ಪುತ್ತೂರು ನಗರಸಭೆಯ ಉಪಚುನಾವಣೆ: ಪುತ್ತಿಲ ಪರಿವಾರದಿಂದ ಇಬ್ಬರು ನಾಮಪತ್ರ

| Published : Dec 15 2023, 01:30 AM IST

ಪುತ್ತೂರು ನಗರಸಭೆಯ ಉಪಚುನಾವಣೆ: ಪುತ್ತಿಲ ಪರಿವಾರದಿಂದ ಇಬ್ಬರು ನಾಮಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ನಗರಸಭೆ ಉಪಚುನಾವಣೆ, ಪುತ್ತಿಲ ಪರಿವಾರದ ಇಬ್ಬರು ಕಣಕ್ಕೆ, ಅನ್ನಪೂರ್ಣ ಎಸ್‌.ಕೆ. ರಾವ್‌ ಮತ್ತು ಚಿಂತನ್‌ ನಾಮಪತ್ರ ಸಲ್ಲಿಸಿದರು

ಕನ್ನಡಪ್ರಭವಾರ್ತೆ ಪುತ್ತೂರುಪುತ್ತೂರು ನಗರಸಭೆಯ ಎರಡು ವಾರ್ಡ್‌ಗಳಿಗೆ ಡಿ.೨೭ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿಂತೆ ಗುರುವಾರ ಪುತ್ತಿಲ ಪರಿವಾರದಿಂದ ೨ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆ ನಡೆಯಲಿರುವ ವಾರ್ಡ್ ಸಂಖ್ಯೆ ೧ರ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ.ರಾವ್ ಮತ್ತು ವಾರ್ಡ್ ಸಂಖ್ಯೆ ೧೧ರ ಅಭ್ಯರ್ಥಿ ಚಿಂತನ್ ನಾಮಪತ್ರ ಸಲ್ಲಿಸಿದರು.

ಬೆಳಗ್ಗೆ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸಹಿತ ನೂರಾರು ಮಂದಿ ಕಾರ್ಯಕರ್ತರೊಂದಿಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ನಗರಸಭೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ವಿ.ಎಸ್. ಭಟ್ ಪ್ರಾರ್ಥನೆ ಮಾಡಿದರು. ಅಲ್ಲಿಂದ ಪುತ್ತಿಲ ಪರಿವಾರದ ಕಾರ್ಯಕರ್ತರೊಂದಿಗೆ ಅಭ್ಯರ್ಥಿಗಳಿಬ್ಬರು ಕಾಲ್ನಡಿಗಿಯಲ್ಲಿ ನಗರಸಭೆಗೆ ಆಗಮಿಸಿ ಚುನಾವಣಾ ಕಚೇರಿ ಕೊಠಡಿಯಲ್ಲಿ ಚುನಾವಣಾಧಿಕಾರಿ ನಗರಸಭೆ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ಮತ್ತು ಕ್ಷೇತ್ರ ಶಿಕ್ಷಣಾದಿಕಾರಿ ಲೋಕೇಶ್ ಎಸ್.ಆರ್. ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಜಾಲು, ನಗರ ಅಧ್ಯಕ್ಷ ಅನಿಲ ತೆಂಕಿಲ, ಭೀಮ್ ಭಟ್, ರವಿ ಕುಮಾರ್, ಕೃಷ್ಣಪ್ರಸಾದ್ ಶೆಟ್ಟಿ, ಪ್ರವೀಣ್ ರೈ ತಿಂಗಳಾಡಿ ಮತ್ತಿತ್ತರರು ಉಪಸ್ಥಿತರಿದ್ದರು.