ಸಾರಾಂಶ
ವಾಲ್ಮೀಕಿ ಸಮಾಜದ 15 ಮಂದಿ ಶಾಸಕರು, 3 ಸಂಸದರು ಹಾಗೂ ಮೂವರು ಎಂಎಲ್‌ಸಿಗಳು ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ತತ್‌ಕ್ಷಣವೇ ರಾಜಣ್ಣ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಾವೇರಿ: ಹಿರಿಯ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ವಾಲ್ಮೀಕಿ ನಾಯಕ ಸಮಾಜದ ಹಕ್ಕುಗಳ ಸಂರಕ್ಷಣೆ ವೇದಿಕೆ ಜಿಲ್ಲಾ ಸಮಿತಿ ಹಾಗೂ ಹಾವೇರಿಯ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ವಾಲ್ಮೀಕಿ ಸಮಾಜದ ದಿಟ್ಟ ನಾಯಕರಲ್ಲೊಬ್ಬರಾದ ಕೆ.ಎನ್. ರಾಜಣ್ಣ ಮೀಸಲಾತಿ ಇಲ್ಲದ ಸಾಮಾನ್ಯ ವರ್ಗದ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಶೋಷಿತರೆ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ ರಾಜ್ಯದಲ್ಲಿ ಜನಪರ ಕಾರ್ಯ ಮಾಡುತ್ತಾ ಬಂದಿದ್ದಾರೆ.
ನೇರ ನಡೆ- ನುಡಿಯ ವ್ಯಕ್ತಿಯಾಗಿ ಯಾವುದೇ ಅನ್ಯಾಯವನ್ನು ಸಹಿಸಿಕೊಳ್ಳದ ಅಪ್ರತಿಮ ನಾಯಕರಾಗಿದ್ದು, ರಾಜ್ಯದಲ್ಲಿ ಮತಗಳ್ಳತನ ವಿಚಾರವಾಗಿ ಹೇಳಿದ ವಿಷಯವನ್ನು ಅನರ್ಥ ಮಾಡಿಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಸಂಪಟದಿಂದ ವಜಾಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವಲ್ಲಿ ವಾಲ್ಮೀಕಿ ನಾಯಕ ಜನಾಂಗದ ಕೊಡುಗೆ ಅಪಾರವಿದೆ. ವಾಲ್ಮೀಕಿ ಸಮಾಜದ 15 ಮಂದಿ ಶಾಸಕರು, 3 ಸಂಸದರು ಹಾಗೂ ಮೂವರು ಎಂಎಲ್‌ಸಿಗಳು ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ತತ್‌ಕ್ಷಣವೇ ರಾಜಣ್ಣ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ವಕೀಲರಾದ ಬಸವರಾಜ ಹಾದಿಮನಿ, ಸಿಐಟಿಯುಸಿ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದೀವಿಗೆಹಳ್ಳಿ, ಮಂಜುನಾಥ ಕಿತ್ತೂರ, ಮಂಜುನಾಥ ಮುಗದೂರ, ನೀಲಪ್ಪ ಹುಲಿಗೆಮ್ಮನವರ, ರಮೇಶ ಕರಿಭೀಮಣ್ಣವರ, ರೇಖಾ ಕರಿಭೀಮಣ್ಣನವರ ಇದ್ದರು.