ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ಕುಟುಂಬಗಳ ನಡುವೆ ನಾಪೋಕ್ಲುವಿನ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳಂಡ ಕಪ್‌ನ ಬುಧವಾರ ನಡೆದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್‌ಗಳಾದ ಅಂಜಪರವಂಡ, ಕಲಿಯಂಡ ತಂಡಗಳು ಸೇರಿದಂತೆ 16 ತಂಡಗಳು ಮುನ್ನಡೆ ಸಾಧಿಸಿವೆ.ಮಾಚಿಮಂಡ, ಬೊಳ್ಳೆಪಂಡ, ಕೊಂಗಾಂಡ, ಚಿರಿಯಪಂಡ, ಅರೆಯಡ, ಕೇಳಪಂಡ, ಅಮ್ಮಂಡ, ಚೇನಂಡ, ಕರೋಟಿರ, ಮಂಡಿರ (ನೆಲಜಿ), ತೀತಮಾಡ, ತಿರುತೆರ, ಕುಂಡ್ಯೋಳಂಡ, ಕುಟ್ಟಂಡ (ಅಮ್ಮತ್ತಿ) ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ಮಾಜಿ ಚಾಂಪಿಯನ್ ಕಲಿಯಂಡ ಮತ್ತು ಚೆರುವಾಳುವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡವು ಚೆರುವಾಳುವಂಡ ತಂಡವನ್ನು 4-0 ಗೋಲುಗಳ ಅಂತರದಿಂದ ಸೋಲಿಸಿತು.ಚೊಟ್ಟೇಕ್‌ಮಾಡ ಮತ್ತು ಕೊಂಗಾಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಕೊಂಗಾಂಡ ತಂಡವು ಚೊಟ್ಟೇಕ್‌ಮಾಡ ತಂಡವನ್ನು 3-0 ಗೋಲಿನ ಅಂತರದಿಂದ ಪರಾಭವಗೊಳಿಸಿತು.
ಕೂಪದಿರ ಮತ್ತು ಮಂಡಿರ(ನೆಲಜಿ) ತಂಡಗಳ ನಡುವಿನ ಪಂದ್ಯದಲ್ಲಿ ಮಂಡಿರ ತಂಡವು ಕೂಪದಿರ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ಕುಟ್ಟಂಡ(ಅಮ್ಮತ್ತಿ) ಮತ್ತು ಮಾಪಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಟ್ಟಂಡ ತಂಡವು ಮಾಪಂಗಡ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು.ಪಳಂಗಿಯಂಡ ಮತ್ತು ಅಂಜಪರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವಂಡ ತಂಡವು ಪಳಂಗಿಯಂಡ ತಂಡವನ್ನು 5-0 ಗೋಲುಗಳ ಅಂತರದಿಂದ ಸೋಲಿಸಿತು. ಮಾಜಿ ಒಲಂಪಿಯನ್ ಅಂಜಪರವಂಡ ಸುಬಯ್ಯ ತಂಡದ ಪರ ಆಡವಾಡಿದ್ದು ವಿಶೇಷವಾಗಿತ್ತು.
ಮಾಚಿಮಂಡ ಮತ್ತು ಬಾಚಮಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮಾಚಿಮಂಡ ತಂಡವು ಬಾಚಮಂಡ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು. ಆದೇಂಗಡ ಮತ್ತು ಚಿರಿಯಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿರಿಯಪರಂಡ ತಂಡವು ಆದೇಂಗಡ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು. ಕೇಳಪಂಡ ಮತ್ತು ಅವರೆಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೇಳಪಂಡ ತಂಡವು ಅವರೆಮಾದಂಡ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು.ನಂಬಡಮಂಡ ಮತ್ತು ಚೇನಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೇನಂಡ ತಂಡವು ನಂಬಡಮಂಡ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿತು. ತೀತಮಾಡ ಮತ್ತು ಬೈರೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೀತಮಾಡ ತಂಡವು ಬೈರೇಟಿರ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಅತಿಥೇಯ ಕುಂಡ್ಯೋಳಂಡ ಮತ್ತು ಚೆರಿಯಂಡ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಕುಂಡ್ಯೋಳಂಡ ತಂಡವು ಚೆರಿಯಂಡ ತಂಡವನ್ನು 4-0 ಗೋಲುಗಳ ಅಂತರದಲ್ಲಿ ಸೋಲಿಸಿತು.
