ಹಾವೇರಿ ವಿಶ್ವವಿದ್ಯಾಲಯದ ವತಿಯಿಂದ ಶೀಘ್ರ ಪಠ್ಯಪುಸ್ತಕ ವಿತರಣೆಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ನಗರದ ಸರ್ಕಾರಿ ಪದವಿ ಕಾಲೇಜಿನ ಪ್ರಾ. ಡಾ. ರವಿಕುಮಾರ ನಾಯ್ಕ ಮೂಲಕ ಕುಲಪತಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ಹಾವೇರಿ ವಿಶ್ವವಿದ್ಯಾಲಯದ ವತಿಯಿಂದ ಶೀಘ್ರ ಪಠ್ಯಪುಸ್ತಕ ವಿತರಣೆಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ನಗರದ ಸರ್ಕಾರಿ ಪದವಿ ಕಾಲೇಜಿನ ಪ್ರಾ. ಡಾ. ರವಿಕುಮಾರ ನಾಯ್ಕ ಮೂಲಕ ಕುಲಪತಿಗೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ಮುಖಂಡ ಅರುಣ್ ನಾಗವತ್ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಪದವಿ ಕಾಲೇಜುಗಳಲ್ಲಿ ತರಗತಿಗಳೂ ಪ್ರಾರಂಭವಾಗಿ ಒಂದು ತಿಂಗಳು ಗತಿಸಿದರೂ ಇದುವರೆಗೂ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಪಠ್ಯಕ್ರಮ ಬಿಡುಗಡೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಪಠ್ಯಕ್ರಮ ವಿಳಂಬದಿಂದಾಗಿ ಉಪನ್ಯಾಸಕರು ಸಾಮಾನ್ಯ ವಿಷಯಗಳ ಬಗ್ಗೆ ಮಾತ್ರ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿಯ ಪ್ರಕಾರ ಇನ್ನೊಂದು ವಾರದ ನಂತರ ಕಿರುಪರೀಕ್ಷೆ ಪ್ರಾರಂಭವಾಗುತ್ತಿದೆ. ಪಿಡಿಎಫ್ ಮಾದರಿಯಲ್ಲೂ ಪಠ್ಯಕ್ರಮ ಒದಗಿಸಿಲ್ಲ. ಇದರಿಂದ ಅಭ್ಯಾಸಕ್ಕೆ ಹೊಡೆತ ಬೀಳುತ್ತದೆ. ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲ ಸಚಿವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಅಧಿಕೃತ ಪಠ್ಯಕ್ರಮ ಬಿಡುಗಡೆ ಮಾಡಿ ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ನಮ್ಮ ಹೋರಾಟಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಮಮತಾ ನಾಯ್ಕ್, ಪ್ರಿಯದರ್ಶಿನಿ ಕ್ಯಾತನ, ರೂಪಾ ಜೆ., ಗಾಯಿತ್ರಿ ನಗವತ್, ಚೈತ್ರಾ ಕಚ್ಚರಗಟ್ಟಿ, ರಮೇಶ ಲಮಾಣಿ, ವಿನಾಯಕ್ ಕೆ., ಪವನ್ ಜಾಡರ್, ಚೇತನ್ ಉಲ್ಲರ್, ಭರತ್ ಎನ್.ಎಲ್., ಸಾನಿಯಾ ಮತ್ತಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.