ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ

| Published : May 02 2025, 11:45 PM IST

ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೌಳಿಯ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ದೇವಾಲಯದಲ್ಲಿ ಅಭಿಷೇಕ, ಗಣಪತಿ ಹೋಮ, ರುದ್ರ ಮಹಾಯಾಗ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ತುಲಾಭಾರ ಸೇವೆ, ವಾರ್ಷಿಕ ಭಕ್ತ ಸಮಾರಾಧನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆದ ಬಳಿಕ ಜರುಗಿದ ದೇವರ ನೃತ್ಯ ಬಲಿಯನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿ, ಹರಕೆ ಕಾಣಿಕೆಯನ್ನು ಒಪ್ಪಿಸಿದರು.

ನೂತನ ಸುತ್ತು ಪೌಳಿಯ ಉದ್ಘಾಟನೆ । ವಿವಿಧ ಧಾರ್ಮಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ನಾಪೋಕ್ಲು

ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನೆ ನಡೆಯಿತು.ಭಕ್ತ ಸಮಾರಾಧನೆ ಉತ್ಸವದ ಅಂಗವಾಗಿ ತುಲಾಭಾರ ಸೇವೆ, ವಿವಿಧ ಪೂಜಾ ವಿಧಿ ವಿಧಾನಗಳು, ದೇವರ ನೃತ್ಯ ಬಲಿ ಮತ್ತು ಅನ್ನ ಸಂತರ್ಪಣೆ ನೆರವೇರಿತು.

ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೌಳಿಯ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ದೇವಾಲಯದಲ್ಲಿ ಅಭಿಷೇಕ, ಗಣಪತಿ ಹೋಮ, ರುದ್ರ ಮಹಾಯಾಗ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ತುಲಾಭಾರ ಸೇವೆ, ವಾರ್ಷಿಕ ಭಕ್ತ ಸಮಾರಾಧನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆದ ಬಳಿಕ ಜರುಗಿದ ದೇವರ ನೃತ್ಯ ಬಲಿಯನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿ, ಹರಕೆ ಕಾಣಿಕೆಯನ್ನು ಒಪ್ಪಿಸಿದರು.

ಶಾಸಕ ಪೊನ್ನಣ್ಣಗೆ ಸನ್ಮಾನ:ಪೌಳಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ, ನಾಡಿನ ಭಕ್ತರ ದೇಣಿಗೆಯಿಂದ ಉತ್ತಮವಾದ ಪೌಳಿ ನಿರ್ಮಾಣಗೊಂಡಿದೆ. ಸಾರ್ವಜನಿಕರ ಸಹಕಾರದಿಂದ ದೇವಾಲಯ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದ ಅವರು, ಇಂತಹ ವಿಶೇಷ ಸಂದರ್ಭದಲ್ಲಿ ದೇವರ ಸನ್ನಿಧಿಗೆ ಆಗಮಿಸಿ ಇಲ್ಲಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ತನಗೆ ಅತ್ಯಂತ ಸಂತಸ ನೀಡಿದೆ ಎಂದರು.ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಶಾಸಕರು ದೇವಾಲಯದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ದೇವಾಲಯದ ಅಭಿವೃದ್ಧಿಗೆ ನೆರವು ನೀಡಿದ ಶಾಸಕರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಈಶ್ವರ ಇಗ್ಗುತ್ತಪ್ಪ ದೇವರು ಅನುಗ್ರಹಿಸುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಅವರನ್ನು ಭಕ್ತ ಜನ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಭಕ್ತರು ಮತ್ತು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾದರು.

ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು, ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ತೀತೀರ ರೋಷನ್ ಅಪ್ಪಚ್ಚು, ನಿವೃತ್ತ ಎಸ್‌ಪಿ ಚೇಕ್ ಪೂವಂಡ ಬಿ. ಪೂವಯ್ಯ, ಸಿಎನ್‌ಸಿ ಸಂಘಟನೆಯ ಎನ್.ಯು. ನಾಚಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಭಕ್ತ ಜನ ಸಂಘದ ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಉಪಾಧ್ಯಕ್ಷ ಮಂಡೀರ ದೇವಯ್ಯ, ಖಜಾಂಚಿ ಮನವಟ್ಟಿರ ಪಾಪು ಚಂಗಪ್ಪ, ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಬದಂಚೆಟ್ಟೀರ ನಾಣಯ್ಯ, ಕೈಯ್ಯಂದಿರ ರಮೇಶ್, ಭಕ್ತ ಜನ ಸಂಘದ ನಿರ್ದೇಶಕ, ಸದಸ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಊರಿನ, ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.2-ಎನ್ ಪಿ ಕೆ-1.ಪೌಳಿ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರಾರು, ಶಾಸಕರು ಆದ ಎ.ಎಸ್ ಪೊನ್ನಣ್ಣ ಮಾತನಾಡಿ.. 2-ಎನ್ ಪಿ ಕೆ-2ಮುಖ್ಯಮಂತ್ರಿಗಳ ಕಾನೂನು ಸಲಹೆಗಾರಾರು, ಶಾಸಕರು ಆದ ಎ.ಎಸ್ ಪೊನ್ನಣ್ಣ ಪೌಳಿ ಉದ್ಘಾಟನೆ ನೆರವೇರಿಸಿದರು.. 2-ಎನ್ ಪಿ ಕೆ-3.ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವದ ದೇವರ ನೃತ್ಯ ಬಲಿ.