ಮಡಿಕೇರಿ: ರಾಜಕೀಯ ಲಾಭಕ್ಕಾಗಿ ಸಮಸ್ತ ಹಿಂದೂಗಳ ಮೂಲವಾದ ಹಿಂದುತ್ವದ ಆಚರಣೆಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ. ಈ ರೀತಿಯ ಹಿಂದೂ ವಿರೋಧಿ ಚಟುವಟಿಗೆಗಳನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.
ಬಿರುನಾಣಿಯಲ್ಲಿ ಹಿಂದೂ ಸಂಗಮ ಕಾರ್‍ಯಕ್ರಮದ ಬಂಟಿಂಗ್ಸ್ ತೆರವುಗೊಳಿಸಿದ ಘಟನೆ ಸಂಬಂಧ ಮಾಧ್ಯಮ ಹೇಳಿಕೆ ನೀಡಿದ ಅವರು, ಇಡೀ ಸಮಾಜ ಇಂದು ಒಗ್ಗಟ್ಟು ಮತ್ತು ಹಿಂದುತ್ವದ ಉಳಿವಿಗಾಗಿ ಪಣ ತೊಟ್ಟಿರುವ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಇಂತ ಕಿಡಿಗೇಡಿತನ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಸಾಮರಸ್ಯದಿಂದಿದ್ದ ಕೊಡಗಿನ ಸಮುದಾಯಗಳನ್ನು ರಾಜಕೀಯ ಲಾಭಕ್ಕಾಗಿ ಒಡೆದ ಬಳಿಕ ಈಗ ಕೆಲವು ಪಟ್ಟಬದ್ದ ಹಿತಆಸಕ್ತಿಗಳು ಹಿಂದೂ ಸಮಾಜವನ್ನೇ ಕೆಣಕುವ ಕುಚೇಷ್ಟೆ ಖಂಡನೀಯ ಎಂದಿದ್ದಾರೆ.
ಎಲ್ಲ ಸಮುದಾಯದ ಶುದ್ಧ ಹೃದಯಗಳು ಇಂದು ಹಿಂದುತ್ವವದ ಉಳಿವಿಗಾಗಿ ಉತ್ತಮ ಸಮಾಜವನ್ನು ಕಟ್ಟಿ ನಮ್ಮೊಳಗಿರುವ ಕೆಟ್ಟ ಕ್ರಿಮಿಗಳ ವಿರುದ್ಧ ಎಲ್ಲರೂ ಒಂದಾಗಬೇಕೆಂದು ಹೇಳಿದ ಅವರು, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವ ವಹಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.