ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವರಿಗೆ ವಿವಿಧ ಬಗೆಯ ಪರಿಮಳ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಕೆಎಸ್‌ನ ಸರೋವರಕ್ಕೆ ಭಕ್ತರು ಮಹಿಳೆಯರು, ಕಿಶೋರಿಯರೊಂದಿಗೆ ಸಾಗಿದರು. ಐವರು ಕಿಶೋರಿಯರಿಗೆ ಗಂಗೆ ತುಂಬಿದ ಕಳಸವನ್ನು ಪೂಜಿಸಿ ತಲೆ ಮೇಲೆ ಹೊರಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವರ್ಷಕ್ಕೊಮ್ಮೆ ದೊಡ್ಡಮನೆ ಹಬ್ಬವಾಗಿ ಪೂಜಿಸುವ ರಾಚವಟಿ ವೀರಭದ್ರೇಶ್ವರನಿಗೆ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿದರು.

ಮಹಾಲಯ ಅಮಾವಾಸ್ಯೆ ಮುನ್ನ ಜರುಗುವ ಹಬ್ಬದ ಸಲುವಾಗಿ ಬೆಂಗಳೂರು, ಹಾಸನ, ಚಿಕ್ಕಮಗಳೂರು ಮತ್ತಿತರ ಪ್ರದೇಶಗಳ ದೇವರ ಒಕ್ಕಲಿನವರು ಆಗಮಿಸಿ ಪೂಜೆ ಸಲ್ಲಿಸಿದರು.

ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವರಿಗೆ ವಿವಿಧ ಬಗೆಯ ಪರಿಮಳ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಕೆಎಸ್‌ನ ಸರೋವರಕ್ಕೆ ಭಕ್ತರು ಮಹಿಳೆಯರು, ಕಿಶೋರಿಯರೊಂದಿಗೆ ಸಾಗಿದರು. ಐವರು ಕಿಶೋರಿಯರಿಗೆ ಗಂಗೆ ತುಂಬಿದ ಕಳಸವನ್ನು ಪೂಜಿಸಿ ತಲೆ ಮೇಲೆ ಹೊರಿಸಿದರು. ಮೆರವಣಿಗೆ ಮೂಲಕ ಪೂರ್ಣಕುಂಭದ ಗಂಗಾ ಕಳಸವನ್ನು ಮೂಲ ಗುಡಿಗೆ ಮಂಗಳವಾದ್ಯದೊಂದಿಗೆ ತರಲಾಯಿತು.

ಇವರೊಂದಿಗೆ ಅರ್ಚಕರು ಪ್ರಧಾನವಾಗಿ ಗಂಗೆ ತುಂಬಿದ ಕೊಡವನ್ನು ಶ್ರದ್ಧೆಯಿಂದ ತಂದು ಮೂಲ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಗರ್ಭಗುಡಿಯಲ್ಲಿರುವ ರಾಘವೇಂದ್ರಸ್ವಾಮಿ ಫಲಕಕ್ಕೆ ವಿಶೇಷವಾಗಿ ಪೂಜಾರಾಧನೆ ನೆರವೇರಿಸಲಾಯಿತು. ಭಕ್ತರು ಸರತಿಯಲ್ಲಿ ನಿಂತು ವಿಭೂತಿಧಾರಣೆ ಮಾಡಿಕೊಂಡು ಹಣ್ಣು, ಕಾಯಿ ಅರ್ಪಿಸಿ, ದೀಪ, ಧೂಪದಆರತಿ ಬೆಳಗಿದರು. ಇಷ್ಟಾರ್ಥ ಸಿದ್ಧಿಗಾಗಿ ಮೊರೆಇಟ್ಟರು.

ಪ್ರಧಾನ ಗಂಗೆ ತುಂಬಿದ ಕೊಡವನ್ನು ಗದ್ದುಗೆಯಲ್ಲಿ ಹಾಗೂ ಐದು ಕಳಸವನ್ನು ದೇವರಗುಡಿಯ ಪಕ್ಕದಲ್ಲಿ ಇಡಲಾಯಿತು. ದೇವರಿಗೆ ಬೆಲ್ಲದ ಅನ್ನ, ಮೊಸರನ್ನ, ಹಣ್ಣು, ಪಾಯಸ ಮತ್ತಿತರ ಪ್ರಿಯವಾದ ತಳಿಗೆಯ ನೈವೇದ್ಯ ಅರ್ಪಿಸಲಾಯಿತು.

ಜತೆಗೆ ಪಿತೃದೇವರನ್ನು ಸ್ಮರಿಸಲಾಯಿತು. ಬಂದ ಭಕ್ತರಿಗೆ ಮಹಾಪ್ರಸಾದವಾಗಿ ನೀಡಲಾಯಿತು. ಅನ್ನದಾಸೋಹವನ್ನು ಏರ್ಪಡಿಸಿ ವೀರಭದ್ರೇಶ್ವರ, ಭದ್ರಕಾಳಿಗೆ ಜೈಕಾರ ಹಾಕಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚಲುವರಾಜು ದಿಢೀರ್ ರಾಜೀನಾಮೆಮದ್ದೂರು:ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಚಲುವರಾಜು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ತೈಲೂರು ಗ್ರಾಮದ ಸಿ.ಚಲುವರಾಜು ಅವರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಮಾರ್ ಕೊಪ್ಪ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಪತ್ರದಲ್ಲಿ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಶಾಸಕ ಕೆ.ಎಂ.ಉದಯ್ ಅವರು ನನ್ನ ಸಂಘಟನೆ, ಪಕ್ಷ ನಿಷ್ಠೆ ಗುರುತಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಸಹಕರಿಸಿದ್ದರು. ಎರಡು ವರ್ಷಗಳ ಕಾಲ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಆದರೆ, ನನ್ನ ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಸಿ.ಚಲುವರಾಜು ಅವರು ನನ್ನನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ. 5 ವರ್ಷ ಅವಧಿ ತುಂಬಿದ ಅಧ್ಯಕ್ಷರ ಬದಲಾವಣೆ ಮಾಡುವಂತೆ ಕೆಪಿಸಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ, ಚಲುವರಾಜು ಅವರು 2 ವರ್ಷಗಳನ್ನು ಪೂರೈಸಿದ್ದಾರೆ. ಪಕ್ಷ ನಿಷ್ಠೆ, ಸಂಘಟನೆ, ಹೋರಾಟ ಸೇರಿದಂತೆ ಅವರ ಅಧಿಕಾರಾವಧಿಯನ್ನು ಮುಂದುವರೆಸುವಂತೆ ಮುಖಂಡರು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಹೀಗಾಗಿ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ್ ಕೊಪ್ಪ ಸ್ಪಷ್ಟಪಡಿಸಿದ್ದಾರೆ.