ಮಕ್ಕಳು ತಾವು ವಿದ್ಯೆಕಲಿತ ಶಾಲೆಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ಮತ್ತು ಹೆಮ್ಮತರುವಂತಹ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಮಕ್ಕಳು ತಾವು ವಿದ್ಯೆಕಲಿತ ಶಾಲೆಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ಮತ್ತು ಹೆಮ್ಮತರುವಂತಹ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ದಾನಿಗಳ ನೆರವಿನಿಂದ ನೀಡಲಾದ ಸ್ವೆಟರ್ ವಿತರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಶೈಕ್ಷಣಿಕ ವರ್ಷದಲ್ಲಿ ೩೦ ಸಾವಿರ ಸ್ವೆಟರ್‌ಗಳ ವಿತರಣೆ ಹಮ್ಮಿಕೊಂಡಿದ್ದು, ಮೊದಲ ಹಂತದಲ್ಲಿ ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡಿದ್ದೇವೆ. ನಂತರ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೂ ವಿತರಣೆ ಮಾಡುವ ಯೋಜನೆಯಿದೆ. ಮುಂದಿನ ದಿನಗಳಲ್ಲಿ ಬ್ಯಾಗ್‌ ವಿತರಿಸುವ ಯೋಜನೆಯಿದೆ ಎಂದರು.ಶನಿವಾರ ಅಪ್ಪಚ್ಚು ರಂಜನ್ ಅವರು ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆ ೭ನೇ ಹೊಸಕೋಟೆಯ ದೀಪ್ತಿ ಶಾಲೆಗೆ ಸ್ವೆಟರ್ ವಿತರಣೆ ಮಾಡಿದರು.

ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಕೊಡಗರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ನಿರುತ ಬೆಳ್ಳಿಯಪ್ಪ, ೭ನೇ ಹೊಸಕೋಟೆ ಗ್ರಾ.ಪಂ.ಇ.ಬಿ.ಜೋಸೆಫ್, ಉಪಾಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಮಂಡಲ ಅಧ್ಯಕ್ಷ ಗೌತಮ್, ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಸುಂಟಿಕೊಪ್ಪ ನಗರಾಧ್ಯಕ್ಷ ಧನುಕಾವೇರಪ್ಪ, ದಾಸಂಡ ರಮೇಶ್, ಸಹದೇವನ್, ಮುರುಗನ್ ಹೊಸಕೋಟೆ, ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೆಸಿಂತ ಜೋವಿಟಾ ವಾಸ್, ಕೊಡರಹಳ್ಳಿ ಶಾಂತಿನೀಕೇತನ ಶಾಲೆಯ ಮುಖ್ಯೋಪಾದ್ಯಾಯನಿ ಕವಿತ, ದೀಪ್ತಿ ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಟೆಸ್ಸಿ ಮ್ಯಾನುವೆಲ್ ಹಾಗೂ ಸಹ ಶಿಕ್ಷಕರು ಇದ್ದರು.