ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರು ಗ್ರಾಮದ ಎಲ್ಲ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡುವುದರಿಂದ ಭವಷ್ಯದಲ್ಲಿ ಬಂದೊದಗುವಂತ ಅಪಾಯದಿಂದ ಪಾರಾಗಬಹುದು ಎಂದು ಒಕ್ಕೂಟದ ನಿವೃತ್ತ ಅಧಿಕಾರಿ ದಿವಾಕರ್ ಹೇಳಿದರು.ಪಟ್ಟಣದ ಸಮೀಪದ ಬಸವನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಸುಗಳಿಗೆ ವಿಮೆ ಮಾಡಿಸುವುದರಿಂದ ಆಕಸ್ಮಿಕವಾಗಿ ರಾಸು ಅಸುನೀಗಿದರೆ ರೈತರಿಗೆ ಹಣ ಬರುತ್ತದೆ. ವಿಮೆ ಮಾಡಿದಂತ ರಾಸುಗಳು ಮೂರು ವರ್ಷದ ಅವಧಿವರೆಗೂ ರೈತನ ಬಳಿಯಲ್ಲೆ ಇರಬೇಕು, ಇಲ್ಲವಾದಲ್ಲಿ ಈ ವಿಮೆಗೆ ಅರ್ಹವಾಗುವುದಿಲ್ಲ ಎಂದು ಅವರು ತಿಳಿಸಿದರು.ನಂತರ ಅಧಿಕ ಹಾಲು ನೀಡಿದಂತ ರೈತರನ್ನು ಗೌರವಿಸಿ, ನೆನಪಿನ ಕಾಣಿಕೆ ನೀಡಲಾಯಿತು. ಆಡಳಿತ ಮಂಡಳಿಯಿಂದ ಒಕ್ಕೂಟದ ನಿವೃತ್ತ ಅಧಿಕಾರಿ ದಿವಾಕರ್ ಅವರನ್ನು ಸನ್ಮಾನಿಸಿತು. ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಮಹದೇವ, ಒಕ್ಕೂಟದ ನಿವೃತ್ತ ಅಧಿಕಾರಿ ದಿವಾಕರ್, ಬಸವರಾಜು, ಕುಮಾರ್, ಮಹದೇವ, ಮಂಚುಗೌಡ, ಬಿ.ಕೆ. ಶಿವಕುಮಾರ್, ಸುಬ್ಬೇಗೌಡ ದೇವರಾಜು, ಶಿವಣ್ಣ, ಶಿವಮ್ಮ, ವಿಜಯ, ಸುನೀತಾ, ವಿಸ್ತರಣಾಧಿಕಾರಿ ದಿವ್ಯಶ್ರೀ, ರಂಜಿತಾ, ಸಿಇಒ ಕೆ. ಸಿದ್ದರಾಜು, ಶ್ರೀನಿವಾಸ್, ಬಿ.ಕೆ. ಶಂಭುಗೌಡ, ಮಾಜಿ ಅಧ್ಯಕ್ಷ ಬಸುರಾಜು, ನಾಗರಾಜು, ರಾಜು, ನಿಂಗಪ್ಪ, ಜಯರಾಮು, ಬಸವರಾಜು, ಮರಿಸ್ವಾಮಿ , ಗಾಯಿತ್ರಿ, ರತ್ನಮ್ಮ, ಪ್ರೇಮ, ಸಿದ್ದು ಇದ್ದರು.--------------
;Resize=(128,128))
;Resize=(128,128))
;Resize=(128,128))