ಕೇಂದ್ರದಿಂದ ಕಾರ್ಮಿಕ ವಿರೋಧಿ ನೀತಿ

| Published : Jul 10 2025, 12:45 AM IST

ಸಾರಾಂಶ

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಜೆಸಿಟಿಯು- ಸಂಘ ಕಾರ್ಮಿಕ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಬುಧವಾರ ಜಯದೇವ ಸರ್ಕಲ್‌ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಿತು.

- ಮುಷ್ಕರದಲ್ಲಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಖಂಡನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಜೆಸಿಟಿಯು- ಸಂಘ ಕಾರ್ಮಿಕ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಬುಧವಾರ ಜಯದೇವ ಸರ್ಕಲ್‌ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಿತು.

ಅಖಿಲ ಭಾರತ ಬ್ಯಾಂಕ್ ನೌಕರರು, ಗ್ರಾಮೀಣ ಬ್ಯಾಂಕು ನೌಕರರ ಸಂಘಟನೆಗಳು, ವಿಮಾ ವಲಯದ ನೌಕರರ ಸಂಘಟನೆಗಳು ಸೇರಿದಂತೆ ಸಾವಿರಾರು ಕಾರ್ಮಿಕರು ಭಾಗವಹಿಸಿ ರೈತ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಎಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಕೇಂದ್ರ ಸರ್ಕಾರವು ಖಾಸಗಿ ಬಂಡವಾಳಶಾಹಿಗಳ ಹಿತಕ್ಕಾಗಿ ಕಾರ್ಮಿಕ ವಿರೋಧಿ, ರೈತ ವಿರೋಧಿ, ರಾಷ್ಟ್ರ ವಿರೋಧಿ ಮತ್ತು ಕಾರ್ಪೋರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆ. ಇದನ್ನು ವಿರೋಧಿಸಿ ದೇಶದಾದ್ಯಂತ 20 ಕೋಟಿಗೂ ಅಧಿಕ ರೈತ ಕಾರ್ಮಿಕರು ಬೀದಿಗಿಳಿದು ಮುಷ್ಕರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಇದು ರೈತ ಕಾರ್ಮಿಕ ಸಮುದಾಯಗಳ ಆಕ್ರೋಶಭರಿತ ಮುಷ್ಕರವಾಗಿದೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಕೂಡ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರದಲ್ಲಿ ಸೇರಿದೆ. 1969 ಜುಲೈ 19ರ ನಂತರದ ದಿನಗಳಲ್ಲಿ ದೇಶದ ರಾಷ್ಟ್ರೀಕೃತ ಬ್ಯಾಂಕಿಂಗ ವ್ಯವಸ್ಥೆ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಪ್ರತಿ ವರ್ಷವೂ ಸಾವಿರಾರು ಕೋಟಿ ರು.ಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತಿದೆ. ಆದರೂ ನೀತಿ ದೃಢವಾಗಿ ಬೆಳೆದಿರುವ ಈ ಘಟಕ ಕೇಂದ್ರ ಸರಕಾರವು ಖಾಸಗೀಕರಣದ ಮೂಲಕ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಮಾತನಾಡಿದರು. ಜೆಸಿಟಿಯು ಜಿಲ್ಲಾ ಸಂಚಾಲಕ ಅವರಗೆರೆ ಉಮೇಶ್, ಮಂಜುನಾಥ್ ಕೈದಾಳೆ, ಆನಂದರಾಜ್, ಜಬೀನಾ ಖಾನಂ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕೆ.ವಿಶ್ವನಾಥ್ ಬಿಲ್ಲವ, ಹೆಚ್.ಎಸ್.ತಿಪ್ಪೇಸ್ವಾಮಿ, ಎಂ.ಎಂ.ಸಿದ್ದಲಿಂಗಯ್ಯ, ಪರಶುರಾಮ, ಅಣ್ಣಪ್ಪ ನಂದಾ, ಶ್ರೀನಿವಾಸ ನಾಡಿಗ್, ಗ್ರಾಮೀಣ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಸಂಘಟಿತ ಮಧುಸೂದನ್, ಗ್ರಾಮೀಣ ಬ್ಯಾಂಕ್ ನಿವೃತ್ತ ಸಂಘದ ನಾಗರಾಜ್ ಎಸ್, ಕೆನರಾ ಬ್ಯಾಂಕ್ ನಿವೃತ್ತ ನೌಕರರು ಸಂಘದ ಎಚ್.ಸುಗೂರಪ್ಪ, ಎಸ್‌ಬಿಎಂ ನಿವೃತ್ತರ ಸಂಘದ ಅಜಿತ್ ಕುಮಾರ್ ನ್ಯಾಮತಿ, ಅಸಂಘಟಿತ ವಲಯದ ಎಸ್.ಎಸ್.ಮಲ್ಲಮ್ಮ, ಹೊಸಳ್ಳಿ ಮಂಜುಳಾ ಉಪ್ಪಾರ್, ರೇಣುಕ, ಮಾಯಕೊಂಡ ಗೀತಾ, ಕುಸುಮಾ, ವಿ.ಲಕ್ಷ್ಮಣ, ಸರೋಜಾ, ದಾದಾಪೀರ್, ಸುರೇಶ್ ಯರಗುಂಟೆ, ಐರಾಣಿ ಚಂದ್ರು ಅವರು ಹಾಜರಿದ್ದು ಮುಷ್ಕರವನ್ನು ಯಶಸ್ವಿಗೊಳಿಸಿದರು.

- - -

(ಮುಖ್ಯಾಂಶಗಳು) - ರಾಷ್ಟ್ರ ಬ್ಯಾಂಕುಗಳ ಖಾಸಗೀಕರಣ ಕೈಬಿಡಬೇಕು.

- ಎಲ್ಲ ಹಂತಗಳಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳಿಗೆ ನೇಮಕಾತಿಗೊಳಿಸಬೇಕು.

- ಬ್ಯಾಂಕ್ ನೌಕರರಿಗೆ ಹೇಳುವ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸಬೇಕು.

- ಜೀವ ಮತ್ತು ಸಾಮಾನ್ಯ ವಿಮಾ ಕಂಪನಿಗಳನ್ನು ಖಾಸಗೀಕರಣಗೊಳಿಸಿ, ಬಲವರ್ಧನೆಗೊಳಿಸಬೇಕು.

- - -

-9ಕೆಡಿವಿಜಿ43:

ದಾವಣಗೆರೆಯಲ್ಲಿ ಬುಧವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಿತು.