ಅಭಿವೃದ್ಧಿ ಹೆಸರಿನಲ್ಲಿ ಪ್ರಾಣಿ ಪ್ರಭೇದ, ಸಸ್ಯ ಸಂಪತ್ತು ನಾಶ

| Published : Oct 07 2024, 01:32 AM IST

ಸಾರಾಂಶ

ಹನೂರು: ಪ್ರಸ್ತುತ ದಿನಗಳಲ್ಲಿ ನಾವು ಅಭಿವೃದ್ಧಿ ದೃಷ್ಟಿಯಿಂದಾಗಿ ಅಪಾರ ಅರಣ್ಯ ಸಂಪತ್ತು ಕಳೆದುಕೊಳ್ಳುತ್ತಿದ್ದೇವೆ. ಅನೇಕ ಪ್ರಾಣಿ ಪ್ರಬೇಧಗಳನ್ನು ದೂರಮಾಡಿಕೊಳ್ಳುತ್ತಿದ್ದು ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಡಿಸಿಎಫ್ ಶ್ರೀಪತಿ ಹೇಳಿದರು.

ಹನೂರು: ಪ್ರಸ್ತುತ ದಿನಗಳಲ್ಲಿ ನಾವು ಅಭಿವೃದ್ಧಿ ದೃಷ್ಟಿಯಿಂದಾಗಿ ಅಪಾರ ಅರಣ್ಯ ಸಂಪತ್ತು ಕಳೆದುಕೊಳ್ಳುತ್ತಿದ್ದೇವೆ. ಅನೇಕ ಪ್ರಾಣಿ ಪ್ರಬೇಧಗಳನ್ನು ದೂರಮಾಡಿಕೊಳ್ಳುತ್ತಿದ್ದು ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಡಿಸಿಎಫ್ ಶ್ರೀಪತಿ ಹೇಳಿದರು.70ನೇ ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಭಾನುವಾರ ಆಯೋಜಿಸಿದ್ದ 70 ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಸೈಕಲ್ ಜಾಗೃತಿ ಜಾಥಾಕ್ಕೆ ಶುಭಕೋರಿ ಮಾತನಾಡಿದರು.

ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಸಾರ್ವಜನಿಕರಲ್ಲಿ ಒಲವು ಹೆಚ್ಚಾಗಿರಬೇಕು, ಅರಣ್ಯಾಧಿಕಾರಿಗಳೇ ಅರಣ್ಯ ಸಂರಕ್ಷಿಸಬೇಕು, ಪ್ರಾಣಿಗಳನ್ನು ಕಾಪಾಡಬೇಕು ಎಂಬ ನಿಯಮವಿಲ್ಲ, ಸಾರ್ವಜನಿಕರು ನಮ್ಮ ಜೊತೆ ಸಹಕರಿಸಿ, ಪ್ರಾಣಿ ಮತ್ತು ಅರಣ್ಯ ಸಂಪತ್ತು ಉಳಿಸುವಲ್ಲಿ ಮುಂದಾಗಬೇಕು, ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಗೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವನ್ಯಜೀವಿ ಸಪ್ತಾಹ ಆಯೋಜಿಸಲಾಗಿದ್ದು ಇದರ ಅಂಗವಾಗಿ ಇಂದು ಸೈಕಲ್ ಜಾಥಾ ಆಯೋಜಿಸಲಾಗಿದೆ, ಜಾಥಾ ಯಶಸ್ವಿಯಾಗಲಿ, ಜಾಥಾ ಪಾಲ್ಗೊಳ್ಳುವ ನಾಗರಿಕರು ದಣಿವಾದಲ್ಲಿ, ಯಾವುದೆ ತೊಂದರೆ ಎದುರಾದಲ್ಲಿ ಇಲಾಖಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕು, ಸೈಕಲ್ ಜಾಥಾದ ವೇಳೆ ದಣಿವಾದರೆ ವಿಶ್ರಮಿಸಿಕೊಂಡು ಮುಂದೆ ಸಾಗಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ಕಚೇರಿಯಿಂದ ಉತ್ತಂಬಳ್ಳಿ, ಮಾಂಬಳ್ಳಿ, ಅಗರ, ಮದ್ದೂರು ಮಾರ್ಗವಾಗಿ ಯಳಂದೂರು ತಲುಪಿ ವಾಪಸು ಕೊಳ್ಳೇಗಾಲಕ್ಕೆ ಆಗಮಿಸುವ ಮೂಲಕ ಸೈಕಲ್ ಜಾಗೃತಿ ಕೊನೆಗೊಂಡಿತು. ಜಾಥಾದಲ್ಲಿ ಎಲ್ಲಾ ಅರಣ್ಯಾಧಿಕಾರಿಗಳು ಸೇರಿದಂತೆ 87 ಪರಿಸರ ಪ್ರೇಮಿಗಳು, ಯುವಕರು, ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ಎಸಿಎಫ್ ಪ್ರಭಾಕರ್ ಅಕ್ಷಯ್ ಅಶೋಕ್, ಕೊಳ್ಳೇಗಾಲ ವಲಯ ವಾಸು, ಡಿ.ಆರ್.ಎಫ್.ಒ ಅನಂತರಾಮ್, ಭಾನುಪ್ರಕಾಶ್, ಪ್ರಭುಸ್ವಾಮಿ, ರಘುರಾಮ್, ಕಟ್ನವಾಡಿ ಮಹೇಶ್ ಇನ್ನಿತರರಿದ್ದರು.