ಸಾರಾಂಶ
ಹೆದ್ದಾರಿಗಾಗಿ ಶಾಲೆ ಏಳು ಕೊಠಡಿಗಳು ನೆಲಸಮ । ಕಟ್ಟಡ ನಿರ್ಮಿಸಿಕೊಡುವ ಅನುದಾನ ವಾಪಾಸ್ ಪಡೆದ ಕಂಪನಿಸಚಿವ ಡಿ.ಸುಧಾಕರ್ ನೆಲದಲ್ಲಿ ಹೀಗೊಂದು ಅನ್ಯಾಯದ ಘಟನೆ. ತಗಡಿನ ಶೀಟ್ ನಲ್ಲಿಯೇ ಉರಿಬಿಸಿಲಲ್ಲಿ ಪಾಠ ಕೇಳುವ ಅನಿವಾರ್ಯತೆ
---------------------ಜಿಲ್ಲಾಧಿಕಾರಿಗಳೇ
ಇಲ್ಲೊಮ್ಮೆ ಬಂದು ನೋಡಿ-------------------------
ರಮೇಶ್ ಬಿದರಕೆರೆ ಕನ್ನಡಪ್ರಭ ವಾರ್ತೆ ಹಿರಿಯೂರುರಸ್ತೆ ವಿಸ್ತರಣೆಯ ನೆಪದಲ್ಲಿ ತಾಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲುಗಲಕುಂಟೆಯ ಸುಮಾರು 80 ಶಾಲಾ ಮಕ್ಕಳನ್ನು ತಗಡಿನ ಶಾಲೆಯಲ್ಲಿ ಕೂರಿಸುವ ಹುನ್ನಾರ ನಡೆದಿದೆ. ದಸರಾ ರಜೆ ಮುಗಿದು ಮಕ್ಕಳು ಶಾಲೆಗೆ ವಾಪಾಸ್ಸಾಗಲಿದ್ದು, ಬಿಸಿಲ ಬೇಗೆಯಲ್ಲಿ ಕುಳಿತು ಪಾಠ ಹೇಗೆ ಕೇಳುತ್ತಾರೆ ಎಂಬ ಆತಂಕ ಕಾಡಿದೆ. ಹುಲಗಲಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟರವರೆಗೆ ತರಗತಿಗಳಿದ್ದು ಸುಮಾರು 120 ವಿದ್ಯಾರ್ಥಿಗಳಿದ್ದಾರೆ. ಮೂರು ಆರ್ ಸಿಸಿ ಕಟ್ಟಡ, ಮೂರು ಹೆಂಚಿನ ಕಟ್ಟಡ ಸೇರಿ ಒಟ್ಟು ಒಂಬತ್ತು ಕೋಣೆಗಳಿದ್ದವು. ಆದರೆ ಯಾವಾಗ ಬೀದರ್ ಟು ಶ್ರೀರಂಗಪಟ್ಟಣ ರಸ್ತೆ ನಿರ್ಮಿಸಲು ಶಾಲಾ ಕಟ್ಟಡಗಳನ್ನು ಒಡೆಯುತ್ತಾರೆ ಎಂಬ ಮಾಹಿತಿ ಸಿಕ್ಕಿತೋ ಸುಮಾರು 40 ಕ್ಕೂ ಹೆಚ್ಚು ಮಕ್ಕಳನ್ನು ಪೋಷಕರು ಬೇರೆ ಶಾಲೆಗಳಿಗೆ ಸೇರಿಸಿಬಿಟ್ಟರು. ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯು ಶಾಲಾಡಳಿತ ಮಂಡಳಿ, ಪೋಷಕರು ಮತ್ತು ಗ್ರಾಮಸ್ಥರ ಮನವೊಲಿಸಿ ಹೊಸ ಕಟ್ಟಡ ಕಟ್ಟಿ ಕೊಡುತ್ತೇವೆ ಎಂದು ಹೇಳಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಜಂಟಿ ಖಾತೆಗೆ 52 ಲಕ್ಷ ಹಣ ವರ್ಗಾವಣೆ ಮಾಡಿಯೂ ಬಿಟ್ಟಿತು. ಹಣ ಬಂದು ಖಾತೆಗೆ ಬಿದ್ದ ಮೇಲೆ ಹೊಸ ಕಟ್ಟಡಗಳ ನಿರ್ಮಾಣವಾಗುತ್ತದೆ ಎಂದು ಸಹಜವಾಗಿ ಎಲ್ಲರೂ ನಂಬಿ ಬಿಟ್ಟರು. ಆದರೆ ಆಗಿರುವುದೇ ಬೇರೆ. ಹೊಸ ಕಟ್ಟಡ ನಿರ್ಮಾಣವಾಗುವ ತನಕ ತಾತ್ಕಾಲಿಕವಾಗಿ ಇರಲಿ ಎಂದು ಕಂಪನಿಯವರು ಎಂಟು ಶೆಡ್ ಗಳನ್ನು ನಿರ್ಮಿಸಿಕೊಟ್ಟರು. ಆ ಕೂಲಿಂಗ್ ಶೀಟ್ ಗಳಾದರೂ ಹೊಸವಾ ಎಂದರೆ ಅದೂ ಇಲ್ಲ. ಹಳೆಯ ಶೀಟ್ ಗಳಿಂದಲೇ ತಾತ್ಕಾಲಿಕವಾಗಿ ಶಾಲಾ ಕೊಠಡಿ ನಿರ್ಮಿಸಿಕೊಟ್ಟಿದ್ದಾರೆ. ದುರಂತ ಎಂದರೆ ಹೊಸ ಕಟ್ಟಡಗಳ ನಿರ್ಮಾಣಕ್ಕೆoದು ಹಾಕಿದ್ದ ಹಣವನ್ನು ಕಂಪನಿ ಈಗ ವಾಪಸ್ ಪಡೆದಿದೆ. ಹಳೆಯ ಕಟ್ಟಡಗಳನ್ನು ಜಿಲ್ಲಾಧಿಕಾರಿಗಳ ಆದೇಶವಿದೆ ಎಂದು ಹೇಳಿ ನೆಲಸಮ ಮಾಡಿದ್ದಾರೆ. ಇದೀಗ ಗ್ರಾಮಸ್ಥರು ಮತ್ತು ಪೋಷಕರು ತಗಡಿನ ಶೆಡ್ ಗಳಲ್ಲಿ ನಮ್ಮ ಮಕ್ಕಳು ಈ ಬಿರು ಬಿಸಿಲಲ್ಲಿ ಕೂರಲಾದೀತೇ. ಅದೂ ಬೆಟ್ಟದ ಸಾಲಿನಲ್ಲಿರುವ ಶೆಡ್ ನಲ್ಲಿ ಹುಳು ಹುಪ್ಪಟೆ ಕಾಟ ಎಂದು ಗೋಳಿಡುತ್ತಿದ್ದಾರೆ. ಗ್ರಾಮಸ್ಥರು ಹೊಸ ಕಟ್ಟಡ ಕಟ್ಟಿಕೊಟ್ಟು ಹಳೆಯ ಕಟ್ಟಡಗಳನ್ನು ಕೆಡವಿ ಎಂದು ಮನವಿ ಮಾಡಿದ್ದರೂ ಸಹ ಕ್ಯಾರೇ ಎನ್ನದೇ ಹಳೆ ಒಂಬತ್ತು ಕಟ್ಟಡಗಳನ್ನು ಕೆಡವಿ ಹಾಕಲಾಗಿದೆ. ಈಗ ದಸರಾ ಮುಗಿದು ಮಕ್ಕಳು ಶಾಲೆಯತ್ತ ಮುಖ ಮಾಡಿದರೆ ಅವೇ ಶೆಡ್ ಗಳಲ್ಲಿ ಕೂತು ಪಾಠ ಕೇಳಬೇಕು ಮತ್ತು ಐದು ಜನ ಶಿಕ್ಷಕರು ಅವುಗಳಲ್ಲೇ ಕಾರ್ಯನಿರ್ವ ಹಿಸಬೇಕು. ಒಂದು ಕಾoಪೌಂಡ್ ಸಹ ಇಲ್ಲದ ಶೆಡ್ ಗಳ ಶಾಲೆಯಲ್ಲಿ ಮಕ್ಕಳು ಕೂರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ---------
