ಸಾರಾಂಶ
ಕೊಡಗು ಜಿಲ್ಲೆಯ ನಾಲ್ವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಮಟ್ಟದ ವಾರ್ಷಿಕ ಮಹಾಸಭೆಯಲ್ಲಿ ಕೊಡಗು ಜಿಲ್ಲೆಯ ನಾಲ್ವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಗುಡ್ಡೆ ಹೊಸೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್, ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೊಡ್ಡಮಲ್ತೆ ಗ್ರಾಮದ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮತ್ತು ಈ ಹಿಂದೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.----------------
ಇಂದಿನಿಂದ ಶ್ರೀ ಬಲಮುರಿ ಸಿದ್ದಿ ವಿನಾಯಕ ದೇವಳ ವಾರ್ಷಿಕೋತ್ಸವಕುಶಾಲನಗರ: ಇಲ್ಲಿನ ಶ್ರೀ ಬಲಮುರಿ ಸಿದ್ಧಿ ವಿನಾಯಕ ದೇವಾಲಯದ 26ನೇ ವಾರ್ಷಿಕೋತ್ಸವ ಹಾಗೂ 24ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ಫೆ.19ರಿಂದ ಎರಡು ದಿನಗಳ ಕಾಲ ನಡೆಯಲಿದೆ.19ರಂದು ಬೆಳಗ್ಗೆ ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಪೂಜೆ ಕಾರ್ಯಕ್ರಮ ನಡೆಯಲಿದೆ. 20ರಂದು ಸ್ವಾಮಿಯ ಪೂಜಾ ಮಹೋತ್ಸವ ನಡೆಯಲಿದ್ದು ಬೆಳಗ್ಗೆ 9 ಗಂಟೆಯಿಂದ ನವಗ್ರಹ ಪೂಜೆ, ಗಣಪತಿ ಹೋಮ, ದೇವಾಲಯಗಳ ಒಕ್ಕೂಟದ ಸಂಕಲ್ಪ ಮತ್ತು ಮಂಗಳಾರತಿ ಕಾರ್ಯಕ್ರಮ ನಂತರ ಮಹಾಮಂಗಳಾರತಿ ನಡೆದು ಅನ್ನ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 7 ಗಂಟೆಗೆ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷರಾದ ಡಿ.ಜೆ. ರೇಣು ಕುಮಾರ್ ತಿಳಿಸಿದ್ದಾರೆ.