ಮಲಪ್ರಭಾ ಅವ್ಯವಹಾರ ಆರೋಪಕ್ಕೆ ರೋಚಕ ತಿರುವು

| Published : Sep 25 2024, 12:52 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರದ ಕುರಿತು ಕೆಸರೆರಚಾಟ ಮುಂದುವರೆದಿದ್ದು, ಈಗಿನ ಆಡಳಿತ ಮಂಡಳಿಯ ಸದಸ್ಯರೇ ಅವ್ಯವಹಾರ ನಡೆಸಿದ್ದಾರೆ ಎಂದು ಕಾರ್ಖಾನೆ ನೌಕರ ಕಾಳಪ್ಪ ಬಡಿಗೇರ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ತಾಲೂಕಿನ ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರದ ಕುರಿತು ಕೆಸರೆರಚಾಟ ಮುಂದುವರೆದಿದ್ದು, ಈಗಿನ ಆಡಳಿತ ಮಂಡಳಿಯ ಸದಸ್ಯರೇ ಅವ್ಯವಹಾರ ನಡೆಸಿದ್ದಾರೆ ಎಂದು ಕಾರ್ಖಾನೆ ನೌಕರ ಕಾಳಪ್ಪ ಬಡಿಗೇರ ಗಂಭೀರ ಆರೋಪ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆಯನ್ನು ಭಾರಿ ಲಾರಿಯಲ್ಲಿ ಹೆಚ್ಚಿಗೆ ತುಂಬಿಸಿ ಸಾಗಿಸುವಂತೆ ನಿರ್ದೇಶಕರು ನನಗೆ ತಿಳಿಸಿದ್ದರು. ಹೀಗೆ ಅಕ್ರಮವಾಗಿ ಸಕ್ಕರೆ ಮಾರಾಟ ಮಾಡಿದ ₹10 ಲಕ್ಷ ಹಾಗೂ ಮತ್ತೊಮ್ಮೆ ₹2.5 ಲಕ್ಷ ಹಣವನ್ನು ಆಡಳಿತ ಮಂಡಳಿ ನಿರ್ದೇಶಕರ ಮನೆಗೆ ಹೋಗಿ ನಾನೇ ಕೊಟ್ಟು ಬಂದಿದ್ದೇನೆ. ಮುಂದಿನ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಚುನಾವಣೆಗೆ ಹಣ ಕೊಡುವಂತೆ ಒತ್ತಾಯ ಮಾಡಿದ್ದರು. ಪ್ರತಿಯೊಬ್ಬ ನೌಕರರಿಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

ಕೆಲವು ನೌಕರರಿಂದ ಒತ್ತಾಯಪೂರ್ವಕವಾಗಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಸುಳ್ಳು ಆರೋಪ ಮಾಡಿಸಿ ಪತ್ರ ಬರೆಸಿಕೊಂಡಿದ್ದಾರೆ ಎಂದ ಅವರು, ಇತ್ತೀಚೆಗೆ ಕೆಲವು ನಿರ್ದೇಶಕರು ನನ್ನ ಮನೆಗೆ ಬಂದು ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಸುಳ್ಳು ಆರೋಪ ಮಾಡಿದರೆ ಕಾರ್ಖಾನೆಯಲ್ಲಿ ಉನ್ನತ ಹುದ್ದೆ ಹಾಗೂ ₹50 ಸಾವಿರ ಸಂಬಳ ಕೊಡುವುದಾಗಿ ಆಮಿಷ ಒಡ್ಡಿದರು. ಈ ಆಮಿಷಕ್ಕೆ ನಾನು ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು‌.--------