ಕುಶಾಲನಗರ: ಕೋಮು ಸೌಹಾರ್ದತೆಯ ಸಂಕೇತಕ್ಕೆ ಮಾದರಿಯಾಗಿರುವ ಮುಳ್ಳುಸೋಗೆ ಜನತಾ ಕಾಲೊನಿಯ ಗೌರಿ ಗಣೇಶ ದೇವಾಲಯದ 7ನೇ ವಾರ್ಷಿಕ ಪೂಜೋತ್ಸವ ನಡೆಯಿತು.ಎರಡು ದಿನಗಳ ಕಾಲ ನಡೆದ ಪೂಜೋತ್ಸವ ಅಂಗವಾಗಿ ಗೌರಿ ಗಣೇಶ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಹೋಮ, ಪೂಜೆ, ವಿಧಿ ವಿಧಾನಗಳು ಅರ್ಚಕ ಶ್ರೀಧರ್ ಭಟ್ ನೇತೃತ್ವದಲ್ಲಿ ಜರುಗಿತು.

ದೇವಾಲಯ ಮತ್ತು ಮಸೀದಿ‌ ಅಕ್ಕಪಕ್ಕದಲ್ಲಿ ಇರುವ ಕಾರಣ ಹಬ್ಬ ಹರಿದಿನಗಳ‌ ಸಂದರ್ಭ ಧರ್ಮಾತೀತವಾದ ಆಚರಣೆ ನಡೆಯುವುದು ವಿಶೇಷ. ಎರಡೂ ಸಮುದಾಯದವರು ಒಗ್ಗೂಡಿ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಸೌಹಾರ್ದತೆ ಸಾರುತ್ತಿರುವುದಾಗಿ ಟ್ರಸ್ಟ್‌ ಅಧ್ಯಕ್ಷೆ ಸುಚಿತ್ರಾ ತಿಮ್ಮಯ್ಯ ಹಾಗೂ ಬಿಲಾಲ್ ಜುಮ್ಮಾ ಮಸೀದಿಯ ಉಸ್ತಾದ್ ಅಬ್ದುಲ್ ರೆಹಮಾನ್ ಹೇಳಿದರು.

ದೇವಾಲಯ ವಾರ್ಷಿಕೋತ್ಸವ ಸಂದರ್ಭ ಮಸೀದಿಗೆ ವಿದ್ಯುತ್ ಅಲಂಕಾರ ಮಾಡಲಾಗುವುದು, ಅದೇ ರೀತಿ ಮಸೀದಿಯ ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಅಲಂಕಾರ ಮಾಡುವ ಮೂಲಕ, ಎರಡೂ ಧರ್ಮದವರು ಒಗ್ಗೂಡಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ ಎಂದು ಉದ್ಯಮಿಗಳಾದ ತಮ್ಮಯ್ಯ ಹಾಗೂ ಜಾವಿದ್ ಅಮೀರ್ ಹೇಳಿದರು.ಪೂಜೆಯ ಸಂದರ್ಭ ಟ್ರಸ್ಟ್ಉ ಪಾಧ್ಯಕ್ಷೆ ಜ್ಯೋತಿ, ಕಾರ್‍ಯದರ್ಶಿ ರಾಧಾ, ಖಜಾಂಚಿ ಚಂದ್ರಿಕಾ, ಸಂಚಾಲಕಿ ವಿಜಿ,

ನಿರ್ದೇಶಕರಾದ ರಮ್ಯ, ವಿನುತಾ, ರೇವತಿ, ತಮ್ಮಯ್ಯ, ನಾಗಪ್ರವೀಣ್, ಲೋಕೇಶ್, ಸಚಿನ್, ಸಂತೋಷ್, ಅಜಿತ್ ಮತ್ತಿತರರು ಇದ್ದರು.