ಸಾರಾಂಶ
ಕನ್ನಡ ಪ್ರಭ ವಾರ್ತೆ ಬ್ಯಾಕೋಡು.
ಆಧುನಿಕ ಸಮಾಜಕ್ಕೆ ಗೋಪಾಲಗೌಡರ ನೆನಪು ಮಾಡುವ ಕಾರ್ಯಕ್ರಮಕ್ಕೆ ನಿರಂತರವಾಗಿ ಗೇಣಿ ರೈತರು ಬರದೇ ಗೈರಾಗಿರುವುದು ವರ್ತಮಾನದ ದುರಂತ ಎಂದು ಹಿರಿಯ ಮುತ್ಸದಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.ಸಾಗರ ತಾಲ್ಲೂಕಿನ ತುಮರಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶನಿವಾರದಿಂದ 3 ದಿನಗಳ ಕಾಲ ನಡೆಯುವ ಹಾ.ಮ.ಭಟ್ಟ ನೆನಪಿನ ಹಬ್ಬದ ಪ್ರಯುಕ್ತ ಶಾಂತವೇರಿ ಗೋಪಾಲಗೌಡರ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಗತಕಾಲದಿಂದ ದೇಶವು ಖಾದಿ,ಖಾಕಿಯನ್ನು ಗೌರವಿಸಿವಿಸಿಕೊಂಡು ಬಂದಿದೆ. ನೂರು ವರ್ಷ ಕಳೆದರೂ ಅವರ ಚಿಂತನೆಗಳು ಇಲ್ಲಿನ ಅಭಿವ್ಯಕ್ತಿ ಬಳಗದ ಮೂಲಕ ಸಮಾಜದಲ್ಲಿ ಬೇರೂರಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಶಕುಂತಲಾ ಶೆಟ್ಟಿ ಹೇಳಿದರು.ಸಾಹಿತ್ಯ ಆಕಾಡೆಮಿಯು ಇಂತಹ ವಿಧ್ವತ್ ಸಭೆ ಆಯೋಜಿಸಿರುವುದು ಸಮಾಜಮುಖಿ ಚಿಂತನೆ ಕಾರ್ಯ, ಇಂತಹ ಕಾರ್ಯಕ್ರಮದ ಮೂಲಕ ತುಮರಿ ಗ್ರಾಮವನ್ನು ಇನ್ನಷ್ಟು ಜನಮುಖಿ ಚಿಂತನೆಯತ್ತ ತೆಗೆದುಕೊಂಡು ಹೋಗುತ್ತಿರುವುದು ಈ ಪ್ರದೇಶದ ವೈಶಿಷ್ಟ್ಯವಾಗಿದೆ. ಭಾರತವು ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ. ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಅಂತಿಮವಾಗಿ ಉಳಿದಿರುವುದು ಗೋಪಾಲಗೌಡರು ಮಾತ್ರ, ಸ್ವಂತಕ್ಕಾಗಿ ಏನೂ ಮಾಡದೆ ಸಮಾಜದ ಹಿತಕ್ಕಾಗಿ ಜೀವನ ನೆಡೆಸಿದವರು ಗೋಪಾಲಗೌಡರು, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಗೋಪಾಲಗೌಡರ ಕೊಡುಗೆ ಅಪಾರ ಆಧುನಿಕ ಮತದಾರರ ತಪ್ಪಿನಿಂದ ರಾಜಕೀಯ ವ್ಯವಸ್ಥೆ ಹಾಳಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಬೇಸರ ವ್ಯಕ್ತಪಡಿಸಿದರು.
