ಕೋಟದ ಹಾಡಿಕೆರೆ ಶಾಂತಮೂರ್ತಿ ಶನೀಶ್ವರ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ

| Published : Feb 17 2025, 12:33 AM IST

ಸಾರಾಂಶ

ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ನೂತನ ಸಭಾಭವನ ಲೋಕಾರ್ಪಣಾ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ನೂತನ ಸಭಾಭವನ ಲೋಕಾರ್ಪಣಾ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಮುಂಜಾನೆ ಕನ್ನಿಕಾ ದುರ್ಗಾಪರಮೇಶ್ವರಿ, ಮಹಾಗಣಪತಿ, ಈಶ್ವರ, ನಂದಿ, ಆಂಜನೇಯ, ಕಾಕವಾಹನ, ನವಗ್ರಹಗಳಿಗೆ ಕಲಟಶಾಭಿಷೇಕ ಮಹಾಪೂಜೆ, ಚಂಡಿಕಾಹೋಮ, ಮಹಾಮಂಗಳಾರತಿ ಕಾರ್ಯಕ್ರಮಗಳು ವೇ.ಮೂ ಸಾಲಿಗ್ರಾಮ ಜನಾರ್ದನ ಅಡಿಗ ನೇತೃತ್ವದಲ್ಲಿ ಜರುಗಿತು.ಧಾರ್ಮಿಕ ವಿಧಿವಿಧಾನಗಳಲ್ಲಿ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ದಂಪತಿ ಭಾಗಿಯಾದರು. ಶಾಂತಮೂರ್ತಿ ಶ್ರೀ ಶನೀಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಾದ ರಾಮಾಮೃತ ಭಜನಾ ತಂಡ, ಪಂಚವರ್ಣ ಮಹಿಳಾ ಭಜನಾ ಮಂಡಳಿ, ವಿಠೋಭ ಭಜನಾ ಮಂಡಳಿ, ಶ್ರೇಯಾ ಖಾರ್ವಿ ಕುಂಚಗೂಡು ಸೇರಿದಂತೆ ವಿವಿಧ ಗಾಯನ ತಂಡಗಳಿಂದ ಗಾನಸುಧೆ ಜರುಗಿದವು.ಸಂಜೆ ಅಂತಾರಾಷ್ಟ್ರೀಯ ಯೋಗಪಟು ಬಾಲನಟಿ ಕಲಾಶ್ರೀ ತನ್ವಿತಾ ವಿ. ಇವರಿಂದ ಯೋಗಾಸನ ಭರತನಾಟ್ಯ, ಮನು ಹಂದಾಡಿ ಇವರಿಂದ ನಗೆಹಬ್ಬ, ರಾತ್ರಿ ೮ ರಿಂದ ಅರೆಹೊಳೆ ಪ್ರತಿಷ್ಠಾನದಿಂದ ನಂದಗೋಕುಲ ಪುಣ್ಯ ಕಥಾನಕ ನೃತ್ಯರೂಪಕ ಬಿಡುವನೇ ಬ್ರಹ್ಮಲಿಂಗ ಕಾರ್ಯಕ್ರಮಗಳು ನಡೆಯಿತು. ದೇಗುಲದ ಉತ್ಸವ ಸಮಿತಿ ಪ್ರಮುಖರಾದ ದಿನೇಶ್ ಗಾಣಿಗ ಕೋಟ ಸೇರಿದಂತೆ ಮತ್ತಿತರರು ಇದ್ದರು.