ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.14ರಂದು ಬೆಳಗ್ಗೆ 11.30ಕ್ಕೆ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ಷೇರುದಾರ ಸದಸ್ಯರು ಹಾಜರಾಗಿ ಸಲಹೆ, ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅಹ್ವಾನ ಪತ್ರಿಕೆ ತಲುಪಿಲ್ಲ ಎಂದು ಕೆಲ ಸದಸ್ಯರು ಆರೋಪಿಸುತ್ತಾರೆ. ಆದರೆ, ಪ್ರತಿಯೊಬ್ಬರಿಗೂ ಅಹ್ವಾನ ಪತ್ರಿಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಪ್ಪು ವಿಳಾಸ, ಮನೆ ಬದಲಾವಣೆ ಇನ್ನಿತರ ಕಾರಣಗಳಿಂದ ಅಹ್ವಾನ ಪತ್ರಿಕೆ ತಲುಪದ ಕಾರಣ ಮಾಧ್ಯಮ ಪ್ರಚಾರದ ಮೂಲಕ ಸಭೆಗೆ ಅಹ್ವಾನಿಸಲಾಗುತ್ತಿದೆ. ಎಲ್ಲರೂ ಇದನ್ನೇ ಅಹ್ವಾನ ಪತ್ರಿಕೆ ಎಂದು ಭಾವಿಸಿ ಮಹಾಸಭೆಗೆ ಹಾಜರಗಬೇಕೆಂದು ಕೋರಿದರು.ಸಂಘದ ಉಪಾಧ್ಯಕ್ಷ ಸಿ.ಆರ್.ರಮೇಶ್ ಮಾತನಾಡಿ, ಸಹಕಾರ ಇಲಾಖೆಯ ಕಾಯ್ದೆಯಂತೆ ಷೇರುದಾರ ಸದಸ್ಯರು ಕನಿಷ್ಠ ಎರಡು ವಾರ್ಷಿಕ ಮಹಾಸಭೆ ಹಾಜರಾಗಬೇಕು ಮತ್ತು ಸಂಘದಲ್ಲಿ ಹಣಕಾಸು ವ್ಯವಹಾರ ನಡೆಸಬೇಕು ಎಂಬ ನಿಯಮ ಇದೆ. ಆದರೆ, ಸರ್ಕಾರ ಈ ನಿಯಮವನ್ನು ಬದಲಾಯಿಸಲು ಕಾಯ್ದೆ ರೂಪಿಸಿದ್ದು, ಇದಕ್ಕೆ ರಾಜ್ಯಪಾಲರ ಅಂಕಿತ ದೊರೆತಿಲ್ಲ. ಹೀಗಾಗಿ ಎಲ್ಲರೂ ನಿಯಮಾನುಸಾರ ಸಭೆಗೆ ಹಾಜರಾಗಬೇಕು ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಬಿ.ಎಸ್.ಜಯರಾಮು, ಎನ್.ಭಾಸ್ಕರ್, ಹುಚ್ಚೇಗೌಡ, ಕಾರ್ಯದರ್ಶಿ ಹಿರೇಮರಳಿ ಪ್ರಕಾಶ್ ಇದ್ದರು.ಸೆ.14 ರಂದು ವಾರ್ಷಿಕ ಮಹಾಸಭೆಮಂಡ್ಯ: ನಗರ ರೈತ ಸಭಾಂಗಣದಲ್ಲಿ ಸೆ.14 ರಂದು ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್‌ನ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ನಡೆಯಲಿದೆ. ಸದಸ್ಯರು ಇದನ್ನೆ ಆಹ್ವಾನ ಪತ್ರಿಕೆ ಎಂದು ಪರಿಗಣಿಸಿ ಗುರುತಿನ ಚೀಟಿಯೊಂದಿಗೆ ಸಭೆಗೆ ಹಾಜರಾಗುವಂತೆ ಬ್ಯಾಂಕ್ ನ ಪ್ರಭಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಾರ್ಷಿಕ ಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಮಂಡ್ಯ: ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸೆ.22 ರಂದು ವಾರ್ಷಿಕ ಮಹಾಸಭೆ ನಡೆಯಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಗುವುದು. ಸೆ.16ರರೊಳಗೆ ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲೆ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಜೊತೆಗೆ ಸಂಘದ ಕಚೇರಿಗೆ ತಲುಪಿಸುವಂತೆ ಸಂಘದ ಸಿಇಒ ತಿಳಿಸಿದ್ದಾರೆ.