ಕೇಂದ್ರದಿಂದ ಅಂಗನವಾಡಿಗೆ ಅನುದಾನ ಕಡಿತ: ಪ್ರತಿಭಟನೆ

| Published : Feb 06 2024, 01:32 AM IST / Updated: Feb 06 2024, 03:34 PM IST

ಸಾರಾಂಶ

ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಅಂಗನವಾಡಿ ಯೋಜನೆಗೆ ಅನುದಾನ ಕಡಿತ ಖಂಡಿಸಿ ತಾಲೂಕು ಅಂಗನವಾಡಿ ನೌಕರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಅಂಗನವಾಡಿ ಯೋಜನೆಗೆ ಅನುದಾನ ಕಡಿತ ಖಂಡಿಸಿ ತಾಲೂಕು ಅಂಗನವಾಡಿ ನೌಕರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತದಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಶೀಲಾ ಹತ್ತಿ ನೇತೃತ್ವದಲ್ಲಿ ಸೋಮವಾರ ನೂರಾರು ಅಂಗನವಾಡಿ ನೌಕರರು ಜಮಾಯಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

ಬಜೆಟ್‌ನಲ್ಲಿ 300 ಕೋಟಿ ರು.ಗೂ ಅಧಿಕ ಹಣ ಕಡಿತಗೊಳಿಸಲಾಗಿದೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವೇತನ, ಬಾಡಿಗೆ ಪಾವತಿ, ಪೌಷ್ಟಿಕ ಆಹಾರ ಪೂರೈಕೆಗೆ ತೊಂದರೆ ಆಗಲಿದೆ. 2 ಕೋಟಿ ತಾಯಂದಿರ 8 ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರದ ಸಮಸ್ಯೆ ಎದುರಾಗಲಿದೆ. 

ಜೊತೆಗೆ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದು ಕೊಳ್ಳಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಅಂಗನವಾಡಿ ನೌಕರರ ವೇತನ ಹೆಚ್ಚಳಗೊಂಡಿಲ್ಲ. ಕೇಂದ್ರದ ನೀತಿ ಖಂಡಿಸಿ ದೇಶದಾದ್ಯಂತ ಫೆ.16ರಂದು ಅಂಗನವಾಡಿ ನೌಕರರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಅಂಗನವಾಡಿ ನೌಕರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಖಜಾಂಚಿ ಈಶ್ವರಮ್ಮ ಮಠಪತಿ, ಕಾರ್ಯದರ್ಶಿ ಪೂಜಾಶೀಲಾ ಭಾವಿದೊಡ್ಡಿ, ಪ್ರಮುಖರಾದ ಕಸ್ತೂರಿ ಭಾಲ್ಕಿ, ಕಾವೇರಿ ಅಂಬೇಸಾಂಗವಿ, ಪಾರ್ವತಿ ಡಾವರಗಾಂವ್‌, ರೇಣುಕಾ ಕದಲಾಬಾದ್‌, ವಿದ್ಯಾವತಿ ಕರಡ್ಯಾಳ, ಸಂಜೀವಿನಿ ಭಾಲ್ಕಿ, ಅಹೀಲ್ಯಾ ಭಾಲ್ಕಿ, ಶಿವಮ್ಮ ಭಾಲ್ಕಿ, ರಾಜಮತಿ ಡೋಣಗಾಪೂರ ಸೇರಿದಂತೆ ಹಲವರು ಇದ್ದರು.