ಸಾರಾಂಶ
ಆನವಟ್ಟಿ: ಸೊರಬ ತಾಲೂಕಿನ ನೇರಲಗಿ ಗ್ರಾಮದ ತರಕಾರಿ ವ್ಯಾಪಾರಿ ಪಿ.ಟಿ.ಸಂಜೀವ ಅವರು ತಾವು ಕಲಿತ ಸರ್ಕಾರಿ ಶಾಲೆಗೆ ಅಂದಾಜು 2.10 ಲಕ್ಷ ರು. ವೆಚ್ಚದಲ್ಲಿ ಸುಂದರವಾದ ಧ್ವಜಸ್ತಂಭ ನಿರ್ಮಿಸಿಕೊಟ್ಟಿದ್ದಾರೆ.
ಆನವಟ್ಟಿ: ಸೊರಬ ತಾಲೂಕಿನ ನೇರಲಗಿ ಗ್ರಾಮದ ತರಕಾರಿ ವ್ಯಾಪಾರಿ ಪಿ.ಟಿ.ಸಂಜೀವ ಅವರು ತಾವು ಕಲಿತ ಸರ್ಕಾರಿ ಶಾಲೆಗೆ ಅಂದಾಜು 2.10 ಲಕ್ಷ ರು. ವೆಚ್ಚದಲ್ಲಿ ಸುಂದರವಾದ ಧ್ವಜಸ್ತಂಭ ನಿರ್ಮಿಸಿಕೊಟ್ಟಿದ್ದಾರೆ.
ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿರುವ ಸಂಜೀವ, ಎಲ್ಲರಿಗೂ ಸಂಜಿವ ತರಕಾರಿ ಅಂತಲೇ ಚಿರಪರಿಚಿತ. ಸರ್ಕಾರಿ ಶಾಲೆಗಳ ಮೇಲೆ ಅಪಾರ ಗೌರವ ಅವರಿಗೆ. ಹಾಗಾಗಿ ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನುಗಳನ್ನು ವಿತರಣೆ ಮಾಡುತ್ತಾರೆ. ಅವರ ಮಕ್ಕಳಾದ ಹರ್ಷಾ, ದೇವಕಿ ಅವರನ್ನು ತಾನು ಕಲಿತ ನೇರಲಗಿ ಸರ್ಕಾರಿ ಶಾಲೆಯಲ್ಲಿ ಓದಿಸಿದ್ದಾರೆ.ಧ್ವಜಸ್ತಂಭದ ವಿಶೇಷತೆ: ವಿಶಾಲವಾದ ವೃತ್ತಾಕಾರದಲ್ಲಿ ಧ್ವಜಸ್ತಂಭ ನಿರ್ಮಾಣ. ಮಧ್ಯದಲ್ಲಿ 24 ಅಡಿ ಉದ್ದದ ಸ್ಟೀಲ್ ಧ್ವಜಕಂಬ. ಧ್ವಜರೋಹಣ ಮಾಡುವ ಗಣ್ಯವ್ಯಕ್ತಿ ಹಾಗೂ ದೈಹಿಕ ಶಿಕ್ಷಕ ನಿಂತುಕೊಳ್ಳಲು ಇಂಟರ್ ಲಾಕ್ ಸಿಮೆಂಟ್ ಇಟ್ಟಿಗೆ ಬಳಕೆ. ಅದರ ಸುತ್ತಲು ಗ್ರ್ಯಾನೈಟ್ ಬಳಸಲಾಗಿದೆ.
ನಂತರ ಹಸಿರು ಹುಲ್ಲಿನ ಹಾಸು. 3 ಅಡಿ ಎತ್ತರದ ಸ್ಟೀಲ್ ಕಂಬಗಳು ಹಾಗೂ ಕಂಬಗಳಿಂದ, ಕಂಬಗಳಿಗೆ ಸ್ಟೀಲ್ ಚೈನ್ ಹಾಕಿದ್ದು, ಆ ಕಂಬಗಳ ಮೇಲೆ ಸ್ಟೀಲ್ ಪಟ್ಟಿಯಲ್ಲಿ ಶಾಲೆಯ ಹೆಸರನ್ನು ಬರಸಲಾಗಿದೆ. ಮಳೆಗಾಲದಲ್ಲಿ ಧ್ವಜಸ್ತಂಭ ಹಾಳಾಗದಂತೆ ಹೊರಕಟ್ಟೆಯ ಸುತ್ತಲು ಗ್ರ್ಯಾನೈಟ್ ಕಲ್ಲುಗಳನ್ನು ಬಳಸಿ, ನೋಡುಗರಿಗೆ ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ.ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ: ಜ.25 ರಂದು ಈ ವಿನೂತನ ಧ್ವಜಸ್ತಂಭದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ನೆರವೇರಿಸುವರು.
ಶಾಲೆಯ ಹಳೆ ವಿದ್ಯಾರ್ಥಿ ಸಂಜೀವ ಅವರು ಧ್ವಜಸ್ತಂಭ ನಿರ್ಮಿಸಿರುವುದು ಉತ್ತಮ ಕಾರ್ಯ. ಇಂತಹ ಒಳ್ಳೆಯ ಕೆಲಸಗಳು ಇತರರಿಗೂ ಮಾದರಿಯಾಗಲಿ- ಎಚ್ ಗೀತಾದೇವಿ, ಮುಖ್ಯ ಶಿಕ್ಷಕಿ
ಈಚೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರವೊಂದರಲ್ಲಿ ನನ್ನ ಶಾಲೆ, ನನ್ನ ಜವಾಬ್ದಾರಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದರು. ಅದರಿಂದ ಪ್ರೇರಣೆಗೊಂಡು, ಮಕ್ಕಳಿಗೂ ಅನುಕೂಲವಾಗುವ ದೃಷ್ಟಿಯಿಂದ ಧ್ವಜಸ್ತಂಭ ಕಟ್ಟಿಸಿದ್ದೇನೆ- ಪಿ.ಟಿ.ಸಂಜೀವ ತರಕಾರಿ, ಹಳೆ ವಿದ್ಯಾರ್ಥಿ