ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ-ಮಾಜಿ ಸಚಿವ ಬಿಸಿಪಾ

| Published : Jun 19 2024, 01:01 AM IST

ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ-ಮಾಜಿ ಸಚಿವ ಬಿಸಿಪಾ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರ ತಾಲೂಕು ಸರ್ವಜ್ಞ ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿರುವ ಹಾಗೂ ತಾಲೂಕಿನ ಗ್ರಾಮದ ೩೩೫ ಕೋಟಿ ರು.ವೆಚ್ಚದ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸದಿರುವ ಬಗ್ಗೆ ಡಿ.ಕೆ. ಶಿವಕುಮಾರ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಪತ್ರ ಬರೆಯಲಾಗಿದ್ದು, ಶೀಘ್ರವೇ ಯೋಜನೆಗಳನ್ನು ಸರ್ಕಾರ ಪೂರ್ಣಗೊಳಿಸಿ ತಾಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕು.

ಹಿರೇಕೆರೂರು: ಹಿರೇಕೆರೂರ ತಾಲೂಕು ಸರ್ವಜ್ಞ ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿರುವ ಹಾಗೂ ತಾಲೂಕಿನ ಗ್ರಾಮದ ೩೩೫ ಕೋಟಿ ರು.ವೆಚ್ಚದ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸದಿರುವ ಬಗ್ಗೆ ಡಿ.ಕೆ. ಶಿವಕುಮಾರ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಪತ್ರ ಬರೆಯಲಾಗಿದ್ದು, ಶೀಘ್ರವೇ ಯೋಜನೆಗಳನ್ನು ಸರ್ಕಾರ ಪೂರ್ಣಗೊಳಿಸಿ ತಾಲೂಕಿನ ಜನತೆಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿ ಕಾಲ ಮುಷ್ಕರವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.ಪಟ್ಟಣದ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿರೇಕೆರೂರು ತಾಲೂಕಿಗೆ ೨೦೧೯-೨೦ರಲ್ಲಿ ೯೫ ಕೆರೆ ತುಂಬಿಸುವಂತಹ ೧೮೫ ಕೋಟಿ ರು. ವೆಚ್ಚದ ಯೋಜನೆ ಮಂಜೂರಾಗಿ ಕೆಲಸ ಪ್ರಾರಂಭವಾಗಿದ್ದು, ೨೦೨೩ರಲ್ಲಿ ಈ ಯೋಜನೆಯನ್ನು ಮುಕ್ತಾಯಗೊಳಿಸಿ ಕೆರೆ ತುಂಬಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರೂ ೨೦೨೩-೨೪ರಲ್ಲಿ ಬರಗಾಲ ಬಂದಿದ್ದರೂ ಈ ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡಿದ್ದರೆ ರೈತರು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಸರ್ಕಾರದ ವಿಳಂಬ ಧೋರಣೆಯಿಂದ ಇದು ಈವರೆಗೂ ಯೋಜನೆ ಪೂರ್ಣಗೊಂಡಿರುವುದಿಲ್ಲ. ಈ ವರ್ಷವೂ ಸಹ ಇದರಿಂದ ರೈತರಿಗೆ ಬಹಳಷ್ಟು ಅನಾನುಕೂಲವಾಗುತ್ತದೆ ಅಲ್ಲದೆ ಮೇಲೆ ಕಾಣಿಸಿದ ಉಳಿದ ಯೋಜನೆಗಳು ಪೂರ್ಣಗೊಂಡು ಲೋಕಾರ್ಪಣೆ ಆಗಿದ್ದರು ಸಹ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿಲ್ಲ. ಇದು ದೇವರು ವರ ಕೊಟ್ಟರೂ ಸಹ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ. ಕೂಡಲೇ ಸರ್ವಜ್ಞ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಪೂರ್ಣಗೊಂಡ ಯೋಜನೆಗಳಿಂದ ಕೆರೆಗಳನ್ನು ತುಂಬಿಸದೆ ಹೋದರೆ ಅನಿರ್ದಿಷ್ಟಾವಧಿ ಕಾಲ ಮುಷ್ಕರವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಕಾರಣ ೧೫ ದಿನದೊಳಗೆ ಸಮರ್ಪಕವಾದ ಕ್ರಮ ಕೈಗೊಳ್ಳಬೇಕು ಹಾಗೂ ೨೦೨೨ ೨೩ನೇ ಸಾಲಿನ ಹಿರೇಕೆರೂರು ತಾಲೂಕಿನ ೯೬ ಗ್ರಾಮಗಳಿಗೆ ತುಂಗಭದ್ರ ನದಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸುವ ಬಗ್ಗೆ ಯೋಜನೆ ಪ್ರಾರಂಭವಾಗಿದ್ದು ಇದುವರೆಗೂ ಮುಕ್ತಾಯವಾಗಿರುವುದಿಲ್ಲ ಹಾಗೂ ತಾಲೂಕಿನಲ್ಲಿ ಅತಿ ಹೆಚ್ಚು ಕುಡಿಯುವ ನೀರಿನಲ್ಲಿ ಫ್ಲೋರೈಡ್ ಇರುವುದರಿಂದ ಡೆಂಘೀ ಇತರೆ ಸಾಂಕ್ರಾಮಿಕ ರೋಗಗಳು ಆಕ್ರಮಿಸುತ್ತಿದ್ದು, ಕೂಡಲೇ ಈ ಯೋಜನೆ ಪೂರ್ಣಗೊಳಿಸಿ ಕುಡಿಯುವ ನೀರಿನ ಸೌಲಭ್ಯ ಮಾಡಿಕೊಡಬೇಕೆಂದು ಮೂರು ತಿಂಗಳ ಒಳಗಾಗಿ ಯೋಜನೆ ಪೂರ್ಣಗೊಳ್ಳದೆ ಹೋದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.ಈವೇಳೆ ನಾಗರಾಜ ಬಣಕಾರ, ಮನೋಜ್ ಹಾರ‍್ನಳ್ಳಿ, ರಮೇಶ ಇದ್ದರು.