ಪ್ರಭುಲಿಂಗ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅವಿರೊಧ ಆಯ್ಕೆ

| Published : Jan 02 2025, 12:30 AM IST

ಸಾರಾಂಶ

ತೀವ್ರ ಜಿದ್ದಾಜಿದ್ದಿಗೆ ಎಡೆ ಮಾಡಿಕೊಟ್ಟಿದ್ದ ಇಲ್ಲಿನ ಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘದ 5 ವರ್ಷದ ಆಡಳಿತ ಮಂಡಳಿ ಚುನಾವಣೆಗೆ ಸಹಕಾರಿ ಮುತ್ಸದ್ಧಿಗಳ ಸಂಧಾನದಿಂದ ಅವಿರೋಧ ಆಯ್ಕೆಗೊಂಡಿದೆ.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ತೀವ್ರ ಜಿದ್ದಾಜಿದ್ದಿಗೆ ಎಡೆ ಮಾಡಿಕೊಟ್ಟಿದ್ದ ಇಲ್ಲಿನ ಪ್ರಭುಲಿಂಗ ನಗರ ಪತ್ತಿನ ಸಹಕಾರಿ ಸಂಘದ 5 ವರ್ಷದ ಆಡಳಿತ ಮಂಡಳಿ ಚುನಾವಣೆಗೆ ಸಹಕಾರಿ ಮುತ್ಸದ್ಧಿಗಳ ಸಂಧಾನದಿಂದ ಅವಿರೋಧ ಆಯ್ಕೆಗೊಂಡಿದೆ.

೧೩ ಸ್ಥಾನಗಳಿಗೆ ಒಟ್ಟು ೪೬ ನಾಮಪತ್ರ ಸಲ್ಲಿಕೆಯಾಗಿದ್ದವು. ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಚುನಾವಣೆ ನಡೆದರೆ ಬ್ಯಾಂಕಿಗೆ ಲಕ್ಷಾಂತರ ಹೊರೆ ಆಗುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಬ್ಯಾಂಕಿನ ಹಿತೈಸಿಗಳು ನಾಮಪತ್ರ ಸಲ್ಲಿಸಿದವರ ಜತೆಗೆ ಸಭೆ ನಡೆಸಿ ಹಿರಿಯರು ಹೇಳಿದಾಗ ಕೇಳಿ ಎಂದು ಮನವಿ ಮಾಡಿದಾಗ ಎಲ್ಲರು ಒಪ್ಪಿಕೊಂಡರು. ಬಳಿಕ ಹಿರಿಯರು ಸುದೀರ್ಘ ಚರ್ಚೆ ನಡೆಸಿದ ಬಳಿಕ ೧೩ ಜನರನ್ನು ಅವಿರೋಧವಾಗಿ ಆಯ್ಕೆಗೊಳಿಸಿ ಅಂತಿಮಗೊಳಿಸಿದರು. ಸಾಮಾನ್ಯ ಕ್ಷೇತ್ರಕ್ಕೆ ಧರೆಪ್ಪ ಕಲಕೇರಿ, ಭೀಮಪ್ಪ ಆಲಗೂರ, ಮುತ್ತಪ್ಪ ಮುಳ್ಳಟ್ಟಿ, ರಮೇಶ ಪಟ್ಟಣಶೆಟ್ಟಿ, ಶಾಂತಿನಾಥ ಕೋರಿಗೇರಿ, ಶೀತಲ ಗೂಳನ್ನವರ, ಶೀತಲ ಮಾಟ, ಹಿಂದುಳಿದ ಅ ವರ್ಗದಿಂದ ರಾಮಪ್ಪ ಮಡಿವಾಳ, ಹಿಂದುಳಿದ ಬ ವರ್ಗದಿಂದ ವಿಜಯಪ್ರಕಾಶ ದಾನಗೌಡ, ಮಹಿಳಾ ಕ್ಷೇತ್ರದಿಂದ ಅನಂತಮತಿ ಆಳಗೊಂಡ, ಸುಜಾತಾ ಹಿರೇಮಠ, ಪ/ಜಾ ದಿಂದ ಗಿರೀಶ ಹಟ್ಟೆನ್ನವರ ಹಾಗೂ ಪ/ಪಂ ದಿಂದ ಪ್ರಭು ಗಸ್ತಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಬಿ.ಚಿನಗುಂಡಿ ಹಾಗೂ ಕಾರ್ಯದರ್ಶಿ ವಿನಾಯಕ ಕಿಲ್ಲೇದಾರ ತಿಳಿಸಿದ್ದಾರೆ.