ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪಾಂಡವಪುರ ತಾಲೂಕು ದೊಡ್ಡಬ್ಯಾಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗೊಬ್ಬರ ಪೂರೈಸುವಂತೆ ಕೋರಿ ಅಧ್ಯಕ್ಷ ಟಿ.ಬಿ.ಧರ್ಮ ಹಾಗೂ ಸಂಘದ ಸದಸ್ಯರು ಕೆಎಸ್‌ಸಿಎಂಎಫ್ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.ನಮ್ಮ ಸಹಕಾರರ ಸಂಘದಲ್ಲಿ ಅವ್ಯವಹಾರ ನಡೆದು ಹಿಂದಿನ ಆಡಳಿತ ಮಂಡಳಿಯವರು ಸರಿಯಾದ ಸಮಯಕ್ಕೆ ಸೊಸೈಟಿಗೆ ಗೊಬ್ಬರ ತರಿಸದಿರುವುದರಿಂದ ಗ್ರಾಮದಲ್ಲಿ ಗೊಬ್ಬರದ ಅಭಾವ ಎದುರಾಗಿದೆ. ರೈತರು ನಮ್ಮ ಸೊಸೈಟಿಯಿಂದ ಯೂರಿಯಾ ಗೊಬ್ಬರವನ್ನು ಕೇಳುತ್ತಿದ್ದಾರೆ. ಗೊಬ್ಬರ ಇಲ್ಲ ಎಂದು ಹೇಳಿದರೆ ಸೊಸೈಟಿಗೆ ಬೀಗ ಹಾಕಿಕೊಂಡು ಹೋಗಿ ಎಂದು ಜಗಳವಾಡುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೂಡಲೇ ನಮ್ಮ ಸಹಕಾರ ಸಂಘಕ್ಕೆ ಗೊಬ್ಬರವನ್ನು ದೊರಕಿಸಿಕೊಡುವಂತೆ ಶಾಖಾ ವ್ಯವಸ್ಥಾಪಕ ವೈನ್.ತೇಜಸ್ ಅವರಿಗೆ ಮನವಿ ಸಲ್ಲಿಸಿದರು. ಸದಸ್ಯರಾದ ಸುರೇಶ, ಟಿ.ಸಿ.ಶಂಕರಗೌಡ, ಚಿಕ್ಕತಾಯಮ್ಮ, ನಿಂಗರಾಜು, ಟಿ.ಎ.ಕೃಷ್ಣ ಇತರರಿದ್ದರು.ಪ್ರಾಂಶುಪಾಲರ ಸಂಘಕ್ಕೆ ಕೆಂಪರಾಜು ನೂತನ ಅಧ್ಯಕ್ಷ
ಕೆ.ಆರ್.ಪೇಟೆ:ತಾಲೂಕು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೂತನ ಅಧ್ಯಕ್ಷರಾಗಿ ಬೂಕನಕೆರೆ ಕಾಲೇಜಿನ ಪ್ರಾಂಶುಪಾಲ ಕೆಂಪರಾಜು ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರು ಮತ್ತು ಖಜಾಂಚಿಗಳಾಗಿ ಪಟ್ಟಣದ ಕಾಲೇಜಿನ ಪ್ರಾಂಶುಪಾಲ ಹಾಗೂ ನೋಡಲ್ ಅಧಿಕಾರಿ ಕೆ.ಮೋಹನ್, ಉಪಾಧ್ಯಕ್ಷರಾಗಿ ಅಕ್ಕಿಹೆಬ್ಬಾಳು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಕಿಕ್ಕೇರಿ ಕೆ.ಪಿ.ಎಸ್ ಕಾಲೇಜಿನ ಪ್ರಾಂಶುಪಾಲ ಸಹದೇವ್, ಪ್ರಧಾನ ಕಾರ್ಯದರ್ಶಿಯಾಗಿ ಪಟ್ಟಣದ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ಸಹ ಕಾರ್ಯದರ್ಶಿಯಾಗಿ ಹರಿಹರಪುರ ಕಾಲೇಜಿನ ಪ್ರಾಂಶುಪಾಲ ಶಫಿ, ಸಹ ಕಾರ್ಯದರ್ಶಿಯಾಗಿ ಎಸ್.ಎಂ.