ಸಾರಾಂಶ
ಬೃಹತ್ ಸಂಖ್ಯೆಯ ಮೆರವಣಿಗೆಯಿಂದ ಟ್ರಾಫಿಕ್ ಸಮಸ್ಯೆ ಹಾಗೂ ಮಳೆಯ ಹಿನ್ನೆಲೆಯಲ್ಲಿ ಮೆರವಣಿಗೆ ರದ್ದುಗೊಳಿಸಲಾಗಿದೆ. ಆದರೆ, ಪೊಲೀಸ್ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇನ್ಮುಂದೆ ಯಾವುದೇ ಕಾರಣಕ್ಕೂ ತಮಟಗಾರ ಸೇರಿದಂತೆ ಗಣ್ಯರಿಗೆ ಬೆದರಿಕೆ ಬರದಂತೆ ಎಚ್ಚರಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಧಾರವಾಡ:
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ಬೃಹತ್ ಸಂಖ್ಯೆಯ ಮೆರವಣಿಗೆಯನ್ನು ಪೊಲೀಸ್ ಆಯಕ್ತರ ಮನವಿ ಮೇರೆಗೆ ರದ್ದುಗೊಳಿಸಲಾಯಿತು. ಇದರ ಪರವಾಗಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಆಗ್ರಹಿಸಲಾಯಿತು.ಬೃಹತ್ ಸಂಖ್ಯೆಯ ಮೆರವಣಿಗೆಯಿಂದ ಟ್ರಾಫಿಕ್ ಸಮಸ್ಯೆ ಹಾಗೂ ಮಳೆಯ ಹಿನ್ನೆಲೆಯಲ್ಲಿ ಮೆರವಣಿಗೆ ರದ್ದುಗೊಳಿಸಲಾಗಿದೆ. ಆದರೆ, ಪೊಲೀಸ್ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇನ್ಮುಂದೆ ಯಾವುದೇ ಕಾರಣಕ್ಕೂ ತಮಟಗಾರ ಸೇರಿದಂತೆ ಗಣ್ಯರಿಗೆ ಬೆದರಿಕೆ ಬರದಂತೆ ಎಚ್ಚರಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.ಇಸ್ಮಾಯಿಲ್ ತಮಟಗಾರ ಸೇರಿದಂತೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಪ್ತಿ ಮೌಲಾನಾ ಮೊಹಮ್ಮದ್ ಯುಸೂಫ್, ವಿವಿಧ ಚರ್ಚ್‌ಗಳ ಫಾದರ್‌ಗಳು, ಅವಳಿ ನಗರದ ಸಮಸ್ತ ಜಮಾತಿನ ಮುತವಲ್ಲಿಗಳು ನೇತೃತ್ವ ವಹಿಸಿದ್ದರು.
ಈ ವೇಳೆ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮುಖಂಡ ದೀಪಕ ಚಿಂಚೋರೆ ಹಾಗೂ ಸಮಾಜದ ಮುಖಂಡರು ಇದ್ದರು.