ಸಾರಾಂಶ
ಚನ್ನಕೇಶವನ ರಥೋತ್ಸವ ಬಳಿಕ ಮೂರು ದೇವಿಯರ ಜಾತ್ರೆ
ಬೇಲೂರು: ವಿಶ್ವ ವಿಖ್ಯಾತ ಬೇಲೂರು ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಶ್ರೀ ಅಂತರಘಟ್ಟಮ್ಮ ದೇವಿ, ದುರ್ಗಮ್ಮದೇವಿ, ಮಿಡಚಲಮ್ಮದೇವಿ, ಸೇರಿದಂತೆ ಮೂರು ದೇವತೆಗಳ ಕೆಂಡೋತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು.ಅಕ್ಕತಂಗಿಯರು ಎಂದು ಹೇಳುವ ಈ ಮೂರು ದೇವತೆಗಳ ಜಾತ್ರಾ ಮಹೋತ್ಸವಗಳು ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ಅವರ ರಥೋತ್ಸವ ಮುಗಿದ ನಂತರ ಒಂದು ವಾರಸಲ್ಲಿ ನಡೆಯಲಿದ್ದು ಮೊದಲು ಯಗಚಿ ನಾಲೆ ಬಳಿ ಇರುವ ಶ್ರೀ ಅಂತರಘಟ್ಟಮ್ಮ ದೇವಿಯ ಕೆಂಡೋತ್ಸವಕ್ಕೆ ಮಂಗಳವಾರ ಸಕಲ ಸಿದ್ದತೆಗೊಂಡು ಬೆಳಿಗ್ಗೆಯಿಂದಲೆ ಯಗಚಿ ನದಿಯಲ್ಲಿ ಗಂಗಾಪೂಜೆ ಮಾಡುವ ಮೂಲಕ ವಿವಿಧ ಪೂಜಾ ಕೈಂರ್ಯಗಳನ್ನು ನೆರವೇರಿಸಿ ಪುಷ್ಪ ಅಲಂಕಾರದೊಂದಿಗೆ ನೆಲ ಮಾಳಿಗೆಯಲ್ಲಿ ವಾದ್ಯಗಳ ಮೂಲಕ ದೇವಸ್ಥಾನದ ಬಳಿ ಕರೆತಂದು ದೇವಸ್ಥಾನದ ಆವರಣದಲ್ಲಿ ಹೊಂಡದಲ್ಲಿ ಸಿದ್ಧಪಡಿಸಲಾಗಿದ್ದ ಕೆಂಡವನ್ನು ತುಳಿಯುವ ಮೂಲಕ ಶ್ರೀ ಅಂತರಘಟ್ಟಮ್ಮ ದೇವಿಯ ಕೆಂಡೋತ್ಸವವವು ವಿಜೃಂಭಣೆಯಿಂದ ಜರುಗಿತು.
ಬೇಲೂರು ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಗಂಗಾಸ್ನಾನ ಮುಗಿಸಿ ಕೆಂಡ ತುಳಿಯುವ ಮೂಲಕ ಹರಕೆ ತೀರಿಸಲು ಮುಂದಾದರು. ನೆಹರು ಯುವಕರ ಸಂಘ ಸೇರಿದಂತೆ ಇದೇ ತರ ಭಕ್ತಾದಿಗಳಿಂದ ಸಿದ್ಧಪಡಿಸಿದ ಪ್ರಸಾದ ವಿನಿಯೋಗಿಸಲಾಯಿತು.ಕಾಂಗ್ರೆಸ್ ಮುಖಂಡ ಮತ್ತು ಸಮಾಜ ಸೇವಕ ಬಿ ಎಂ ಸಂತೋಷ್ ಮಾತನಾಡಿ, ಪೂರ್ವಿಕರ ಕಾಲದಿಂದಲೂ ಸುತ್ತಮುತ್ತಲ ಗ್ರಾಮಸ್ಥರು ಉತ್ತಮ ಮಳೆ ಬೆಳೆ ಆದರೆ ಮೊದಲ ಬೆಳೆಯನ್ನು ತಂದು ತಾಯಿಯ ಮಡಿಲು ತುಂಬಿಸುವ ಮೂಲಕ ಭಕ್ತಿ ಮರೆಯುತ್ತಾರೆ ಅದರಂತೆ ಪೂರ್ವಿಕ ಕಾಲದಿಂದಲೂ ತಮ್ಮ ಕುಟುಂಬವೂ ತಾಯಿಯ ಪೂಜೆಯನ್ನು ನೆರವೇರಿಸಿಕೊಂಡು ಬಂದಿದೆ ಎಂದು ಹೇಳಿದರು.
ಕಳೆದ ವರ್ಷ ನಡೆದ ಜಾತ್ರೆಯಲ್ಲಿ ಭಕ್ತನಾಗಿ ಬಂದು ತಾಯಿಯ ಬಳಿ ಹರಕೆ ಹೊತ್ತು ಹೋಗಿದ್ದೆ ಈ ಬಾರಿ ಶಾಸಕನಾಗಿ ತಾಯಿಯ ಕೆಂಡೋತ್ಸವಕ್ಕೆ ಬಂದಿದ್ದೇನೆ ಎಂದ ಎಂದು ಬೇಲೂರು ಶಾಸಕ ಎಚ್ ಕೆ ಸುರೇಶ್ ಹೇಳಿದರು.