ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ

| Published : Sep 25 2025, 01:03 AM IST

ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್‌ನ ವಾರ್ಷಿಕ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಬಲಮುರಿ ಸ್ಪೋರ್ಟ್ಸ್‌ ಕ್ಲಬ್‌ ಇದರ 73ನೇ ವಾರ್ಷಿಕ ಮಹಾಸಭೆ ಕ್ಲಬ್‌ನ ಕಚೇರಿಯಲ್ಲಿ ಕ್ಲಬ್‌ನ ಅಧ್ಯಕ್ಷರಾದ ತೊತ್ತಿಯತಂಡ ಬನ್ಸಿ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಬಲಮುರಿ ಶ್ರೀ ಮಹಾದೇವ ಸ್ಪೋರ್ಟ್ಸ್ ಕ್ಲಬ್ ಇದರ 73ನೇ ವಾರ್ಷಿಕ ಮಹಾಸಭೆ ಕ್ಲಬ್ ನ ಕಚೇರಿಯಲ್ಲಿ ಕ್ಲಬ್ ನ ಅಧ್ಯಕ್ಷರಾದ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕ್ಲಬ್ ನ ವತಿಯಿಂದ ಆಯೋಜಿಸಲ್ಪಟ್ಟ ಹಾಗೂ ಇತರಡೆ ನಡೆಸಿದ ಕಾರ್ಯಕ್ರಮಗಳು ಕ್ರೀಡಾಕೂಟಗಳ ಬಗ್ಗೆ ಹಾಗೂ ಸಾಧಕ ಬಾಧಕಗಳ ಬಗ್ಗೆ ಕೂಲಂಕುಶ ಚರ್ಚೆಗಳು ನಡೆದು ಅನುಮೋದನೆ ಪಡೆದು ಕೊಂಡವು. ಮಹಾದೇವ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತರ ಕ್ರೀಡಾಕೂಟಗಳಲ್ಲಿ ಜಯಶೀಲರಾದ ತಂಡಗಳನ್ನು ಹಾಗೂ ವೈಯಕ್ತಿಕ ವಿಜೇತರನ್ನು ಅಭಿನಂದಿಸಲಾಯಿತು.

ಬರುವ ನವಂಬರ್ ತಿಂಗಳಿನಲ್ಲಿ ಕ್ಲಬ್ ವತಿಯಿಂದ ಜಿಲ್ಲಾಮಟ್ಟದಲ್ಲಿ ಮಹಿಳೆಯರಿಗೆ ತ್ರೋಬಾಲ್ ಪುರುಷರಿಗೆ ವಾಲಿಬಾಲ್ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸುವುದಾಗಿ ತೀರ್ಮಾನಿಸಲಾಯಿತು.

ನಿವೃತ್ತ ದೈಹಿಕ ಶಿಕ್ಷಕರಾದ ಚೈಯ್ಯಂಡ ರಘು ತಿಮ್ಮಯ್ಯ ಹಾಗೂ ಹಿರಿಯರಾದ ಬೊಳ್ಳಚೆಟ್ಟಿರ ಚೆಟ್ಟಿಚ್ಚ ಅವರು ಇದರ ಬಗ್ಗೆ ಸೂಕ್ತ ಮಾಹಿತಿ ಸಲಹೆ ಸೂಚನೆಯನ್ನು ನೀಡಿ ಮತ್ತೊಂದು ಸಭೆ ನಡೆಸಿ ಕ್ರೀಡಾಕೂಟ ನಡೆಸುವ ದಿನಾಂಕ ನಿಗದಿಪಡಿಸುವುದಾಗಿ ಸಭೆ ತೀರ್ಮಾನಿಸಿತು.ಈ ಸಂದರ್ಭ ಕ್ಲಬ್ ನಿಕಟ ಪೂರ್ವ ಅಧ್ಯಕ್ಷರಾದ ಬಿದ್ದಂಡ ಸಂದೀಪ್ ನಂಜಪ್ಪ, ಹಿರಿಯ ಕ್ರೀಡಾಪಟು ಬಾಕಿಲನ ವನಿತಾ ವಿಜಯ್, ಕಾರ್ಯದರ್ಶಿ ಬೊಳ್ಳಚಟ್ಟಿರ ಜಯಂತಿ, ಬೊಳ್ಳಚಟ್ಟಿರ ಮೈನಾ ಕಾಳಪ್ಪ , ಚೆಯ್ಯಂಡ ಕಸ್ತೂರಿ ತಿಮ್ಮಯ್ಯ, ತೊತ್ತಿಯಂಡ ಸುಪ್ರೀತಾ, ಆಂಗೀರ ಸಂತೋಷ್ ಮೇಡತನ ಶಾಂತಿ ಸೇರಿದಂತೆ ಕ್ಲಬ್ಬಿನ ಪದಾಧಿಕಾರಿಗಳು ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು. ಮೇಡತನ ರಶ್ಮಿ ಶಿವರಾಂ ಪ್ರಾರ್ಥಿಸಿ, ಉಪಾಧ್ಯಕ್ಷರಾದ ಗುಡ್ಡೇರ ಲಕ್ಷು ಸೋಮಣ್ಣ ಸ್ವಾಗತಿಸಿ, ಸಹ ಕಾರ್ಯದರ್ಶಿ ಬೊಳ್ಳಚಟ್ಟಿರ ಅಚ್ಚಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.