ಸಾರಾಂಶ
ಕನ್ನಡ ಪ್ರಭ ವಾರ್ತೆ ಇಳಕಲ್ಲ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ಸಹೋದರತ್ವ ಭಾವನೆಯು ಮರೀಚಿಕೆಯಾಗುತ್ತಿದೆ. ಭಾರತೀಯ ಸಂಸ್ಕೃತಿ,ಆಚರಣೆಗಳು ರಕ್ಷಾ ಬಂಧನದಂತ ಹಬ್ಬಗಳು ಭಾವನೆಗಳನ್ನು ಗಟ್ಟಿಗೊಳಿಸುತ್ತವೆ. ಪ್ರತಿ ವರ್ಷ ಬರುತ್ತಿರುವ ರಕ್ಷಾ ಬಂಧನವು ಮಕ್ಕಳಲ್ಲಿ ಆ ಭಾವನೆ ಮೂಡಿಸಲಿ ಎಂದು ಆಡಳಿತಾಧಿಕಾರಿ ಟಿ.ಎಂ.ರಾಮದುರ್ಗ ಹಾರೈಸಿದರು.
ಕನ್ನಡ ಪ್ರಭ ವಾರ್ತೆ ಇಳಕಲ್ಲ
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ಸಹೋದರತ್ವ ಭಾವನೆಯು ಮರೀಚಿಕೆಯಾಗುತ್ತಿದೆ. ಭಾರತೀಯ ಸಂಸ್ಕೃತಿ,ಆಚರಣೆಗಳು ರಕ್ಷಾ ಬಂಧನದಂತ ಹಬ್ಬಗಳು ಭಾವನೆಗಳನ್ನು ಗಟ್ಟಿಗೊಳಿಸುತ್ತವೆ. ಪ್ರತಿ ವರ್ಷ ಬರುತ್ತಿರುವ ರಕ್ಷಾ ಬಂಧನವು ಮಕ್ಕಳಲ್ಲಿ ಆ ಭಾವನೆ ಮೂಡಿಸಲಿ ಎಂದು ಆಡಳಿತಾಧಿಕಾರಿ ಟಿ.ಎಂ.ರಾಮದುರ್ಗ ಹಾರೈಸಿದರು.ನಗರದ ಗಾಯತ್ರಿ ಮಹಿಳಾ ಸಂಘ ಕನ್ನಡ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಕ್ಷಾ ಬಂಧನದ ಆಚರಣೆಯಲ್ಲಿ ಮಾತನಾಡಿದರು. ಶಿಕ್ಷಕಿ ವೇದಾ ದಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ಷಾ ಬಂಧನ ಸಹೋದರತ್ವ ಭಾವವನ್ನು ವೃದ್ದಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.ಮುಖ್ಯಗುರು ಮಲ್ಲಿಕಾರ್ಜುನ ಇಂದರಗಿ, ನುಲಿಯ ಚಂದಯ್ಯ ಜಯಂತಿಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಕ್ಷಾ ಬಂಧನದ ರಾಖಿಗಳನ್ನು ಕಟ್ಟಿ ಸಿಹಿ ತಿನ್ನಿಸಿ ರಕ್ಷಾ ಬಂಧನದ ಶುಭಾಷಯಗಳನ್ನು ಕೋರಿದರು.ನಗರದ ವಿವಿಧ ಕಚೇರಿಗಳು, ಬ್ಯಾಂಕುಗಳು, ಬಸ್ ನಿಲ್ದಾಣ, ಪೊಲೀಸ್ ಠಾಣೆ ಹಾಗೂ ಶಾಲಾ ಕಾಲೇಜುಗಳಿಗೆ ತೆರಳಿ ಅಲ್ಲಿಯ ಸಿಬ್ಬಂದಿಗೆ ರಾಖಿಗಳನ್ನು ಕಟ್ಟಿ ರಕ್ಷಾ ಬಂಧನದ ಮಹತ್ವವನ್ನು ಸಾರಿದರು.ಶಿಕ್ಷಕರಾದ ಎಂ.ಎಸ್.ಕನ್ನೂರ,ಅಂಬಣ್ಣ ಯರಗೇರಿ, ಲಕ್ಷ್ಮಿ ಪುರೋಹಿತ, ಶಿವಲೀಲಾ ಪಾಟೀಲ, ಮಾಲಾ ಕೊಳದೂರ, ಸುನಿತಾ ಮಸ್ಕಿ, ಚೌಡಮ್ಮ ಮೆದಿಕೇರಿ, ಸಿದ್ದಮ್ಮ.ಎಸ್, ಶೃತಿ ಪರದೇಶಿ, ಜಮುನಾ ಜಲದುರ್ಗ, ಸಹನಾ ಕಂಬದ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.