ಸಾರಾಂಶ
- ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಭಿತ್ತಿಪತ್ರಗಳು ಬಹಳ ಪ್ರಾಚೀನ ಕಾಲದಿಂದಲೂ ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ರಾಜ ಮಹಾರಾಜರ ಆಳ್ವಿಕೆ ಕಾಲದಲ್ಲಿ ಶಾಸನಗಳು ಭಿತ್ತಿಪತ್ರಗಳ ಕಾರ್ಯ ಮಾಡುತ್ತಿದ್ದವು. ಇಂದು ಆ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ, ಜನರಂಜಕವಾಗಿ ಮಾರ್ಪಾಡು ಮಾಡಿಕೊಂಡು ಭಿತ್ತಿಪತ್ರಗಳು ಜನಪ್ರಿಯವಾಗಿವೆ ಎಂದು ದೃಶ್ಯಕಲಾ ಮಹಾವಿದ್ಯಾಲಯದ ಅನ್ಯಯ ಕಲಾ ಬೋಧನಾ ಸಹಾಯಕ ಎಚ್.ಎಚ್. ಹರೀಶ ಹೇಳಿದರು.
ನಗರದ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ದಾವಣಗೆರೆ ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಹಾಗೂ ದೃಶ್ಯಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ನಡೆಯುತ್ತಿರುವ ಭಿತ್ತಿಚಿತ್ರ ಕಲಾ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು. ದೀರ್ಘ ಬರಹಗಳಲ್ಲಿ ಸುಲಭ, ಸುಲಲಿತ ಹಾಗೂ ಮನೋಜ್ಞವಾಗಿ ಹೇಳಲಾಗದಿರುವುದನ್ನು ಭಿತ್ತಿಪತ್ರಗಳು ತಮ್ಮ ಸುಂದರ ವಿನ್ಯಾಸ, ಆಕರ್ಷಕ, ಚಿತ್ತಾಕರ್ಷಕ ರೂಪ, ಸಂಯೋಜನೆ ಮೂಲಕ ಜನರಿಗೆ ವಿಷಯದ ಕುರಿತು ಮನವರಿಕೆ ಮಾಡಿಕೊಡಬಲ್ಲವುಗಳಾಗಿವೆ ಎಂದರು.ಹಿಂದಿ ಭಾಷಾ ಉಪನ್ಯಾಸಕಿ ಡಾ.ಸುಮಾಕಾಂತಿ ಮಾತನಾಡಿ, ಎನ್‌ಎಸ್‌ಎಸ್ ಶಿಬಿರದ ನಿಮಿತ್ತ ವಿದ್ಯಾರ್ಥಿಗಳ ಜ್ಞಾನವೃದ್ಧಿಗೂ ಪೂರಕ ಆಗಿರುವ ಇಂತಹ ಉಪನ್ಯಾಸ ಕಾರ್ಯಕ್ರಮವನ್ನು ಪ್ರಸ್ತುತ ಇಂತಹ ವಾರ್ಷಿಕ ಶಿಬಿರದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಬೋಧನಾ ಸಹಾಯಕ ರಂಗನಾಥ ಕುಲಕರ್ಣಿ ಮಾತನಾಡಿ, ಪ್ರಾಯೋಗಿಕ ಅನುಭವ ಕಲಾವಿದರಿಗೆ ಬೇಕೇಬೇಕು. ಅದುವೇ ಕಲಾ ವಿದ್ಯಾರ್ಥಿಗಳಿಗೆ ಅಸ್ತಿಭಾರ. ಹಾಗಾಗಿ ದೊಡ್ಡ ಗೋಡೆಯ ಮೇಲೆ ಚಿತ್ರ ಬಿಡಿಸುವ ಕೆಲಸ, ಈ ಶಿಬಿರದ ನೆಪದಲ್ಲಿ ಶಿಬಿರಾರ್ಥಿಗಳಿಗೆ ನೀಡಲ್ಪಟ್ಟಿರುವುದು ಒಳ್ಳೆಯ ಹೆಜ್ಜೆ ಎಂದರು.ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ ಎಂ. ಚಿಕ್ಕಪಾಟೀಲ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಸತೀಶ ಕುಮಾರ ವಲ್ಲೇಪುರೆ, ಬೋಧನಾ ಸಹಾಯಕ ಅರುಣ್ ಕುಮಾರ, ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ರವೀಂದ್ರ ಕಮ್ಮಾರ, ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಪರಶುರಾಮ ಖಟಾವಕರ್, ಡಾ. ಎಂ.ಕೆ. ಗಿರೀಶ್ ಕುಮಾರ್, ಬೋಧನಾ ಸಹಾಯಕರಾದ ದತ್ತಾತ್ರೇಯ ಎನ್. ಭಟ್ಟ, ಶಿವಶಂಕರ್ ಸುತಾರ್, ಡಿ.ಎಚ್. ಸುರೇಶ, ಕಚೇರಿಯ ಶಿವಕುಮಾರ ಅಜಗಣ್ಣವರ್, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
- - - -2ಕೆಡಿವಿಜಿ31ಃ:ದಾವಣಗೆರೆ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಭಿತ್ತಿಚಿತ್ರ ಕಲಾ ಶಿಬಿರದಲ್ಲಿ ಎಚ್.ಎಚ್. ಹರೀಶ ಇತರರು ಇದ್ದರು.