ಸಾರಾಂಶ
ಹೂವಿನಹಡಗಲಿ: ಗದಗ ಜಿಲ್ಲಾ ಮುಂಡರಗಿಯ ಜ.ಅನ್ನದಾನೀಶ್ವರ ಸಂಸ್ಥಾನ ಮಠದ ನೂತನ ಶಾಖಾ ಮಠವನ್ನು ಅಲ್ಲಿಪುರ-ರಾಜವಾಳ ಮಧ್ಯೆ ನಿರ್ಮಾಣ ಮಾಡಲಾಗಿದ್ದು, ಅ.30ರಂದು ಉದ್ಘಾಟನಾ ಸಮಾರಂಭವಿದೆ ಎಂದು ಹಿರೇಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಗಳ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಕ್ತರಲ್ಲಿ ಧಾರ್ಮಿಕ ಮನೋಭಾವನೆ, ಜತೆಗೆ ಶಿಕ್ಷಣ ಮತ್ತು ಸಂಸ್ಕಾರ ನೀಡಲು ಗುರುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂಡರಗಿಯ ಜ.ಅನ್ನದಾನೀಶ್ವರ ಸಂಸ್ಥಾನ ಮಠದ ನೂತನ ಶಾಖಾ ಮಠವನ್ನು ತಾಲೂಕಿನ ಅಲ್ಲಿಪುರ-ರಾಜವಾಳ ಮಧ್ಯೆದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ಹೇಳಿದರು.ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಭಕ್ತರು ಭಾಗವಹಿಸುವುದರಿಂದ, ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯಲು ಸಾಧ್ಯವಿದೆ. ಶರಣ ಸಂತರ ಹಿತ ವಚನಗಳು ಮತ್ತು ಅವರ ಆದರ್ಶಮಯ ಬದುಕು ಅರಿತು ಬದುಕಬೇಕೆಂದು, ತಮ್ಮ ಮಕ್ಕಳಿಗೆ ಶರಣರ ವಚನಗಳನ್ನು ಅಧ್ಯಾಯನ ಮಾಡಿಸಿದಾಗ, ಸಮಾಜದಲ್ಲಿ ಉತ್ತಮ ನಾಗರಿಕರಾಗುತ್ತಾರೆಂದು ಹೇಳಿದರು.
ಅ.30ರಂದು ಶಾಖಾಮಠ ಉದ್ಘಾಟನೆ:ಮುಂಡರಗಿ ಜ.ಡಾ.ನಾಡೋಜ ಅನ್ನದಾನೀಶ್ವರ ಶಿವಯೋಗಿ, ಉತ್ತರಾಧಿಕಾರಿ ಮಠದ ಡಾ.ಮಲ್ಲಿಕಾರ್ಜುನ ಶ್ರೀ, ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚೆನ್ನವೀರ ಶ್ರೀ, ಹಡಗಲಿ ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತವೀರ ಶ್ರೀ, ಸೊರಟೂರಿನ ಶಿವಯೋಗೀಶ್ವರ ಶ್ರೀ, ಗುಮ್ಮಗೋಳದ ಅಭಿನವ ಚಂದ್ರಶೇಖರ ಶ್ರೀ, ವಿರೂಪಾಪೂರದ ಮಧುಕೇಶ್ವರ ಶಿವಾಚಾರ್ಯರು, ಅಳವಂಡಿಯ ಮರುಳರಾಧ್ಯ ಶ್ರೀ, ಹೊಳಲು ಗ್ರಾಮದ ಚೆನ್ನಬಸವ ದೇವರು, ಕಂಪಸಾಗರದ ನಾಗಭೂಷಣ ಕೇಶಿಕರು, ಸಂಸದ ಈ.ತುಕಾರಾಂ, ಶಾಸಕರಾದ ಕೃಷ್ಣನಾಯ್ಕ, ಚಂದ್ರು ಲಮಾಣಿ, ಸಿಂಗಟಾಲೂರು ವೀರಭದ್ರೇಶ್ವರ ಟ್ರಸ್ಟಿ ಅಧ್ಯಕ್ಷ ಕರಿಬಸಪ್ಪ ಹಂಚಿನಾಳ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಹಿರೇಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಶ್ರೀ ಪ್ರವಚನ ನೀಡಲಿದ್ದಾರೆ ಎಂದು ಹೇಳಿದರು.ಧರ್ಮಸಭೆಯಲ್ಲಿ ಸೊರಟೂರಿನ ಶಿವಯೋಗೀಶ್ವರ ಶ್ರೀ, ಡಾ.ಮಹಾದೇ...... ಶ್ರೀ, ನಾಗಭೂಷಣ ಶ್ರೀ, ಕುಮಾರಸ್ವಾಮಿ ಶಾಸ್ತ್ರಿ, ತೋಟರ ಮಲ್ಲಿಕಾರ್ಜುನಪ್ಪ, ಗಡಕನಹಳ್ಳಿ ನಾಗಭೂಷಣ, ಯಳಮಾಲಿ ವಿರೂಪಾಕ್ಷಪ್ಪ, ಎಲ್.ಮಂಜುನಾಥ, ಗುಡಿ ಭೂಪಾಲಪ್ಪ ಇದ್ದರು. ಇದೇ ವೇಳೆ ಗ್ರಾಮದ ಗಣ್ಯರನ್ನು ಸನ್ಮಾನಿಸಲಾಯಿತು.
;Resize=(128,128))
;Resize=(128,128))
;Resize=(128,128))