ಸಾರಾಂಶ
ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು, ವಿಜಯಕುಮಾರಿ ಕೆ. ಅವರು ಏಕಾಂಗಿಯಾಗಿ ಟಿ.ವಿ.ಎಸ್. ಜ್ಯೂಪಿಟರ್ ದ್ವಿಚಕ್ರ ವಾಹನದಲ್ಲಿ ಅಯೋಧ್ಯೆ ಹಾಗೂ ನವದೆಹಲಿ ಭೇಟಿಯ ೩೦೫೧ ಕಿಲೋಮೀಟರ್ ದೂರದ ಸಂಕಲ್ಪ ಯಾತ್ರೆಗೆ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಚಾಲನೆ ನೀಡಿ ಶುಭ ಕೋರಿದರು.ತಮ್ಮ ಸಂಕಲ್ಪ ಯಾತ್ರೆಯನ್ನು ಆರಂಭಿಸಿದರು. ವಿಜಯ ಕುಮಾರಿ ಕೆ. ಅವರಿಗೆ ಪಟ್ಟಣದ ಹಲವರು ಆರ್ಥಿಕ ಸಹಾಯ ಹಸ್ತವನ್ನು ಸಹ ನೀಡಿ ಪ್ರೋತ್ಸಾಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಸ್ಲಮ್‌ಬೋರ್ಡಿನ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು, ವಿಜಯಕುಮಾರಿ ಕೆ. ಅವರು ಏಕಾಂಗಿಯಾಗಿ ಟಿ.ವಿ.ಎಸ್. ಜ್ಯೂಪಿಟರ್ ದ್ವಿಚಕ್ರ ವಾಹನದಲ್ಲಿ ಅಯೋಧ್ಯೆ ಹಾಗೂ ನವದೆಹಲಿ ಭೇಟಿಯ ೩೦೫೧ ಕಿಲೋಮೀಟರ್ ದೂರದ ಸಂಕಲ್ಪ ಯಾತ್ರೆಗೆ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಚಾಲನೆ ನೀಡಿ ಶುಭ ಕೋರಿದರು.ವಿಜಯಕುಮಾರಿ ಕೆ. ಅವರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಿಂದ ಆರಂಭಿಸಿ, ತಾಲೂಕು ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರಿಂದ ಅನುಮತಿ ಪತ್ರವನ್ನು ಪಡೆದು ಅಭಿನಂದಿಸಲ್ಪಟ್ಟು, ತಮ್ಮ ಸಂಕಲ್ಪ ಯಾತ್ರೆಯನ್ನು ಆರಂಭಿಸಿದರು. ವಿಜಯ ಕುಮಾರಿ ಕೆ. ಅವರಿಗೆ ಪಟ್ಟಣದ ಹಲವರು ಆರ್ಥಿಕ ಸಹಾಯ ಹಸ್ತವನ್ನು ಸಹ ನೀಡಿ ಪ್ರೋತ್ಸಾಹಿಸಿದ್ದಾರೆ.
ಸಾಹಿತಿ ನಾಗೇಶ್ ಕೌಂಡಿನ್ಯ, ತಾ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಶಂಕರ ನಾರಾಯಣ ಐತಾಳ್ ಪಿ., ಕಾರ್ಯದರ್ಶಿ ಕುಮುದ ರಂಗನಾಥ್, ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಅತ್ಮೀಯವಾಗಿ ಬೀಳ್ಕೊಟ್ಟರು.