ಸಾರಾಂಶ
ಹೊಸಕೋಟೆ: ಮಗು ಹುಟ್ಟುವುದಕ್ಕೂ ಮೊದಲೇ ತಾಯಿ ಕಾರ್ಡ್ ಮೂಲಕ ತಾಯಿ-ಮಗುವಿನ ಆರೈಕೆಯೊಂದಿಗೆ ಮಗುವಿಗೆ ೬ ವರ್ಷದವರೆಗೆ ಪೌಷ್ಟಿಕ ಆಹಾರ, ಪಾಲನೆ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ಮಗು ಹುಟ್ಟುವುದಕ್ಕೂ ಮೊದಲೇ ತಾಯಿ ಕಾರ್ಡ್ ಮೂಲಕ ತಾಯಿ-ಮಗುವಿನ ಆರೈಕೆಯೊಂದಿಗೆ ಮಗುವಿಗೆ ೬ ವರ್ಷದವರೆಗೆ ಪೌಷ್ಟಿಕ ಆಹಾರ, ಪಾಲನೆ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಡಾ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಗೌರವ ಧನ ಹೆಚ್ವಿಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಹಾಗೂ ರಾಜ್ಯದಲ್ಲಿಯೇ ಮಾದರಿ ಅಂಗನವಾಡಿ ಕೇಂದ್ರವನ್ನು ನಂದಗುಡಿಯಲ್ಲಿ ನಿರ್ಮಿಸಿದ್ದು ತಾಲೂಕಿನಲ್ಲಿರುವ ಒಟ್ಟು ೩೩೦ ಅಂಗನವಾಡಿಗಳಲ್ಲಿ ೨೭೫ ಅಂಗನವಾಡಿಗಳಲ್ಲಿರುವ ಕೈತೋಟಗಳು ಮಾದರಿಯಾಗಿವೆ ಎಂದರು.ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ನವರಾತ್ರಿ ಪ್ರಯುಕ್ತ ಬಾಗಿನ ವಿತರಣೆ, ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ಗಳನ್ನು ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಮತ್ತು ಮಹಿಳಾ ರಕ್ಷಣಾ ಉಸ್ತುವಾರಿ ಅಧಿಕಾರಿ ಅನಿತಾಲಕ್ಷ್ಮಿ, ಜಿಲ್ಲಾ ನಿರೂಪಣಾಧಿಕಾರಿ ರಮೇಶ್, ಜಿಪಂ ಮಾಜಿ ಅದ್ಯಕ್ಷ ಸಿ.ಮುನಿಯಪ್ಪ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ ಸಿ.ಜಯರಾಜ್, ಕುಂಬಳಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ದೊಡ್ಡನಲ್ಲಾಳ ಗ್ರಾ ಪಂ ಮಾಜಿ ಅದ್ಯಕ್ಷ ಸಂಜೀವಣ್ಣ, ಸಿಡಿಪಿಒ ಶಿವಮ್ಮ ಇತರರು ಹಾಜರಿದ್ದರು.ಫೋಟೋ: 29 ಹೆಚ್‌ಎಸ್‌ಕೆ 2
ಹೊಸಕೋಟೆಯ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ನಡೆದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.