ಲಿಂಗಪ್ಪ ಕಾಲೇಜಿನ ಪ್ರಾಂಶುಪಾಲ ರಘುಪತಿ, ಸಂಘಟನಾ ಕಾರ್ಯದರ್ಶಿಯಾಗಿ ಶೀಳನೆರೆ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ವಾಸು, ಸಹ ಸಂಘಟನಾ ಕಾರ್ಯದರ್ಶಿಯಾಗಿ ವಿಠಲಾಪುರ ಕಾಲೇಜಿನ ಪ್ರಾಂಶುಪಾಲ ಎಂ.ಮಲ್ಲಿಕಾರ್ಜುನ್ ಹಾಗೂ ಪತ್ರಿಕಾ ಕಾರ್ಯದರ್ಶಿಯಾಗಿ ತೆಂಡೇಕೆರೆ ಕಾಲೇಜಿನ ಪ್ರಾಂಶುಪಾಲ ಬಲ್ಲೇನಹಳ್ಳಿ ಮಂಜುನಾಥ್ ಆಯ್ಕೆಯಾಗಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.ಭಾರೀ ಮಳೆಗೆ ಸಂಪೂರ್ಣ ನೆಲಕ್ಕುರುಳಿದ ಮನೆ
ಕೆ.ಆರ್.ಪೇಟೆ:ಕಳೆದ 3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಹಿರಿಕಳಲೆ ಗ್ರಾಪಂ ವ್ಯಾಪ್ತಿಯ ಗಾಂಧಿನಗರದಲ್ಲಿ ಮನೆ ಸಂಪೂರ್ಣ ನೆಲಕ್ಕುರುಳಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯಿಂದ ಗ್ರಾಮದ ರುಕ್ಮಿಣಿ ಗಣೇಶಚಾರಿ ಕುಟುಂಬವು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಕುಟುಂಬಸ್ಥರು ರಾತ್ರಿಯಿಡಿ ಸುರಿಯುತ್ತಿದ್ದ ಮಳೆಯಲ್ಲಿಯೆ ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆ ಜಗುಲಿಗೆ ಹೋಗಿ ಕಾಲ ಕಳೆದಿದ್ದಾರೆ.ಮನೆ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದರಿಂದ ಈ ಕುಟುಂಬವು ಅಪಾಯದಿಂದ ಪಾರಾಗಿದೆ. ಘಟನೆ ನಡೆದ ಸ್ಥಳಕ್ಕೆ ರಾಜಸ್ವ ನಿರೀಕ್ಷರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿಯನ್ನು ನೀಡಿ ಮಹಜರು ನಡೆಸಿದ್ದಾರೆ.
ಪರಿಹಾರಕ್ಕೆ ಒತ್ತಾಯ:ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆಯು ಎಡೆ ಬಿಡದೆ ಸುರಿಯುತ್ತಿದೆ. ಗೋಡೆಗಳು ಒಣಗಲು ಕೂಡಾ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಣ್ಣಿನ ಗೋಡೆಯಿಂದ ಕಟ್ಟಿರುವ ಹೆಂಚಿನ ಮನೆಗಳು ಅಪಾಯವನ್ನು ಎದುರಿಸುತ್ತಿವೆ. ಇದರ ಬಗ್ಗೆ ಕಂದಾಯ ಇಲಾಖೆ ಮನೆ ಮನೆ ಸಮೀಕ್ಷೆ ನಡೆಸಿ ಎಚ್ಚರಿಕೆ ನೀಡಬೇಕು. ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.