ಹಿಂದೂ ಸಮಾಜದ ಕಲ್ಯಾಣಕ್ಕೆ ಸಿಕ್ಕ ಅವಕಾಶ: ಕನ್ಯಾಡಿ ಶ್ರೀ

| Published : Feb 02 2025, 11:46 PM IST

ಸಾರಾಂಶ

ಮಹಾಮಂಡಲೇಶ್ವರ ಪಟ್ಟಾಭಿಷಿಕ್ತ ಸ್ವಾಮೀಜಿ ಪ್ರಯಾಗ್ ರಾಜ್ ನಿಂದ ಚಾರ್ಮಾಡಿ ಮೂಲಕ ವಾಹನದಲ್ಲಿ ಆಗಮಿಸಿದರು.ಉಜಿರೆ ಪೇಟೆಯಲ್ಲಿ, ಕನ್ಯಾಡಿ ಶಾಲೆ ಬಳಿ ಭವ್ಯ ಸ್ವಾಗತ ಕೋರಲಾಯಿತು. ಕನ್ಯಾಡಿ ಶಾಲೆಯಿಂದ ಶ್ರೀರಾಮ ಕ್ಷೇತ್ರದವರೆಗೆ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಮಗ್ರ ಹಿಂದೂ ಸಮಾಜದ ಕಲ್ಯಾಣಕ್ಕಾಗಿ ಸಿಕ್ಕ ಅವಕಾಶ ಇದಾಗಿದೆ ಎಂದು ಕನ್ಯಾಡಿ ಶ್ರೀ ಗುರುದೇವಾನಂದ ಪೀಠಾಧೀಶ, ಧರ್ಮಸ್ಥಳ ಗ್ರಾಮ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪಟ್ಟಾಭಿಷಿಕ್ತರಾಗಿ ಆಗಮಿಸಿದ ಅವರು ಭಾನುವಾರ ಕನ್ಯಾಡಿ ಶ್ರೀರಾಮ ಮಹಾ ಸಂಸ್ಥಾನದಲ್ಲಿ ಆಶೀರ್ವಚನ ನೀಡಿದರು.ಶಂಕರಾಚಾರ್ಯರು ಸ್ಥಾಪಿಸಿದ 13 ಆಖಾಡಗಳ ಪೈಕಿ 7 ಸನ್ಯಾಸಿ ಹಾಗೂ 6 ವೈಷ್ಣವ ಆಖಾಡಗಳಿದ್ದು ಪಂಚದಶನಾಂ ಜುನಾ ಅಖಾಡ ಬಹುದೊಡ್ಡ ಆಖಾಡವಾಗಿದೆ. ಇಲ್ಲಿ ಜವಾಬ್ದಾರಿ ನಿರ್ವಹಿಸುವ ಉತ್ತಮ ಅವಕಾಶ ಸಿಕ್ಕಿದೆ. ಕೊಠಾರಿ,ಸ್ಥಾನ ಪತಿ, ಮಾಂತ್, ಶ್ರೀಮಾಂತ್ ಇತ್ಯಾದಿ ಹುದ್ದೆಗಳು ಸಾಧನೆಯ ಬಲದಲ್ಲಿ ಸಿಗುತ್ತವೆ. ಇಂತವರ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಿದಾಗ ಅವರಿಗೆ ಗೊತ್ತಿಲ್ಲದಂತೆ ಅವರ ಮಾಹಿತಿ,ಜನಕಲ್ಯಾಣ ಕೆಲಸಗಳನ್ನು ಅವಲೋಕಿಸಿ ಮಹಾಮಂಡಲೇಶ್ವರ ಪದವಿಗೆ ಅರ್ಹತೆ ನೀಡಲಾಗುತ್ತದೆ ಎಂದರು.13 ಆಖಾಡದಲ್ಲಿ 100ಮಂದಿ ಸ್ವಾಮೀಜಿಗಳಿಗೆ ಮಾತ್ರ ಮಹಾಮಂಡಲೇಶ್ವರ ಪದವಿ ಇದೆ. ಆಖಾಡದಲ್ಲಿ 25 ಲಕ್ಷಕ್ಕಿಂತ ಅಧಿಕ ಸಾಧು ಸಂತರಿದ್ದಾರೆ ಎಂದರು.ಮಾಜಿ ಎಂ.ಎಲ್. ಸಿ. ಹರೀಶ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸರಾವ್, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಮಾಜಿ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಶೈಲೇಶ್ ಕುಮಾರ್, ಅಭಿನಂದನ್ ಹರೀಶ್ ಕುಮಾರ್, ಸದಾನಂದ ಉಂಗಿಲ ಬೈಲು,ರಾಜೇಶ್ ಪೂಜಾರಿ, ಪದ್ಮನಾಭ ಶೆಟ್ಟಿಗಾರ್, ಪ್ರೀತಂ ಧರ್ಮಸ್ಥಳ, ಸೀತಾರಾಮ ಬಿ.ಎಸ್., ಸುಧೀರ್ ಸುವರ್ಣ, ಹುಕುಂ ರಾಮ್ ಪಟೇಲ್, ಪ್ರಶಾಂತ ಪಾರೆಂಕಿ, ಅರವಿಂದ ಕಾರಂತ, ಪ್ರಕಾಶ ನಾರಾಯಣ ರಾವ್, ಚೆನ್ನಕೇಶವ ಅರಸಮಜಲು, ಪೂರ್ಣಿಮಾ ಮುಂಡಾಜೆ, ಕೃಷ್ಣಪ್ಪ ಗುಡಿಗಾರ್, ಅಭಿನಂದನ್ ಹರೀಶ್ ಕುಮಾರ್, ಸುಂದರ ಹೆಗ್ಡೆ, ವಿನಿತ್ ಕೋಟ್ಯಾನ್ ಮತ್ತಿತರರು ಇದ್ದರು.ಭವ್ಯ ಸ್ವಾಗತ: ಮಹಾಮಂಡಲೇಶ್ವರ ಪಟ್ಟಾಭಿಷಿಕ್ತ ಸ್ವಾಮೀಜಿ ಪ್ರಯಾಗ್ ರಾಜ್ ನಿಂದ ಚಾರ್ಮಾಡಿ ಮೂಲಕ ವಾಹನದಲ್ಲಿ ಆಗಮಿಸಿದರು.ಉಜಿರೆ ಪೇಟೆಯಲ್ಲಿ, ಕನ್ಯಾಡಿ ಶಾಲೆ ಬಳಿ ಭವ್ಯ ಸ್ವಾಗತ ಕೋರಲಾಯಿತು. ಕನ್ಯಾಡಿ ಶಾಲೆಯಿಂದ ಶ್ರೀರಾಮ ಕ್ಷೇತ್ರದವರೆಗೆ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ನಡೆಯಿತು.