ಬಾಗಲಕೋಟೆಯ ವೈದ್ಯಕೀಯ ಹಾಗೂ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ಬಿವಿವಿ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬಿವಿವಿಎಸ್ ರಿಸರ್ಚ್ ಸೆಂಟರ್ ಫಾರ್ ಎಕ್ಸಲೆನ್ಸ್ (ಬಿಆರ್ಸಿಇ) ನೂತನ ಸಂಶೋಧನಾ ಕೇಂದ್ರವನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆಬಾಗಲಕೋಟೆಯ ವೈದ್ಯಕೀಯ ಹಾಗೂ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ಬಿವಿವಿ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಬಿವಿವಿಎಸ್ ರಿಸರ್ಚ್ ಸೆಂಟರ್ ಫಾರ್ ಎಕ್ಸಲೆನ್ಸ್ (ಬಿಆರ್ಸಿಇ) ನೂತನ ಸಂಶೋಧನಾ ಕೇಂದ್ರವನ್ನು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿದರು.
ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಧನ್ವಂತರಿ ಹೋಮ ಹಾಗೂ ನವಗ್ರಹ ಶಾಂತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂಶೋಧನಾ ಕೇಂದ್ರ ಕೇವಲ ಕಟ್ಟಡವಲ್ಲ, ಈ ಭಾಗದ ವೈದ್ಯಕೀಯ ಲೋಕದ ಭವಿಷ್ಯದ ಭರವಸೆಯಾಗಿದೆ. ಉತ್ತರ ಕರ್ನಾಟಕದ ಸಂಶೋಧನಾ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ. ಬಾಗಲಕೋಟೆಯಂತಹ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಸೌಲಭ್ಯ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.ಇನ್ನು ಮುಂದೆ ಸಂಶೋಧನೆಗಾಗಿ ಮಹಾನಗರಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಿಶ್ವದರ್ಜೆಯ ತಂತ್ರಜ್ಞಾನ ನಮ್ಮ ಅಂಗಳದಲ್ಲಿಯೇ ಲಭ್ಯವಾಗಿದೆ. ವೈದ್ಯರು, ಔಷಧ ವಿಜ್ಞಾನಿಗಳು ಹಾಗೂ ಸಂಶೋಧಕರು ಈ ಕೇಂದ್ರದ ಸದುಪಯೋಗ ಪಡೆದುಕೊಂಡು ಹೊಸ ಔಷಧಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವೈ.ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದೇ ನಮ್ಮ ಗುರಿಯಾಗಿದೆ. ಬಿಆರ್ಸಿಇ ಕೇಂದ್ರವು ಪಠ್ಯಕ್ರಮದ ಜತೆಗೆ ಪ್ರಾಯೋಗಿಕ ಜ್ಞಾನವನ್ನು ನೀಡುವ ಮಹತ್ವದ ವೇದಿಕೆಯಾಗಲಿದೆ. ಈ ಮೂಲಕ ಬಾಗಲಕೋಟೆಯನ್ನು ಸಂಶೋಧನಾ ಕ್ಷೇತ್ರದ ನಕ್ಷೆಯಲ್ಲಿ ಗುರುತಿಸುವ ಪ್ರಯತ್ನ ಮಾಡೋಣ ಎಂದರು.ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಬಿವಿವಿ ಸಂಘವೆಂದರೆ ಕೇವಲ ಶಿಕ್ಷಣ ಸಂಸ್ಥೆಯಲ್ಲ, ಅದು ಸಂಸ್ಕಾರದ ತವರಾಗಿದೆ. ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ದೂರದೃಷ್ಟಿ ಹಾಗೂ ಅವಿರತ ಪರಿಶ್ರಮದಿಂದ ಸಂಘವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವೈಜ್ಞಾನಿಕ ಸಂಶೋಧನೆಗೂ ಸಮಾನ ಮಹತ್ವ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಅವರ ಕನಸಿನ ಬಿಆರ್ಸಿಇ ಸಂಶೋಧನಾ ಕೇಂದ್ರ ಇಂದು ಸಾಕಾರಗೊಂಡಿದೆ ಎಂಬುದನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ, ಎಸ್.ಎಲ್.ಹೋಟಿ, ಅಶೋಕ ಕರಡಿ, ಮಹೇಶ ಕಕರೆಡ್ಡಿ, ಮಹಾಂತೇಶ ಶೆಟ್ಟರ, ಗುರುಬಸವ ಸೂಳಿಬಾವಿ, ಕುಮಾರ ಜಿಗಜಿನ್ನಿ, ಚಂದ್ರಶೇಖರ ಶೆಟ್ಟರ, ಸಂಜಯ ಪಲ್ಲೇದ, ಸಂಗಣ್ಣ ಶಿರೂರ. ರುದ್ರು ಅಕ್ಕಿಮರಡಿ, ಸಂಗಣ್ಣ ಜುಮನಾಳ, ಸಂಘದ ಗೌರವಾನ್ವಿತ ಸದಸ್ಯರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.