ್ಲಿ 200 ರು.ಗಳನ್ನು ಈಕೆಗೆ ಗೊತ್ತಾಗದಂತೆ ತನ್ನ ಪತಿ ಚಂದ್ರಶೇಖರ್ ಖರ್ಚು ಮಾಡಿದ್ದಾರೆ. ಈ ಸಂಬಂಧ ಗಂಡ ಹೆಂಡತಿ ನಡುವೆ ಜಗಳವಾಗಿದ್ದು. ಮನನೊಂದ ಮಹಿಳೆ ಅತ್ತೆ ಹಾಗೂ ಗಂಡ ಮನೆಯಲ್ಲಿ ಇಲ್ಲದ ಸಮಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಊಟಕ್ಕೆಂದು ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.