ಸಾರಾಂಶ
ಯಲಹಂಕ : ಇಲ್ಲಿಯ ಮಾರಸಂದ್ರ ಸಮೀಪವಿರುವ ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್ಮೆಂಟ್ ಆವರಣದಲ್ಲಿರುವ ಗಣೇಶ ಮಂದಿರವನ್ನು ತೆರವುಗೊಳಿಸಲು ಸಲಕರಣೆ ಸಮೇತ ಬಂದ ಅಧಿಕಾರಿಗಳನ್ನು ಅಪಾರ್ಟ್‌ಮೆಂಟ್ ನಿವಾಸಿಗಳು, ಮಾರಸಂದ್ರ ಸುತ್ತಮುತ್ತಲಿನ ಬಿಜೆಪಿ ಮುಖಂಡರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಗುರುವಾರ ತಡೆದರು.
ಈ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿರಿ ಉಂಟಾಗಿತ್ತು.ಇತ್ತೀಚೆಗೆ ವ್ಯಕ್ತಿಯೊಬ್ಬ ಪ್ರಾವಿಡೆಂಟ್ ವೆಲ್‌ವರ್ತೆ ಸಿಟಿ ಅಪಾರ್ಟ್‌ಮೆಂಟ್ ಆವರಣಲದಲ್ಲಿರುವ ಗಣೇಶ ಮಂದಿರವನ್ನು ತೆರವುಗೊಳಿಸುವಂತೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ನೀಡಿದ್ದನು.
ಈ ಹಿನ್ನೆಲೆಯಲ್ಲಿ ದೇಗುಲವನ್ನು ಕೆಡವಲು ಬಂದ ಅಧಿಕಾರಿಗಳನ್ನು ತೆಡೆದರು. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧಿಕಾರಿ ಮೀನಾಕ್ಷಿ, ದೇವಾಲಯ ತೆರವು ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಈ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವ ಭರವಸೆ ನೀಡಿದ ನಂತರ ವಾತಾವರಣ ತಿಳಿಯಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಆರ್. ತಿಮ್ಮೇಗೌಡ, ಹಾಲಿ ಉಪಾಧ್ಯಕ್ಷ ಕೆ.ಎಂ. ಅರಸೇಗೌಡ, ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ವಿದ್ಯಾಮಿಶ್ರಾ, ಪಿಡಿಒ ತಿಮ್ಮಯ್ಯ, ಬಿಜೆಪಿ ಮುಖಂಡರಾದ ಅಶೋಕ್, ಈಶ್ವರಾಚಾರ್, ಮುನಿದಾಸಪ್ಪ, ಪರಶುರಾಮ್, ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಮಾಜಿ ಅಧ್ಯಕ್ಷ ಸಂಜಯ್ ಸೇರಿದಂತೆ ನಿವಾಸಿಗಳ ಸಂಘದ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದೇವಾಲಯದ ಭಕ್ತಾದಿಗಳಿದ್ದರು.