ಬೊಳ್ಳೆಪಂಡ ಮತ್ತು ವಾಟೇರಿರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಬೊಳ್ಳೆಪಂಡ ತಂಡವು ವಾಟೇರಿರ ತಂಡವನ್ನು 1-0 ಗೋಲಿನ ಅಂತರದಿಂದ ಸೋಲಿಸಿತು. ಅರೆಯಡ ಮತ್ತು ದೇಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರೆಯಡ ತಂಡವು ದೇಯಂಡ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿತು.ಮುದ್ದಿಯಡ ಮತ್ತು ಅಮ್ಮಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಅಮ್ಮಂಡ ತಂಡವು ಮುದ್ದಿಯಡ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿತು. ಕಲ್ಲೇಂಗಡ ಮತ್ತು ಕರೋಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕರೋಟಿರ ತಂಡವು ಕಲ್ಲೇಂಗಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು. ತಿರುತೆರ ಮತ್ತು ಪುಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ತಿರುತೆರ ತಂಡವು ಪುಲಿಯಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು.
ಇಂದಿನ ಪಂದ್ಯಾಟಗಳು : ಮೈದಾನ – 1: ಬೆಳಿಗ್ಗೆ 9 ಗಂಟೆಗೆ ಇಂದಂಡ - ನಾಪಂಡ, 10ಕ್ಕೆ ಸೋಮೆಯಂಡ - ನಿಡುಮಂಡ,11ಕ್ಕೆ ಅಜ್ಜೆಟ್ಟಿರ – ಮತ್ರಂಡ, 1ಕ್ಕೆ ಚೆಟ್ಟಂಗಡ - ಕಾರೆರ, 2ಕ್ಕೆ ಕೊಟ್ಟಂಗಡ – ಅಚ್ಚಪಂಡ, 3ಕ್ಕೆ ತೀತಿಮಾಡ – ತೆಕ್ಕಡ
3.30ಕ್ಕೆ ಬಾರಿಯಂಡ - ನಾಮೆರಮೈದಾನ -2: ಬೆಳಿಗ್ಗೆ 9ಕ್ಕ.: ಚೇಂದಂಡ – ಮಂಡೆಯಡ, 10ಕ್ಕ. ಕಂಗಾಂಡ – ಮಾಚಮಾಡ, 11ಕ್ಕೆ ಕಾಳಚಂಡ – ಪೊಂಜಂಡ, 1ಕ್ಕೆ ಮಲ್ಲಜ್ಜಿರ - ಬಡ್ಡಿರ, 2ಕ್ಕೆ. ಅಲ್ಲಾರಂಡ - ಪಟ್ಟಚೆರುವಂಡ, 3ಕ್ಕೆ ಮಲ್ಲಂಡ – ಕೊಂಗೇಟಿರ
ಮೈದಾನ -3: ಬೆಳಿಗ್ಗೆ 9ಕ್ಕೆ ಶಿವಚಾಳಿಯಂಡ – ಅಪ್ಪಚೆಟ್ಟೋಳಂಡ, 10ಕ್ಕ. ಮಚ್ಚಾರಂಡ - ಶಾಂತೆಯಂಡ, 11ಕ್ಕೆ ಪಾಂಡಂಡ – ಕಲ್ಲಂಗಡ, 1ಕ್ಕೆ ಚಂಗುಲಂಡ – ಅಲ್ಲಪಂಡ,. 2ಕ್ಕೆ ತಂಬುಕುತ್ತಿರ – ಮೂಕಳೆರ, 3ಕ್ಕೆ ಮುಕ್ಕಾಟಿರ (ಕುಂಜಿಲಗೇರಿ) - ಪೆಮ್ಮಂಡ