ಬಾಕ್ಸ್ಶಾಲಾ ಕಟ್ಟಡವನ್ನು ಗ್ರಾಮಸ್ಥರ ವಿರೋಧದ ನಡುವೆಯೂ ತೆರವುಗೊಳಿಸಲಾಗಿದೆ. ಶಾಲೆಯಲ್ಲಿರುವ 80 ಮಕ್ಕಳಲ್ಲಿ ಸುಮಾರು 50 ಮಂದಿ ದಲಿತ ಸಮುದಾಯಕ್ಕೆ ಸೇರಿದವರಿದ್ದಾರೆ. ಉಳ್ಳವರು ಹೊರಗಿನ ಶಾಲೆಯಲ್ಲಿ ಓದಿಸುತ್ತಾರೆ. ಆದರೆ ಬಡ ದಲಿತ ಮಕ್ಕಳು ಓದುವ ಶಾಲೆಗೆ ಕಟ್ಟಡವೇ ಇಲ್ಲ. ಶೀಟಿನ ಶಾಲೆಯಲ್ಲಿ ಕೂರಬೇಕಾ ಎಂಬುದಕ್ಕೆ ಸಂಬಂಧಪಟ್ಟವರು ಉತ್ತರಿಸಬೇಕು. ಸಂಘಟನೆ ವತಿಯಿಂದ ಶೀಘ್ರ ಶಾಲಾ ಕೊಠಡಿ ನಿರ್ಮಾಣಕ್ಕಾಗಿ ಪ್ರತಿಭಟನೆ, ಧರಣಿ ನಡೆಸಲು ತೀರ್ಮಾನಿಸಲಾಗಿದೆ --------ತಿಮ್ಮರಾಜು.. ರಾಜ್ಯ ಕಾರ್ಯಾಧ್ಯಕ್ಷರು. ಭಾರತೀಯ ದಲಿತ ಸಂಘರ್ಷ ಸಮಿತಿ. ----------------
ಕೋಟ್ಪಿಎನ್ ಸಿ ಕಂಪನಿಯವರು ಶೀಟಿನ ಶೆಡ್ ಗಳನ್ನು ನಿರ್ಮಿಸಿಕೊಟ್ಟು ಕಟ್ಟಡ ನಿರ್ಮಾಣಕ್ಕೆoದು ಕೊಟ್ಟಿದ್ದ ಹಣವನ್ನೂ ಸಹ ಹಿಂಪಡೆದಿರುವುದು ಬಡ ಮಕ್ಕಳಿಗೆ ಮಾಡಿದ ಅನ್ಯಾಯವಾಗಿದೆ. ಈಗಾಗಲೇ ರಸ್ತೆ ನಿರ್ಮಾಣಕ್ಕೆ ಮಣ್ಣು ಸಾಗಾಣಿಕೆ ಬಗ್ಗೆ ದಿನಕ್ಕೊಂದು ಕಥೆ ಹೊರ ಬರುತ್ತಿವೆ. ಅಧಿಕಾರಿ ವರ್ಗವನ್ನು ಬಳಸಿಕೊಂಡು ಏನು ಬೇಕಾದರೂ ಮಾಡಬಹುದು ಎಂದು ಕಂಪನಿಯವರು ಭಾವಿಸಿದ್ದರೆ ತಪ್ಪಾಗುತ್ತದೆ. ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದವರು ಆ ಮಕ್ಕಳ ಪರಿಸ್ಥಿತಿಯನ್ನು ಗಮನಿಸಲಿ. ಕೂಡಲೇ ಹುಲಗಲಕುಂಟೆಯ ಶಾಲೆಗೆ ನೂತನ ಕಟ್ಟಡಗಳನ್ನು ಕಟ್ಟುವ ಕೆಲಸ ಶುರುವಾಗಲಿ ------.ಹನುಮಂತರಾಯಪ್ಪ,. ತಾಲೂಕು ಅಧ್ಯಕ್ಷರು, ಜೆಡಿಎಸ್(ಪೋಟೋ ಹನುಮಂತರಾಯ)
ಪೋಟೋ ಕ್ಯಾಪ್ಸನಹುಲಗಲಕುಂಟೆಯ ಹಳೆಯ ಶಾಲಾ ಕಟ್ಟಡ(ಹಳೇ ಚಿತ್ರ) --------24ಸಿಟಿಡಿ1--
ಕಟ್ಟಡನಕೆಡವಿ ನಿರ್ಮಿಸಲಾದ ತಗಡಿನ ತಾತ್ಕಾಲಿಕ ಶೆಡ್ ಗಳ ಶಾಲೆ --------------24 ಸಿಟಿಡಿ2--.