ಇಂದಿನ ಕಾರ್ಯಕ್ರಮವು ಹಬ್ಬದ ಸಂಭ್ರಮವನ್ನು ಮೂಡಿಸಿ ಹೊಸತನದ ವಿಶಿಷ್ಟ ಚಿಂತನೆಯನ್ನು ಬಿತ್ತುವ ಆಶಯ ನಮ್ಮದು, ಕೋಮು ವರ್ಗೀಕರಣದ ಬಗ್ಗೆ ಸಮಾಜದಲ್ಲಿ ಗೋಷ್ಠಿಗಳು ಆಗಬೇಕಿದೆ. ಗ್ರಾಹಕ ಸಂಸ್ಕೃತಿ, ನಮ್ಮ ಅಂತರ್ ಶಕ್ತಿಯನ್ನು ಜಾಗೃತಗೊಳಿಸುವ ಶಕ್ತಿ 50 ವರ್ಷ ಕಳೆದರೂ ಕಳೆಗುಂದಿಲ್ಲ. ಗಾಂಧಿ ನೆನಪು, ದೇಶದ ನಡೆ-ನುಡಿಗಟ್ಟು ಬದಲಾದಾಗ ಸಂವಿಧಾನದ ಸೋಶಿಯಲಿಸಂ ಅನ್ನು ಬಿಟ್ಟಿದ್ದೇವೆ. ಸಮಾಜದಲ್ಲಿ ಕ್ರೀಯಾಶೀಲತೆ ಸದಾ ಇದ್ದರೆ ಮಾತ್ರ ಸಮ ಸಮಾಜ ನಿರ್ಮಾಣ.ವ ಸಾಧ್ಯ ಎಂದು ಬಹುಮುಖಿ ಚಿಂತಕ ಕೆ.ಪಿ.ಸುರೇಶ್ ಅಭಿಪ್ರಾಯಪಟ್ಟರು.ಕೇರಳದ ಶಾಸಕ ಪಿ.ಸಿ.ವಿಷ್ಣುನಾದ ಮಾತನಾಡಿ, ರಾಮ್ ಮನೋಹರ ಲೋಹಿಯಾ ಚಿಂತನೆ ಸಾಗರದಲ್ಲಿ ಮಾತ್ರ ಅಲ್ಲದೆ ರಾಜ್ಯದ ಹಲವೆಡೆ ಪರಿಣಾಮ ಬಿರಿದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಕಸ್ತೂರಿ ರಂಗನ್ ವರದಿ ರಾಜ್ಯ ಸರ್ಕಾರ ವಜಾ ಮಾಡಿದೆ. ಬಹುಕಾಲದಿಂದ ಹಳ್ಳಿಗಳಲ್ಲಿ ಜೀವನ ನಡೆಸುತ್ತಿರುವವರನ್ನು ಕಸ್ತೂರಿ ರಂಗನ್ ವರದಿ ಹೆಸರಿನಲ್ಲಿ ಹೆದರಿಸುವುದು ಸಲ್ಲದು ಎಂದು ಹೇಳಿದರು.ತುಮರಿ ಬುದ್ದಿವಂತರರ ನಾಡು, ಸಾಹಿತ್ಯ ಜ್ಞಾನ ಇರುವವರ ಪ್ರದೇಶವಾಗಿದೆ. ಲೋಹಿಯಾ ಆದರ್ಶ ಮೈಗೂಡಿಸಿ ಕೊಂಡಿದ್ದರು. ಗೋಪಾಲಗೌಡರ ರೀತಿ ನೈಜ ರಾಜಕೀಯ ಮಾಡುವುದು ಆಧುನಿಕ ಜೀವನದಲ್ಲಿ ಸಾಧ್ಯವಿಲ್ಲ. ಅವರ ರೀತಿ ಜನಪರ ರಾಜಕೀಯ ಮಾಡಿದರೆ ರಾಜ್ಯವಲ್ಲ ದೇಶದಲ್ಲೇ ಬದಲಾವಣೆ ತರಬಹುದು ಎಂದರು.
ಕಾರ್ಯಕ್ರಮದಲ್ಲಿ ಮಹಿಮಾ ಪಟೇಲ್, ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಸಾಹಿತ್ಯ ಆಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ ಅರ್ ಜಯಂತ್, ಕೇರಳ ಶಾಸಕ ವಿಷ್ಣುನಾದರಪಿ ಸಿ, ಸಾಹಿತ್ಯ ಆಕಾಡೆಮಿ ಚಂದ್ರಿಕಾ, ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಅಭಿವ್ಯಕ್ತಿ ಬಳಗದ ಕಾರ್ಯದರ್ಶಿ ಎಚ್.ಎಂ.ರಾಘವೇಂದ್ರ ಸರ್ವರನ್ನು ಸ್ವಾಗತಿಸಿದರು.