ವೇದಾಂತಗೆ ಸನ್ಮಾನಿಸಿದ ಸಚಿವ ಪಾಟೀಲ್

| Published : Apr 11 2024, 12:52 AM IST

ಸಾರಾಂಶ

ದ್ವಿತೀಯ ಪಿಯು ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವೇದಾಂತ ನಾವಿ ಅವರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.

ವಿಜಯಪುರ: ದ್ವಿತೀಯ ಪಿಯು ಪರೀಕ್ಷೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವೇದಾಂತ ನಾವಿ ಅವರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಸನ್ಮಾನಿಸಿ ಗೌರವಿಸಿದರು.

ಇದೆ ವೇಳೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ವೇದಾಂತ ನಾವಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ. ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಿರಲಿ. ಅದಕ್ಕೆ ಸಂಸ್ಥೆಯಿಂದ ಸಕಲ ಸಹಾಯ ಮಾಡಲಾಗುವುದು ಎಂದು ತಿಳಿದಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ತನ್ನ ತಂದೆ ಜ್ಞಾನೋಬಾ ನಿಧನರಾಗಿದ್ದು, ತಾಯಿ ಲಲಿತಾ ಜೊತೆ ವಾಸಿಸುತ್ತಿದ್ದೇನೆ. ಅಕ್ಕ ದೊಂಡೂಬಾಯಿ ಬಿ.ಎ ಓದುತ್ತಿದ್ದಾಳೆ. ತಾನೂ ಕೂಡ ಬಿಎ ಓದುತ್ತೇನೆ. ನಂತರ ಐ.ಎ.ಎಸ್ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಮಾವ ವಿಠ್ಠಲ ಕಾಶಿಧರ, ಬಿ.ಎಲ್.ಡಿ. ಸಂಸ್ಥೆಯ ಎಸ್. ಎಸ್. ಕ್ಯಾಂಪಸ್ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಕಾಡಾ. ಗಿರೀಶ ಅಕಮಂಚಿ, ಟಿ. ಎಂ. ಪವಾರ, ಎಂ. ಪಿ. ಕುಪ್ಪಿ ಅಮರೇಶ ಸಾಲಕ್ಕಿ ಮುಂತಾದವರು ಉಪಸ್ಥಿರಿದ್ದರು.