ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಿಕ್ಯಾಬ್ ಸಂಸ್ಥೆಯಲ್ಲಿ ಅನುಭವಿಕ ಹಾಗೂ ತ್ಯಾಗಮಯಿ ಶಿಕ್ಷಕ ವೃಂದವಿದೆ ಮತ್ತು ದೂರದೃಷ್ಟಿ ಧ್ಯೇಯಗಳನ್ನು ಹೊಂದಿದ ಸಮರ್ಥ ಆಡಳಿತ ಮಂಡಳಿ ಇದೆ ಈ ಕಾರಣವಾಗಿ ಸಂಸ್ಥೆಯು ಪ್ರಗತಿದಾಯಕವಾಗಿ ಹೆಜ್ಜೆಗಳನ್ನು ಇಡುತ್ತಿದೆ ಎಂದು ಸಹಕಾರಿ ಸಂಘಗಳ ನಿವೃತ್ತ ಉಪನಿರ್ದೇಶಕ ಸಿ.ಎಸ್.ನಿಂಬಾಳ ಹೇಳಿದರು.ನಗರದ ಸಿಕ್ಯಾಬ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆಯಲ್ಲಿ ಮಾತನಾಡಿದರು.ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಮಾತನಾಡಿ, ವಿದ್ಯಾರ್ಥಿ ಶಿಕ್ಷಕ ಹಾಗೂ ಸಂಸ್ಥೆಯ ಪಾತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ನ್ಯಾಯವಾದಿ ನಾಗರಾಜ ಲಂಬು ಮಾತನಾಡಿ, ಸಿಕ್ಯಾಬ್ ಸಂಸ್ಥೆಯ ಬೆಳವಣಿಗೆಯಲ್ಲಿ ಅಧ್ಯಕ್ಷ ಎಸ್.ಎ.ಪುಣೇಕರ ಅವರ ಮಹತ್ತರ ಕೊಡುಗೆಯಿದೆ. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿ ಸಮುದಾಯ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ ಎಂದರು.ಸಂಸ್ಥೆಯ ಅಧ್ಯಕ್ಷ ಎಸ್.ಎ.ಪುಣೇಕರ ವಿದ್ಯಾರ್ಥಿ ಸಮುದಾಯಕ್ಕೆ ಶುಭಹಾರೈಸಿದರು. ವಿಷಯವಾರು 100ಕ್ಕೆ 100 ಫಲಿತಾಂಶ ಪಡೆದ ಉಪನ್ಯಾಸಕರಿಗೆ ನಗದು ಪುರಸ್ಕಾರ ನೀಡಲಾಯಿತು ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ವಿಭಾಗವಾರು, ಕಾಲೇಜುವಾರು ಆಯ್ಕೆಯಾದ ಅತ್ಯುತ್ತಮ ವಿದ್ಯಾರ್ಥಿಗಳಿಗೆ, ಪ್ರಮಾಣ ಪತ್ರ, ಸ್ಮರಣಫಲಕ ಹಾಗೂ ನಗದು ಪುರಸ್ಕಾರದೊಂದಿಗೆ ಸತ್ಕರಿಸಲಾಯಿತು.ಐ.ಎಸ್.ಆರ್.ಸಿ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕಿಯರಾದ ಎನ್.ಎ.ದಖನಿ, ಎಸ್.ಎಚ್.ಇನಾಮದಾರ ವಿಶೇಷವಾಗಿ ಗೌರವ ಸನ್ಮಾನ ಮಾಡಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕ ಸಲಾಹುದ್ದೀನ್ ಅಯೂಬಿ, ನಜೀಬ್ ಬಕ್ಷಿ, ರಾಜೇಶ ತೊರವಿ, ಎನ್.ಎಸ್.ಭೂಸನೂರ, ಪ್ರಾಚಾರ್ಯೆ ಸುಜಾತಾ ಕಟ್ಟಿಮನಿ, ಡಾ.ಎಸ್.ಆರ್.ಬ್ಯಾಕೋಡ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.