ಗಾಂಧಿ ಭಾರತ ಹೆಸರಿನಲ್ಲಿ ವರ್ಷವಿಡಿ ಕಾರ್ಯಕ್ರಮ: ಡಿ.ಡಿ. ಮೋರನಾಳ

| Published : Oct 03 2024, 01:20 AM IST

ಗಾಂಧಿ ಭಾರತ ಹೆಸರಿನಲ್ಲಿ ವರ್ಷವಿಡಿ ಕಾರ್ಯಕ್ರಮ: ಡಿ.ಡಿ. ಮೋರನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಗಾಂಧಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟ್ಟಣದ ಕೋಟೆ ಭಾಗದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಗಾಂಧಿ ನಡಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಡಿಗೆಯುದ್ದಕ್ಕೂ ಗಾಂಧೀಜಿ ತತ್ವಾದರ್ಶದ ಘೋಷಣೆಗಳನ್ನು ಕೂಗುತ್ತಾ ಪುರಸಭೆ ಗಾಂಧಿ ಭವನಕ್ಕೆ ಬರಲಾಯಿತು.

ಮುಂಡರಗಿ: ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ವಿಶಿಷ್ಟ ರೀತಿಯಲ್ಲಿ ಗಾಂಧಿ ಭಾರತ ಎಂಬ ಹೆಸರಿನಲ್ಲಿ ವರ್ಷವಿಡಿ ವಿವಿಧ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಗಾಂಧಿ ನಡಿಗೆ ನೆರವೇರಿಸಲಾಯಿತು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.

ಮುಂಡರಗಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಆಯೋಜಿಸಿದ್ದ ಗಾಂಧಿ ನಡಿಗೆಯಲ್ಲಿ ಪಾಲ್ಗೊಂಡು, ಆನಂತರ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧಿ ಭಾರತ ಹೆಸರಿನಲ್ಲಿ ವರ್ಷವಿಡಿ ಸ್ವಚ್ಛತೆ, ಮಹಿಳಾ ಸಮಾನತೆ, ಅಹಿಂಸೆ, ಸಾಮಾಜಿಕ ನ್ಯಾಯದ ಕುರಿತು ಕಾರ್ಯಕ್ರಮ ನಡೆಸಲು ಪಕ್ಷ ತೀರ್ಮಾನಿಸಿದ್ದು, ಪಕ್ಷದ ಆದೇಶದ ಹಿನ್ನೆಲೆಯಲ್ಲಿ ಮುಂಡರಗಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಲಾಯಿತು. ಹೀಗೆ ವರ್ಷವಿಡಿ ವಿವಿಧ ಚಟುವಟಿಕೆ ಜರುಗಲಿವೆ ಎಂದರು.

ಪಟ್ಟಣದ ಕೋಟೆ ಭಾಗದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಗಾಂಧಿ ನಡಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಡಿಗೆಯುದ್ದಕ್ಕೂ ಗಾಂಧೀಜಿ ತತ್ವಾದರ್ಶದ ಘೋಷಣೆಗಳನ್ನು ಕೂಗುತ್ತಾ ಪುರಸಭೆ ಗಾಂಧಿ ಭವನಕ್ಕೆ ಬರಲಾಯಿತು. ವೇದಿಕೆ ಕಾರ್ಯಕ್ರಮವನ್ನು ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸರ್ಕಾರದ ವಿವಿಧ ಸಚಿವರು ಉದ್ಘಾಟಿಸಿದರು. ಅದನ್ನು ರಾಜ್ಯಾಧ್ಯಂತ ಎಲ್ಲರೂ ದೂರವಾಣಿ ಮುೂಲಕ ವೀಕ್ಷಿಸಿ, ಇಲ್ಲಿಯೂ ಅದೇ ಸಮಯಕ್ಕೆ ಕಾರ್ಯಕ್ರಮ ಉದ್ಘಾಟನೆ ಜರುಗಿಸಲಾಯಿತು.

ಹೇಮಂತಗೌಡ ಪಾಟೀಲ, ಶೋಭಾ ಮೇಟಿ, ನಾಗರಾಜ ಹೊಂಬಳಗಟ್ಟಿ, ರಾಜಾಭಕ್ಷಿ ಬೆಟಗೇರಿ, ಶೇಖರ ಜುಟ್ಲಣ್ಣವರ, ರಾಮು ಕಲಾಲ್, ಧ್ರುವಕುಮಾರ ಹೊಸಮನಿ, ಅಶೋಕ ಹುಬ್ಬಳ್ಳಿ, ಬಸವರಾಜ ದೇಸಾಯಿ, ಬಸವರಾಜ ಮೇಟಿ, ದಶರಥ ಕುರಿ, ಮುತ್ತು ಬಳ್ಳಾರಿ, ಅಂದಪ್ಪ ಬಳ್ಳಾರಿ, ಯಲ್ಲಪ್ಪ ಹೂಲಗೇರಿ, ಎಂ.ಯು. ಮಕಾಂದಾರ, ಜ್ಯೋತಿ ಕುರಿಯವರು, ಭುವನೇಶ್ವರಿ ಕಲ್ಲುಕುಟಗರ್, ಪೂಜಾ ಕಮ್ಮಾರ, ಸುರೇಶ ಮಾಗಡಿ, ದಾನೇಶ್ವರಿ ಭಜಂತ್ರಿ, ಪ್ರತಿಭಾ ಹೊಸಮನಿ, ಲಕ್ಷ್ಮಿದೇವಿ ಮಾಗಡಿ, ನಬೀಸಾಬ್ ಕೆಲೂರು, ಯಲ್ಲಪ್ಪ ಹೊಂಬಳಗಟ್ಟಿ, ವಿಶ್ವನಾಥ ಪಾಟೀಲ, ವಿನೋದ ವಡ್ಡರ, ರಾಘವೇಂದ್ರ ನೆರೇಗಲ್, ಎ.ಪಿ. ದಂಡಿನ, ಶೇಖರಾಜ ಹೊಸಮನಿ, ರಾಮು ಭಜಂತ್ರಿ, ಬಸವಂತಪ್ಪ ಹೊಸಮನಿ, ಅಡಿವೆಪ್ಪ ಛಲವಾದಿ, ಲೋಕೇಶ ದೊಡ್ಡಮನಿ, ಗೋವಿಂದರಾಜ ಸಾಹುಕಾರ, ಅಲ್ಲಾಭಕ್ಷಿ ಬನ್ನಿಗೋಳ, ಸುಲೇಮಾನ್ ಬೇವೂರ ಉಪಸ್ಥಿತರಿದ್ದರು.