ಗುಡಿಬಂಡೆಯಾದ್ಯಂತ ಬಿಸಿಲಿನ ಬೇಗೆಯಿಂದ ಪರಿತಪಿಸುತ್ತಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ರೈತರಿಗೆ ಮಾತ್ರ ಅನ್ಯಾಯವಾಗಿದೆ.
ಗುಡಿಬಂಡೆ: ಕಳೆದ ರಾತ್ರಿ ಅಕಾಲಿಕ ಮಳೆಯ ಕಾರಣ ತಾಲೂಕಿನ ವಿವಿಧ ಕಡೆ ದ್ರಾಕ್ಷಿ ಬೆಳೆ ನಾಶವಾಗಿದೆ. ದೊಡ್ಡ ಗಾತ್ರದ ಆಲಿಕಲ್ಲು ಮಳೆ ಬಿದ್ದ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆ ನೆಲಕಚ್ಚಿದ್ದು, ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗುಡಿಬಂಡೆಯಾದ್ಯಂತ ಬಿಸಿಲಿನ ಬೇಗೆಯಿಂದ ಪರಿತಪಿಸುತ್ತಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ರೈತರಿಗೆ ಮಾತ್ರ ಅನ್ಯಾಯವಾಗಿದೆ. ನಿನ್ನೆ ಮಧ್ಯಾಹ್ನದಿಂದ ಗುಡುಗು ಮಿಂಚು ಜೋರಾಗಿಯೇ ಬರುತ್ತಿತ್ತು. ಆದರೆ ಯಾರೂ ಕೂಡ ಈ ರೀತಿಯಲ್ಲಿ ಮಳೆ ಜೋರಾಗಿ ಬರುತ್ತದೆ ಎಂದು ಊಹೆ ಮಾಡಿರಲಿಲ್ಲ. ರಾತ್ರಿ ಸಮಯದಲ್ಲಿ ಮಿಂಚು, ಗುಡುಗು, ಆಲಿಕಲ್ಲು ಸಮೇತ ಮಳೆ ಜೋರಾಗಿ ಬಿದಿದ್ದೆ. ಇದರ ಪರಿಣಾಮವಾಗಿ ತಾಲೂಕಿನ ಹಲವು ಕಡೆ ದ್ರಾಕ್ಷಿ ಬೆಳೆ ನಾಶವಾಗಿದೆ. ಫಸಲು ಬಿಟ್ಟಿರುವ ದ್ರಾಕ್ಷಿ ಗೊನೆಗಳ ಸಮೇತ ನೆಲಕ್ಕೆ ಬಿದ್ದು ನಾಶವಾಗಿದೆ. ಇದರಿಂದಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಬೇಕಿದೆ. ಸಾಲ ಮಾಡಿ ಇಟ್ಟಂತಹ ಬೆಳೆ ನಾಶವಾಗಿದ್ದು, ಇದೀಗ ಸಾಲ ಹೇಗೆ ತೀರಿಸಬೇಕು ಎಂದು ರೈತ ಚಿಂತೀಗೀಡಾಗಿದ್ದಾನೆ.ಇನ್ನೂ ತಾಲೂಕಿನ ಸೋಮೇನಹಳ್ಳಿ ಹೋಬಳಿಯ ದ್ರಾಕ್ಷಿ ಬೆಳೆಗಾರ ಆದಿನಾರಾಯಣರೆಡ್ಡಿ 12 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯನ್ನು ಇಟ್ಟಿದ್ದೆ. ಇನ್ನೆನು ಕೆಲವೇ ದಿನಗಳಲ್ಲಿ ದ್ರಾಕ್ಷಿ ಹಣ್ಣಾಗಿ ಕೈಗೆ ಸೇರುತ್ತಿತ್ತು. ಅಷ್ಟರೊಳಗೆ ಈ ರೀತಿಯ ಅನಾಹುತವಾಗಿದೆ. ಸುಮಾರು ನಲವತ್ತು ಲಕ್ಷ ನನಗೆ ನಷ್ಟವಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
18ಜಿಯುಡಿ1: ತಾಲೂಕಿನ ಸೋಮೇನಹಳ್ಳಿ ಹೋಬಳಿಯ ದ್ರಾಕ್ಷಿ ಬೆಳೆಗಾರ ಆದಿನಾರಾಯಣರೆಡ್ಡಿ ರವರ ದ್ರಾಕ್ಷಿ ಬೆಳೆ ಅಕಾಲಿಕ ಮಳೆಗೆ ನಾಶವಾಗಿರುವುದು.