ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿರುವ ಹಣವನ್ನು ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಎಣಿಕೆ ಮಾಡಿದ್ದು, 42 ದಿನಗಳಲ್ಲಿ ₹32,95,651 ಸಂಗ್ರಹವಾಗಿದೆ.ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ, ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ ಅವರ ಆದೇಶದ ಮೇರೆಗೆ ಸಿಬ್ಬಂದಿ ಎಣಿಕೆ ಮಾಡಿದರು. (ಮೇ 21, 2024ರಿಂದ ಜುಲೈ 02, 2024ರ ವರೆಗೆ ಒಟ್ಟು 42 ದಿನಗಳ ಅವಧಿಯಲ್ಲಿ) ಒಟ್ಟು ₹32,95,651 ಸಂಗ್ರಹವಾಗಿದೆ. 3 ವಿದೇಶಿ ನೋಟು, 7 ವಿದೇಶಿ ನಾಣ್ಯಗಳು (ಸೌತ್ ಆಫ್ರಿಕಾ, ಯುಎಸ್ಎ, ಸೌದಿ ಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ, ನೇಪಾಳ) ಹುಂಡಿಯಲ್ಲಿ ಸಂಗ್ರಹವಾಗಿವೆ.
ಈ ಸಂದರ್ಭದಲ್ಲಿ ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ಹಾಲೇಶ ಗುಂಡಿ, ವ್ಯವಸ್ಥಾಪಕ ವೆಂಕಟೇಶ, ನಿರುಪಾದಿ ಹನುಮಂತ ಹಾಗೂ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿದ್ದರು.ಕಾವ್ಯ ಅಂತರಂಗದ ಅಭಿವ್ಯಕ್ತಿ:
ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಕವಿ-ಕಾವ್ಯ ಸಂವಾದ ಕಾರ್ಯಕ್ರಮ ಜರುಗಿತು.ಯುವ ಕವಿಯಿತ್ರಿ ಲಕ್ಷ್ಮಿ ಮಾನಸರವರ ಅಳಲ ಅಲೆಗಳು ಕೃತಿಯ ಕುರಿತು ಸಂವಾದದಲ್ಲಿ ಅಳಿಲು ಅಲೆಗಳು ಕೃತಿಯ ಪರಿಚಯ ಮಾಡಿದ ಜ್ಯೋತಿ, ಹೆಣ್ಣಿನ ನೋವು, ತಲ್ಲಣಗಳು ಅಭಿವ್ಯಕ್ತಿಗೊಂಡಿವೆ. ಮನುಷ್ಯನ ವ್ಯಕ್ತಿತ್ವದ ವಿಭಿನ್ನ ಮುಖಗಳನ್ನು ಕೃತಿ ಅನಾವರಣಗೊಳಿಸುತ್ತದೆ. ಭಾಷೆ ಹಾಗೂ ವಿಭಿನ್ನ ಅಭಿವ್ಯಕ್ತಿಯ ವಿನ್ಯಾಸಗಳಿಂದ ಮಾನಸ ಅವರು ಕವಿತೆಗಳು ಗಮನ ಸೆಳೆಯುತ್ತವೆ ಎಂದರು.ಕವಿಯತ್ರಿ ಲಕ್ಷ್ಮಿ ಮಾನಸ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ, ಕಾವ್ಯ ಅಂತರಂಗದ ಅಭಿವ್ಯಕ್ತಿ. ಕವಿತೆ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಕಟ್ಟುತ್ತದೆ. ನನಗೆ ಕಡಲು ಅಂದರೆ ಇಷ್ಟ. ಇಡೀ ಮನುಕುಲದ ಸಂಕೇತ ಕಡಲು. ಕಡಲಿನಷ್ಟು ನೋವು-ನಲಿವುಗಳು ಮಾನವನನ್ನು ಕಾಡುತ್ತವೆ. ಕವಿತೆ ನನ್ನೊಳಗಿನ ದುಗುಡಗಳನ್ನು ಹೊರಹಾಕಲು ಮಾಧ್ಯಮವಾಗಿದೆ ಎಂದು ವಿವರಿಸಿದರು.ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಮುಮ್ತಾಜ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಲಕ್ಷ್ಮಿ ಮಾನಸ ಅವರನ್ನು ಸನ್ಮಾನಿಸಿದರು.
ಗುಂಡೂರು ಪವನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೀನಾ ಸ್ವಾಗತಿಸಿ, ಹಳ್ಳದ ಬಸವ ನಿರೂಪಿಸಿ, ವಿನಾಯಕ ವಂದಿಸಿದರು.