ಸಾರಾಂಶ
ಎಲ್ಲರೂ ಸಮಗ್ರವಾಗಿ ಸಂವಿಧಾನದ ಆಶಯಗಳನ್ನು ಅರಿತುಕೊಂಡರೆ ಉತ್ತಮ್ಮ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಅರಸೀಕೆರೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ ತಿಳಿಸಿದರು. ಹಾರನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಚ್.ಟಿ.ಶಿವಮೂರ್ತಿ । ಸಂವಿಧಾನ ಜಾಗೃತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಸಂವಿಧಾನದ ಬಗ್ಗೆ ಹೆಮ್ಮೆ ಇರಬೇಕು. ಎಲ್ಲರೂ ಸಮಗ್ರವಾಗಿ ಸಂವಿಧಾನದ ಆಶಯಗಳನ್ನು ಅರಿತುಕೊಂಡರೆ ಉತ್ತಮ್ಮ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಅರಸೀಕೆರೆ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ ತಿಳಿಸಿದರು.ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸತೀಶ್ ಮಾತನಾಡಿ, ಸರ್ವರಿಗೂ ಸಮಾನತೆ, ವಾಕ್ ಸ್ವಾತಂತ್ರ್ಯ ಇದೆ ಎನ್ನವುದಾದರೆ ಅದಕ್ಕೆ ಡಾ.ಬಿ,ಆರ್.ಅಂಬೇಡ್ಕರ್ ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಬುನಾದಿ ಹಾಕಿ ಭಾರತ ದೇಶಕ್ಕೆ ಅರ್ಥಪೂರ್ಣ ಸಂವಿಧಾನ ನೀಡಿ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ತಿಳಿಯಬೇಕು ಎಂಬ ಉದ್ದೇಶದಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಹೇಳಿದರು,ಹಾರನಹಳ್ಳಿ ಪಿ.ಯು. ಕಾಲೇಜಿನ ಉಪನ್ಯಾಸಕಿ ದ್ರಾಕ್ಷಾಯಣಿ ಮಾತನಾಡಿ, ಸಮಾನತೆ ಬದುಕು ಸಾಗಿಸಲು ಎಲ್ಲರಿಗೂ ಮುಕ್ತ ಆವಕಾಶವನ್ನು ಸಂವಿಧಾನ ನೀಡಿದೆ. ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎಲ್ಲರೂ ಒಂದಾಗಿ ಸಂವಿಧಾನದ ಆಶಯವನ್ನು ಈಡೇರಿಸಿ ಬದುಕು ಸಾಗಿಸುವಂತೆ ಹೇಳಿದರು. ಸಂವಿಧಾನದ ಆಶಯಗಳ ಬಗ್ಗೆ ಸಮಗ್ರವಾಗಿ ಮಾತನಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ಅಂಬೇಡ್ಕರ್ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದು ಶೋಷಿತ ವರ್ಗದವರಿಗೆ, ಮಹಿಳೆಯರಿಗೆ ನೀಡಿದ ಮೀಸಲಾತಿಯಿಂದಲೇ ಇಂದು ಎಲ್ಲರೂ ಉತ್ತಮ ಸ್ಥಾನಮಾನ ಪಡೆಯಲು ಅನುಕೂಲವಾಗಿದೆ ಎಂದರುಕಾರ್ಯಕ್ರಮದಲ್ಲಿ ಪಿಡಿಒ ರಾಧಮ್ಮ, ಕಾರ್ಯದರ್ಶಿ ಚಂದ್ರಶೇಖರ್, ಪ್ರಾಂಶುಪಾಲ ಜಗನ್ನಾಥ್, ಮುಖ್ಯ ಶಿಕ್ಷಕ ಶಶಿಧರ್ ಸಿಂಗ್, ಗ್ರಾಪಂ ಉಪಾಧ್ಯಕ್ಷ ಮಲ್ಲೇಶ್, ಸದಸ್ಯ ಶಿವಕುಮಾರ್, ಸೋಮಶೇಖರ್, ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಚಿದಾನಂದ್, ಸಿದ್ದರಾಮಪ್ಪ, ಕೃಷ್ಣಪ್ಪ ಇದ್ದರು.
ಇದಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಅಂಬೇಡ್ಕರ್ ಪುತ್ಥಳಿಗೆ ಶಿವಮೂರ್ತಿ ಕರಿಂಸಾಭ್ ಶಿವು, ಇತರರು ಮಾಲಾರ್ಪಣೆ ಮಾಡಿದರು. ನಂತರ ಸಂವಿಧಾನ ಜಾಗೃತಿ ರಥ ಹಾರನಹಳ್ಳಿಗೆ ಮೆರವಣಿಗೆ ಮಾಡಿದರು. ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಸಾರ್ವಜನಿಕರು ಇದ್ದರು.ಹಾರನಹಳ್ಳಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಅಂಬೇಡ್ಕರ್ ಪುತ್ಥಳಿಗೆ ಶಿವಮೂರ್ತಿ, ಕರಿಂಸಾಭ್, ಶಿವು, ಇತರರು ಮಾಲಾರ್ಪಣೆ ಮಾಡಿದರು.