ಸಾರಾಂಶ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಉಳ್ಳವರಿಗೆ ಮಾತ್ರ ಸಾಲ । ವಿಶ್ವಾಸ ಗಳಿಸಿಕನ್ನಡಪ್ರಭ ವಾರ್ತೆ ಶಿರಾದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಪತ್ತಿನ ಸಂಘಗಳು ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತವೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನಂಜಾವಧೂತ ಸ್ವಾಮೀಜಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಪತ್ತಿನ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಪ್ರೀತಿ ಗಳಿಸಿ ಬಂಡವಾಳ ಕ್ರೂಡೀಕರಿಸಲು ಶೇರುದಾರರ ಮನವೊಲಿಸಿ ಆರ್ಥಿಕ ಪ್ರಗತಿ ಸಾಧಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉಳ್ಳವರಿಗೆ ಮಾತ್ರ ಸಾಲ ವಹಿವಾಟು ಮಾಡುವಂತಹ ಸನ್ನಿವೇಶವಿದೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡು ಎಲ್ಲರಿಗೂ ಸಮಾನ ಸಾಲು ಸೌಲಭ್ಯ ವಹಿವಾಟು ಮಾಡುವಂತಹ ಮುಕ್ತ ಅವಕಾಶ ಕಲ್ಪಿಸಬೇಕು ಎಮದರು.
ಕೋಟಿ ಕೋಟಿ ವ್ಯವಹಾರಿಕ ಸಾಲ ಪಡೆಯಲು ದಲ್ಲಾಳಿಗಳ ಮಧ್ಯಸ್ಥಿಕೆ ಆರ್ಥಿಕ ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಬ್ಯಾಂಕಿನಲ್ಲಿ ಆರ್ಥಿಕ ವಹಿವಾಟು ಮಾಡಲು ಬರುವ ಗ್ರಾಹಕರಿಗೆ ಸ್ನೇಹ ಪೂರ್ವಕ ಸೇವೆ ಮಾಡಿ, ವಿಶ್ವಾಸ ಗಳಿಸಿಕೊಂಡಾಗ ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆ ಸಾಧ್ಯವಾಗಲಿದೆ. ಸಂಘಗಳಲ್ಲಿ ಸಾಲ ಪಡೆದವರು ಸಕಾಲಕ್ಕೆ ಪಾವತಿಸಿ ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಸಹಕಾರ ಸಂಘದ ಅಧ್ಯಕ್ಷ ಹೊಸ ಮನೆ ರಂಗನಾಥ್ ಮಾತನಾಡಿ, ಸಹಕಾರ ಸಂಘ ಅಭಿವೃದ್ಧಿಗೆ, ಷೇರುದಾರರೇ ಬಲ, ಹೆಚ್ಚು ಹೆಚ್ಚು ಆರ್ಥಿಕ ವಹಿವಾಟು ನಡೆಸುವ ಮೂಲಕ ಸಂಘದ ಆರ್ಥಿಕ ಪ್ರಗತಿಗೆ ಗ್ರಾಹಕರು ಕೈಜೋಡಿಸಬೇಕು ಎಂದರು.ಸಂಘದ ಗೌರವಾಧ್ಯಕ್ಷ ಈ. ಶಿವಾನಂದ್, ಉಪಾಧ್ಯಕ್ಷ ಕೆ. ಎಮ್. ರಾಜಣ್ಣ, ನಿರ್ದೇಶಕರಾದ ಶಿವಕುಮಾರ್, ರಂಗಣ್ಣ, ಲಕ್ಷ್ಮಿಕಾಂತ್, ರಾಜಣ್ಣ, ಶ್ರೀನಿವಾಸ್, ನೇರಲ ಹಳ್ಳಪ್ಪ, ಕೆಂಗರಾಜು, ರೇಣುಕಮ್ಮ, ಬ್ಯಾಂಕ್ ಕಾರ್ಯದರ್ಶಿ ನಾಗರಾಜಯ್ಯ, ಪರಮೇಶ್ವರ್, ಚಂದ್ರಶೇಖರ್, ವಸಂತಕುಮಾರ್, ಅರುಣ ಕುಮಾರ್ ,ಸಾವಿತ್ರಿ ಗುಂಡಮ್ಮ , ಸವಿತಾ, ಛಾ ಯದೇವಿ ಮುಖಂಡರಾದ ಲಕ್ಷ್ಮೀದೇವಮ್ಮ, ವೀರ ಕ್ಯಾತಪ್ಪ, ಸಿದ್ದಗಂಗಪ್ಪ ಹಾಜರಿದ್ದರು.